Header Ads
Header Ads
Breaking News

ಮಂಗಳೂರು ವಿವಿಯಲ್ಲಿ ಮೆಗಾ ಫುಡ್ ಫೆಸ್ಟ್-2019

ಕೊಣಾಜೆ: ಮಂಗಳೂರು ವಿಶ್ವವಿದ್ಯಾನಿಲಯದ ಎಂಬಿಎ ವಿಭಾಗದ ಟೂರಿಸಂ ಹಾಗೂ ಟ್ರಾವೆಲ್ ಮ್ಯಾನೇಜ್‌ಮೆಂಟ್‌ನ ವಿದ್ಯಾರ್ಥಿಗಳ ನೇತೃತ್ವದಲ್ಲಿ ಆಹಾರೋತ್ಸವವು ಮಂಗಳೂರು ವಿಶ್ವವಿದ್ಯಾಲಯ ಮಂಗಳಾ ಸಭಾಂಗಣದಲ್ಲಿ ನಡೆಯಿತು.

ಮಂಗಳೂರು ವಿಶ್ವವಿದ್ಯಾಲಯದಲ್ಲಿ ಇದೇ ಪ್ರಥಮ ಬಾರಿ ಇಂತಹ ಆಹಾರೋತ್ಸವವನ್ನು ಎಂಬಿಎ ವಿಭಾಗದ ಟೂರಿಸಂ ಹಾಗೂ ಟ್ರಾವೆಲ್ ಮ್ಯಾನೇಜ್‌ಮೆಂಟ್‌ನ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದರು. ವಿವಿಯ ಪ್ರಭಾರ ಕುಲಪತಿ ಪ್ರೊ.ಈಶ್ವರ್ ಪಿ ಅವರು ಆಹಾರೋತ್ಸವಕ್ಕೆ ಚಾಲನೆ ನೀಡಿ ವಿದ್ಯಾರ್ಥಿಗಳ ನೂತನ ಪ್ರಯತ್ನಕ್ಕೆ ಶುಭ ಹಾರೈಸಿದರು.

ಆಹಾರೋತ್ಸವದಲ್ಲಿ ವಿವಿಧ ಬಗೆಯ ಖಾದ್ಯಗಳು

ಪ್ರಮುಖವಾಗಿ ಸಸ್ಯಹಾರಿ ವಿಭಾಗದಲ್ಲಿ ಸೇಮೆ, ಅಪ್ಪಮ್, ನೀರುದೋಸೆ, ಗೀರೈಸ್, ಪನೀರ್ ಮಸಾಲ, ಗೋಬಿ ಮಂಚೂರಿ, ಬೇಬಿ ಕಾರ್ನ್ ಚಿಲ್ಲಿ, ವೆಜ್ ಬಿರಿಯಾನಿ, ವೆಜ್ ತಾಲಿ, ಕ್ಯಾರೆಟ್ ಹಲ್ವ, ಗುಲಾಬ್ ಜಾಮೂನ್, ಕಬ್ಬಿನ ಜ್ಯೂಸ್ ಹಾಗೂ ಮಾಂಸಾಹಾರ ವಿಭಾಗದಲ್ಲಿ ಚಿಕನ್ ಮಸಾಲ, ಚಿಕನ್ ಚಿಲ್ಲಿ, ಚಿಕನ್ ಗೀರೋಸ್ಟ್, ಟಿಕ್ಕ, ಫಿಶ್ ಕರಿ, ಬರ್ಗರ್, ಚಿಕನ್ ಬಿರಿಯಾನಿ, ಅಲ್ಪಂ, ಚಿಕನ್ ತಾಲಿ ಸೇರಿದಂತೆ ಹಲವು ಬಗೆಯ ರುಚಿಕರ ಖಾದ್ಯಗಳನ್ನು ಆಹಾರೋತ್ಸವದಲ್ಲಿ ಏರ್ಪಾಟು ಮಾಡಲಾಗಿತ್ತು.

ಅಲ್ಲದೆ ಆಹಾರೋತ್ಸವದಲ್ಲಿ ಭಾಗವಹಿಸಿದ ಎಲ್ಲರಿಗೂ ಅನುಕೂಲವಾಗುವಂತೆ ಆಯಾಯ ತಿಂಡಿಗಳ ಹೆಸರು ಮಾತ್ರ ದರದ ಪಟ್ಟಿಯನ್ನು ಹಾಕಲಾಗಿತ್ತು ಮಾತ್ರವಲ್ಲದೆ ಸಸ್ಯಹಾರಿ ಹಾಗೂ ಮಾಂಸಹಾರಿ ವಿಭಾಗಗಳಿಗೆ ಪ್ರತ್ಯೇಕವಾಗಿ ಆಸನದ ವ್ಯವಸೈಯನ್ನು ಮಾಡಲಾಗಿತ್ತು. ಅಲ್ಲದೆ ಭಾಗವಹಿಸಿದ್ದ ವಿದ್ಯಾರ್ಥಿಗಳು ತಮಗೆ ಇಷ್ಟವಾದ ತಿಂಡಿ ತಿನಸುಗಳ ಸವಿಯುಂಡರು.

ನಿರೀಕ್ಷೆಗಿಂತ ಹೆಚ್ಚಿನ ಜನರು: ಎಂಬಿಎ ವಿಭಾಗದ ಟೂರಿಸಂ ಹಾಗೂ ಟ್ರಾವೆಲ್ ಮ್ಯಾನೇಜ್‌ಮೆಂಟ್‌ನ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಆಹಾರೋತ್ಸವದಲ್ಲಿ ನಿರೀಕ್ಷೆಗಿಂತಲೂ ಹೆಚ್ಚಿನ ಜನರು ಭಾಗವಹಿಸಿದರು. 600 ರಿಂದ 700 ಜನರಿಗೆ ತಿಂಡಿಯ ಏರ್ಪಾಟು ಮಾಡಲಾಗಿತ್ತು. ಆದರೆ ಸಾವಿರಕ್ಕಿಂತಲೂ ಹೆಚ್ಚಿನ ಜನರು ಭಾಗವಹಿಸಿದ್ದರಿಂದ ಆಹಾರ ಸವಿಯಲು ಬಂದವರು ಕೆಲಹೊತ್ತು ಕಾಯಬೇಕಾಯಿತು. ಒಟ್ಟಿನಲ್ಲಿ ಆಹಾರ ಉತ್ಸವು ವಿಭಾಗದ ಪ್ರಾದ್ಯಾಪಕರು ಹಾಗೂ ವಿದ್ಯಾರ್ಥಿಗಳ ಪ್ರಯತ್ನದಿಂದ ಯಶಸ್ವಿಯಾಗಿ ನಡೆಯಿತು.

Related posts

Leave a Reply