Header Ads
Header Ads
Header Ads
Header Ads
Header Ads
Header Ads
Breaking News

ಮಂಗಳೂರು ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳಿಂದ ಕಿರುಕುಳ ಪ್ರತಿಭಟನೆಗಿಳಿದ ಕೇರಳ ಪ್ರವಾಸಿ ಸಂಘಟನೆ

ಮಂಜೇಶ್ವರ: ಮಂಗಳೂರು ವಿಮಾನ ನಿಲ್ದಾಣದಲ್ಲಿ ಮಲಯಾಳಿ ಯುವಕರ ವಿರುದ್ಧ ಅಧಿಕಾರಿಗಳು ನಿರಂತರವಾಗಿ ನೀಡುತ್ತಿರುವ ಕಿರುಕುಳದ ವಿರುದ್ಧ ಕೇರಳ ಪ್ರವಾಸಿ ಸಂಘಟನೆ ಆಕ್ರೋಶ ವ್ಯಕ್ತಪಡಿಸಿದೆ.

ಮಲಯಾಳಿ ಪ್ರವಾಸಿಗಳ ವಿರುದ್ಧ ಹಿನಾದಾಯಕವಾದ ರೀತಿಯಲ್ಲಿ ಕಿರುಕುಳವನ್ನು ನೀಡುತ್ತಿರುವ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದಿದ್ದರು ಫಲಪ್ರದವಾಗಲಿಲ್ಲ. ಎಮಿಗ್ರೇಶನ್, ಕಸ್ಟಮ್ಸ್ ಸೇರಿದಂತೆ ಇತರ ವಿಭಾಗಗಳಲ್ಲಿ ಇತರ ಅಧಿಕಾರಿಗಳು ಕೂಡಾ ಮಲಯಾಳಿಗಳನ್ನು ಹುಡುಕಿ ಕಿರುಕುಳ ನೀಡುತ್ತಿರುವುದಾಗಿ ಕೇರಳ ಪ್ರವಾಸಿ ಸಂಘದ ಮಂಜೇಶ್ವರ ಏರಿಯಾ ಕಮಿಟಿ ಅಧ್ಯಕ್ಷರಾದ ಬಶೀರ್ ದೇವಕಾನ ಗಂಭೀರವಾಗಿ ಆರೋಪಿಸಿದ್ದಾರೆ.

ಕೆಲದಿನಗಳ ಹಿಂದೆ ಕಾಸರಗೋಡು ನಿವಾಸಿಗಳನ್ನು ತಪಾಸಣೆಯ ಹೆಸರಲ್ಲಿ ನಗ್ನರನ್ನಾಗಿ ಮಾಡಿಸಿ ಸುಮಾರು ಹತ್ತು ತಾಸುಗಳ ತನಕ ನಿರಂತರ ಕಿರುಕುಳ ನೀಡಿದ ಅಧಿಕಾರಿಗಳ ವಿರುದ್ಧ ಕ್ರಮ ಜರಗಿಸುವಂತೆಯೂ ವ್ಯೋಮಯಾನ ಸಚಿವ, ಸಂಸದ ಹಾಗೂ ಸಿಟಿ ಕಮೀಷನರಿಗೆ ದೂರುಗಳನ್ನು ನೀಡುವುದಾಗಿಯೂ ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಬಿಎ ಬಶೀರ್ , ಖಾದರ್ ಬಿ. ಎ. ಅಹ್ಮದುಲ್ ಅಮೀರ್ , ಸದಾನಂದ ಕೋರಿಕ್ಕಾರ್ ಮೊದಲಾದವರು ಹಾಜರಿದ್ದರು.a

Related posts

Leave a Reply

Your email address will not be published. Required fields are marked *