Header Ads
Breaking News

ಮಂಗಳೂರು ಯುವವಾಹಿನಿ ಮಹಿಳಾ ಘಟಕದ ಪದಗ್ರಹಣ : ನೂತನ ಪದಾಧಿಕಾರಿಗಳಿಂದ ಪ್ರತಿಜ್ಞಾ ವಿಧಿ ಸ್ವೀಕಾರ

ವಿದ್ಯೆ, ಉದ್ಯೋಗ, ಸಂಪರ್ಕ ಎಂಬ ಧ್ಯೇಯದೊಂದಿಗೆ ಕಾರ್ಯ ನಿರ್ವಹಿಸುತ್ತಿರುವ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪರಸ್ಕೃತ ಮಂಗಳೂರು ಯುವವಾಹಿನಿ ಮಹಿಳಾ ಘಟಕದ ಪದಗ್ರಹಣ ಸಮಾರಂಭ ಮಂಗಳೂರಿನ ತುಳುಭವನದಲ್ಲಿ ಅದ್ಧೂರಿಯಾಗಿ ನಡೆಯಿತು.
 ಮಂಗಳೂರಿನ ಉರ್ವಸ್ಟೋರಿನ ತುಳುಭವನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಜಿಲ್ಲೆ 317 ಡಿ ಲಯನ್ಸ್ ಪ್ರಾಂತ್ಯಾಧ್ಯಕ್ಷೆ ಹಾಗೂ ಕುದ್ರೋಳಿ ನಾರಾಯಣಗುರು ಕಾಲೇಜಿನ ಉಪನ್ಯಾಸಕಿ ಶಕೀಲಾ ರಾಜ್ ಅವರು ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಬ್ರಹ್ಮಶ್ರೀ ನಾರಾಯಣಗುರುಗಳ ಆದರ್ಶಗಳನ್ನಿಟ್ಟುಕೊಂಡು ಮುನ್ನಡೆಯುತ್ತಿರುವ ಈ ಯುವವಾಹಿನಿ ಘಟಕ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಂದಿದೆ. ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯು ತನ್ನ ನಿಲುವುಗಳನ್ನು, ತನ್ನ ಅನುಭವಗಳನ್ನು ತನ್ನ ಜಾಣ್ಮೆಯನ್ನು ಉನ್ನತೀಕರಿಸಿ. ಮಹಿಳೆಯರಿಗೆ ಸ್ವಾವಲಂಬಿ ಜೀವನವನ್ನು ನಿರ್ಮಿಸುವಲ್ಲಿ ಯುವವಾಹಿನಿ ಘಟಕದ ಕಾರ್ಯ ಶ್ಲಾಘನೀಯ ಅಂತಾ ಮೆಚ್ಚುಗೆ ವ್ಯಕ್ತಪಡಿಸಿದರು.

ಬಳಿಕ ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾದ ಸುಧಾಕರ್ ಸುವರ್ಣ ಮಾತನಾಡಿ ಯುವವಾಹಿನಿ ಸಂಘಟನೆ ಮಂಗಳೂರಿನ ಹೆಮ್ಮೆಯ ಸಂಸ್ಥೆಯಾಗಿದೆ. ಯುವವಾಹಿನಿ ಎನ್ನುವ ಶಬ್ಧದಲ್ಲಿಯೇ ಒಂದು ಸಂಚಲನವಿದೆ. ಯುವಕರನ್ನು ಮುಂದಿಟ್ಟುಕೊಂಡು ಸಮಾಜಸೇವೆಯ ಪುಣ್ಯದ ಕಾರ್ಯದಲ್ಲಿ ಮುನ್ನುಗುತ್ತಿದೆ. ಯುವಕರನ್ನು ಒಗ್ಗೂಡಿಸಿದರೆ ಒಂದು ಸದೃಢ ದೇಶ ಕಟ್ಟಬಹುದು ಎನ್ನುವುದಕ್ಕೆ ಸ್ವಾಮಿ ವಿವೇಕಾನಂದರ ಮಾತಿನಂತೆ ಈ ಯುವಕ ಸಂಘಟನೆ ಎಂದು ಹೇಳಿದರು.

 ಇದೇ ವೇಳೆ ಹೊಸ ದಾಂಪತ್ಯ ಜೀವನಕ್ಕೆ ಕಾಲಿಡಲಿರುವ ಬಡ ಕುಟುಂಬದ ಹೆಣ್ಣುಕ್ಕಳಿಗೆ ಹಾಗೂ ಈ ಬಾರಿಯ ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ಸಮುದಾಯದ ವಿದ್ಯಾರ್ಥಿಗಳಿಗೆ ಧನ ಸಹಾಯ ನೀಡಿ ಗೌರವಿಸಲಾಯಿತು.

ಬಳಿಕ ಹೊಸದಾಗಿ ಚುನಾಯಿತರಾದ ಯುವವಾಹಿನಿ ಮಹಿಳಾ ಘಟಕದ ಪದಾಧಿಕಾರಿಗಳನ್ನು ಪರಿಚಯಿಸಿ. ಪ್ರತಿಜ್ಷಾ ವಿಧಿ ಬೋಧಿಸಿದರು.
ಈ ಸಂದರ್ಭ ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಜಯಂತ್ ನಡುಬೈಲ್, ದ.ಕ.ಜಿಲ್ಲಾ ಕ್ಯಾಟರಿಂಗ್ ಮಾಲಕರ ಅಸೋಸಿಯೇಶನ್‌ನ ಅಧ್ಯಕ್ಷರಾದ ಸತೀಶ್ ಬೋಳಾರ್, ಯುವವಾಹಿನಿ ಮಹಿಳಾ ಘಟಕದ ಸಲಹೆಗಾರರಾದ ಜಿತೇಂದ್ರ ಜೆ.ಸುವರ್ಣ, ಯುವವಾಹಿನಿ ಮಹಿಳಾ ಘಟಕದ ಅಧ್ಯಕ್ಷರಾದ ರಶ್ಮಿ ಸಿ.ಕರ್ಕೆರ, ಕಾರ್ಯದರ್ಶಿ ರವಿಕಲಾ ವೈ ಅಮೀನ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *