Header Ads
Breaking News

ಮಂಗಳೂರು ವಿಶ್ವವಿದ್ಯಾನಿಲಯದ ಆವರಣದಲ್ಲಿ ಕೊರೋನಾ ಜಾಗೃತಿ ಕುರಿತಾದ ವಿಶೇಷ ಬೀದಿ ನಾಟಕ

ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗ, ಮಂಗಳೂರು ವಿಶ್ವವಿದ್ಯಾನಿಲಯ, ಮಂಗಳಗಂಗೋತ್ರಿ ಮತು  ಶಕ್ತಿ ವಿದ್ಯಾ ಸಂಸ್ಥೆ, ಶಕ್ತಿನಗರ ಇದರ ಜಂಟಿ ಆಶ್ರಯದಲ್ಲಿ ಕೊರೋನಾ ಜಾಗೃತಿ ಕುರಿತಾದ ವಿಶೇಷ ಬೀದಿ ನಾಟಕ ವಿಶ್ವವಿದ್ಯಾನಿಲಯದ ಆವರಣದಲ್ಲಿ ನಡೆಯಿತು.

ಗೌರವಾನ್ವಿತ ಕುಲಪತಿ ಪ್ರೊ. ಪಿ. ಯಸ್ ಯಡಪಡಿತ್ತಾಯ ರವರು ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ವಿದ್ಯುಕ್ತವಾಗಿ ನೆರವೇರಿಸಿ “ಆಧುನಿಕ ಯಾಂತ್ರೀಕೃತ ಜಗತ್ತಿನಲ್ಲಿ ಬದುಕಿನ ಮೌಲ್ಯವನ್ನು ನಮಗೆ ಕೊರೋನಾ ಕಲಿಸಿ ಕೊಟ್ಟಿದೆ” ಎಂದು ಅಭಿಪ್ರಾಯ ಪಟ್ಟರು.
ವಿಶ್ವವಿದ್ಯಾನಿಲಯದ ಕುಲಸಚಿವರಾದ ಶ್ರೀ ಕೆ. ರಾಜು ಮೊಗವೀರರವರು ಮುಖ್ಯ ಅಥಿತಿಗಳಾಗಿ, ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗದ ಅಧ್ಯಕ್ಷರಾದ ಡಾ. ಪೌಲ್ ಜಿ ಅಕ್ವಿನಾಸ್ ರವರು ಕಾರ್ಯಕ್ರಮದ ಅಧ್ಯಕ್ಷರಾಗಿ, ಸಮಾಜ ಕಾರ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಮೋಹನ್ ಯಸ್ ಸಿಂಘೆ ಕಾರ್ಯಕ್ರಮದ ಸಂಯೋಜಕರಾಗಿ ಉಪಸ್ಥಿತರಿದ್ದರು. ಡಾ. ಕೆ. ಸೀ ನಾಯಕ್ ಆಡಳಿತ ಅಧಿಕಾರಿ, ಶಕ್ತಿ ವಿದ್ಯಾ ಸಂಸ್ಥೆ, ಶ್ರೀ ರಮೇಶ್ ಕೆ, ಸಿಂಡಿಕೇಟ್ ಸದಸ್ಯರು, ಮಂಗಳೂರು ವಿಶ್ವವಿದ್ಯಾನಿಲಯ, ಶ್ರೀ ಪ್ರಖ್ಯಾತ್ ರೈ, ಶಕ್ತಿ ವಿದ್ಯಾ ಸಂಸ್ಥೆಯ ಅಭಿವೃದ್ಧಿ ಅಧಿಕಾರಿ, ಶ್ರೀಮತಿ ವಿದ್ಯಾ ಕಾಮತ್ ಜಿ, ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲರು, ಶ್ರೀಮತಿ ನೀಮಾ ಸಕ್ಸೇನಾ ಶಕ್ತಿ ಪೂರ್ವ ಪ್ರಾಥಮಿಕ ಶಾಲೆಯ ಸಂಯೋಜನಾ ಅಧಿಕಾರಿ, ಶ್ರೀ ಸೀನ ಶೆಟ್ಟಿ, ಜನಶಿಕ್ಷಣ ಟ್ರಸ್ಟ್‍ನ ಸ್ಥಾಪಕರು, ಶ್ರೀ ಅಚ್ಯುತ ಗಟ್ಟಿ ಕೊಣಾಜೆ ಗ್ರಾಮ ಪಂಚಾಯತ್‍ನ ಸದಸ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ನಂತರ ಶಕ್ತಿ ಸಂಸ್ಥೆಯ ಸಿಬ್ಬಂದಿವರ್ಗದಿಂದ ಬೀದಿ ನಾಟಕ ನಡೆಯಿತು.

Related posts

Leave a Reply

Your email address will not be published. Required fields are marked *