Header Ads
Breaking News

ಮಂಗಳೂರು ವನ್ ನೌಕರರಿಂದ ಧರಣಿ ನೌಕರರ ವೇತನ ನಿಗದಿ ಹಾಗೂ ಕೆಲಸಕ್ಕೆ ಮರು ಸೇರ್ಪಡೆಗೆ ಆಗ್ರಹ

ಕರ್ನಾಟಕ ವನ್ ನೌಕರರ ವೇತನ ನಿಗದಿ ಹಾಗೂ ಕೆಲಸಕ್ಕೆ ಮರು ಸೇರ್ಪಡೆಗೆ ಆಗ್ರಹಿಸಿ ಮಂಗಳೂರು ವನ್ ಕೇಂದ್ರದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.ದಕ್ಷಿಣ ಕನ್ನಡ ಜಿಲ್ಲೆಯ ಇಂಟಕ್ ಆಶ್ರಯದಲ್ಲಿ ನಡೆದ ಧರಣಿಯಲ್ಲಿ ಇಂಟಕ್ ರಾಜ್ಯ ಅಧ್ಯಕ್ಷ ರಾಕೇಶ್ ಮಲ್ಲಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ರಾಕೇಶ್ ಮಲ್ಲಿ ಅವರು, ಕಳೆದ ಕೆಲ ತಿಂಗಳ ಹಿಂದೆ ಇ.ಡಿ.ಸಿಎಸ್ ಮತ್ತು ಸಿಎಮ್‌ಎಸ್ ಸಂಸ್ಥೆಯವರು ನೌಕರರ ಬಗ್ಗೆ ನಿರ್ಲಕ್ಷ ಧೋರಣೆ ಹಾಗೂ ಕನಿಷ್ಟ ವೇತನ ಮತ್ತು ಕೆಲಸದಂದ ತೆಗೆದು ಹಾಕಿದ6 ಮಂದಿಯನ್ನು ಪುನರ್ ನೇಮಕ ಮಾಡಬೇಕೆಂದು ಒತ್ತಾಯಿಸಿದ್ದೇವೆ. ಆದರೂ ಈವರಗೆ ನೇಮಕ ಮಾಡಿಲ್ಲ. ಮುಂದಿನ ದಿನದಲ್ಲಿ ಉಗ್ರ ರೀತಿಯಲ್ಲಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಸಚಿವ ಯು.ಟಿ ಖಾದರ್, ಈ ಸಂಬಂಧವಾಗಿ ಜಿಲ್ಲಾಧಿಕಾರಿಯವರ ವರದಿಯನ್ನು ತರಿಸಿಕೊಂಡು ಮಂಗಳೂರು ವನ್ ಲೇಬರ್ ಮಿನಿಸ್ಟ್ರಿ ಅವರೊಂದಿಗೆ ಕುಳಿತು ಚರ್ಚೆ ಮಾಡಿ ಆದ ಅನ್ಯಾಯವನ್ನು ಸರಿಪಡಿಸಲಾಗುವುದು ಎಂದು ಎಂದು ಪ್ರತಿಭಟನಾ ಕಾರರಿಗೆ ಭರವಸೆ ನೀಡಿದರು.ಈ ಸಂದರ್ಭ ಕಾನೂನು ಸಲಹೆಗಾರ ದಿನಕರ ಶೆಟ್ಟಿ, ಜಿಲ್ಲಾ ಯುವ ಅಧ್ಯಕ್ಷ ದೀಕ್ಷಿತ್ ವಿ. ಶೆಟ್ಟಿ, ಬಾತೀಶ್, ಪ್ರವೀಣ್ ಶೆಟ್ಟಿ, ವಿವಿಯನ್, ಭುವನ್, ಶರೀಪ್ ಮತ್ತಿತರರು ಹಾಜರಿದ್ದರು.

Related posts

Leave a Reply