
ಮಂಗಳೂರು ವಿಶ್ವ ವಿದ್ಯಾನಿಲಯದ ಅಂತರ್ ಕಾಲೇಜ್ ಕ್ರೀಡಾಕೂಟ ಹಾಗೂ ಭಿನ್ನ ಸಾಮರ್ಥ್ಯದ ಮಕ್ಕಳ ಕ್ರೀಡಾ ಕೂಟ ಮಂಗಳೂರಿನ ಮಂಗಳ ಕ್ರೀಡಾಂಗಣದಲ್ಲಿ ನಡೆಯಿತು.
ಕ್ರೀಡಾಕೂಟಕ್ಕೆ ವಿಶ್ವ ವಿದ್ಯಾನಿಲಯ ಉಪಕುಲಪತಿ ಪ್ರೊಪೆಸರ್ ಕೆ.ಬೈರಪ್ಪ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು, ಕ್ರೀಡಾಕೂಟದಲ್ಲಿ ಉತ್ತಮ ವ್ಯಕ್ತಿತ್ವ ಬೆಳವಣಿಗೆ ಹೊಂದಲು ಸಾಧ್ಯ ಎಂದು ಹೇಳಿದರು.
ಸಭಾ ಕಾರ್ಯಕ್ರಮದಲ್ಲಿ ಕ್ರೀಡಾ ಇಲಾಖೆಯ ಸಹ ನಿರ್ದೇಶಕ ಪ್ರದೀಪ್ ಡಿಸೋಜ, ಮೋಹಿತ್ ಸುವರ್ಣ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಿನ್ಸಿಪಾಲ್ ಪ್ರೋ. ರಾಜಶೇಖರ ಹೆಬ್ಬಾರ್,ದೈಹಿಕ ಶಿಕ್ಷಕ ಮಹಮ್ಮದ್ ರಫೀಕ್,ಕಾಲೇಜು ಶಿಕ್ಷಕ ರಕ್ಷಕ ಸಂಘದ ಜೆ.ಪಾಂಡುರಂಗ ನಾಯಕ್ ಉಪಸ್ಥಿತರಿದ್ದರು. ಕ್ರೀಡಾಕೂಟದಲ್ಲಿ ಭಿನ್ನ ಸಾಮರ್ಥ್ಯ ಶಾಲೆಯ ವಿದ್ಯಾರ್ಥಿಗಳು,ಸೇರಿದಂತೆ ಓಟ್ಟು 60 ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.