Header Ads
Header Ads
Breaking News

ಮಂಗಳೂರು: ಯುವತಿ ಮೇಲೆ ಗ್ಯಾಂಗ್ ರೇಪ್ ಗೆ ಯತ್ನ

ಮಂಗಳೂರು: 7 ಮಂದಿ ಯುವಕರ ತಂಡವೊಂದು ಯುವತಿ ಮೇಲೆ ಗ್ಯಾಂಗ್ ರೇಪ್ ಗೆ ಯತ್ನಿಸಿದ ಘಟನೆ ಮಂಗಳೂರು ‌ಹೊರವಲಯದ ಬೆಂಗ್ರೆ ಕಡಲ ತೀರದಲ್ಲಿ ನಡೆದಿದೆ.

ಯುವಕನ ಜೊತೆಗೆ ವಿಹಾರಕ್ಕೆ ಬೀಚ್ ಗೆ ಬಂದಿದ್ದ ಬಂಟ್ವಾಳ ಮೂಲದ ಯುವತಿ ಮೇಲೆ ತಂಡವು ಅತ್ಯಾಚಾರಕ್ಕೆ ಯತ್ನಿಸಿತ್ತು ಎನ್ನಲಾಗಿದೆ. ವಾರದ ಹಿಂದೆ ನಡೆದಿದ್ದ ಪ್ರಕರಣ ಇದಾಗಿದ್ದು ತಡವಾಗಿ ಬೆಳಕಿಗೆ ಬಂದಿದೆ ಎನ್ನಲಾಗಿದೆ‌.

ಜೊತೆಗಿದ್ದ ಯುವಕನ‌ ಮೇಲೆ ಹಲ್ಲೆ ನಡೆಸಿ ಯುವತಿಯ ಅತ್ಯಾಚಾರಕ್ಕೆ ಯತ್ನಿಸಿತ್ತು. ಸಂತ್ರಸ್ತೆ ಯುವತಿ ತಡವಾಗಿ ದೂರು ನೀಡಿದ್ದು,ಮಂಗಳೂರಿನ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಅರೋಪಿಗಳ ಬಂಧನಕ್ಕೆ ಮಂಗಳೂರು ಪೊಲೀಸರು ಬಲೆ ಬೀಸಿದ್ದಾರೆ.

Related posts

Leave a Reply