Header Ads
Header Ads
Breaking News

ಮಂಗಳೂರು ವಿ.ವಿ. ದಕ್ಷಿಣವಲಯ ಸಾಂಸ್ಕೃತಿಕ ಸ್ಪರ್ಧೆ: ಆಳ್ವಾಸ್‌ನಿಂದ 27 ವಿದ್ಯಾರ್ಥಿಗಳ ಆಯ್ಕೆ

ಮಂಗಳೂರು ವಿ.ವಿ. ವ್ಯಾಪ್ತಿಯ ಅಂತರ್‌ಕಾಲೇಜು ಸಾಂಸ್ಕೃತಿಕ ಸ್ಪರ್ಧೆಯ ಐದು ವಿವಿಧ ಕ್ಷೇತ್ರಗಳಾದ ಲಲಿತಕಲೆ, ಸಾಹಿತ್ಯ, ಸಂಗೀತ, ನೃತ್ಯ ಮತ್ತು ರಂಗೋತ್ಸವದಲ್ಲಿ ಆಳ್ವಾಸ್ ಕಾಲೇಜು, ಮೂಡುಬಿದಿರೆ ಈ ಎಲ್ಲಾ ಐದು ವಿಭಾಗಗಳಲ್ಲಿ ಸಮಗ್ರ ಪ್ರಶಸ್ತಿಯನ್ನು ಈಗಾಗಲೇ ಗಳಿಸಿದ್ದು ಅಕ್ಟೋಬರ್ ತಿಂಗಳ7 ರಿಂದ 11ರವರೆಗೆ ಶ್ರೀ ಪದ್ಮಾವತಿ ಮಹಿಳಾ ವಿಶ್ವವಿದ್ಯಾಲಯ, ತಿರುಪತಿಇಲ್ಲಿ ನಡೆಯುವ ದಕ್ಷಿಣ ವಲಯಅಂತರ್ ವಿಶ್ವವಿದ್ಯಾನಿಲಯ ಸಾಂಸ್ಕೃತಿಕ ಉತ್ಸವಕೆ ಆಯ್ಕೆಯಾಗಿರುತ್ತದೆ.

ಕಳೆದ 14 ವರ್ಷಗಳಿಂದ ಆಳ್ವಾಸ್ ಕಾಲೇಜುಸಮಗ್ರ ಪ್ರಶಸ್ತಿಯನ್ನುಪಡೆದುಕೊಂಡಿದ್ದು 7ಬಾರಿದಕ್ಷಿಣ ವಲಯ ಮತ್ತು೪ ಬಾರಿರಾಷ್ಟ್ರಮಟ್ಟಕ್ಕೆಆಯ್ಕೆಯಾಗಿ ಪ್ರಶಸ್ತಿಯನ್ನು ಪಡೆದುಕೊಂಡಿರುತ್ತದೆ.ಈ ಬಾರಿ ಏಕಾಂಕ ನಾಟಕ, ಕಿರುಪ್ರಹಸನ, ಶಾಸ್ತ್ರೀಯ ಸಂಗೀತ, ಕೊಲಾಜ್, ಆವೆಮಣ್ಣಿನ ಮಾದರಿ, ಚಿತ್ರಕಲೆ, ವ್ಯಂಗ್ಯಚಿತ್ರ ಮತ್ತು ಸಮೂಹ ಜಾನಪದ ನೃತ್ಯ ಈ ವಿಭಾಗಗಳಲ್ಲಿ ಆಳ್ವಾಸ್‌ನ ಒಟ್ಟು27 ವಿದ್ಯಾರ್ಥಿಗಳು ಮಂಗಳೂರು ವಿ.ವಿ.ಯನ್ನು ಪ್ರತಿನಿಧಿಸಲಿ ಇದೊಂದು ದಾಖಲೆಯಾಗಿದೆ. ಸಂಸ್ಥೆಯ ಅಧ್ಯಕ್ಷರಾದ ಡಾ| ಎಂ. ಮೋಹನ ಆಳ್ವರವರು ಅಭಿನಂದನೆ ಸಲ್ಲಿಸಿದ್ದಾರೆ.

Related posts

Leave a Reply