Header Ads
Header Ads
Breaking News

ಮಂಗಳೂರು ಸೆಂಟ್ರಲ್‌ನಲ್ಲಿ ಮೂರು ದಿನಗಳ ಉಚಿತ ಶಾಪಿಂಗ್

ಮಂಗಳೂರಿನ ಫಾರಂ ಫಿಜಾ ಮಾಲ್‌ನಲ್ಲಿ ಮಂಗಳೂರು ಸೆಂಟ್ರಲ್ ಬ್ರಾಂಡ್ ನ್ಯೂ ಮಳಿಗೆಯಲ್ಲಿ ಮೂರು ದಿನಗಳ ಶಾಪಿಂಗ್ ಮೇಳದ ಉದ್ಘಾಟನೆ ನಡೆಯಿತು.
ಮಂಗಳೂರಿನ ಪಾಂಡೇಶ್ವರದಲ್ಲಿರುವ ಫಾರಂ ಪಿಜಾ ಮಾಲ್‌ನಲ್ಲಿರುವ ಮಂಗಳೂರು ಸೆಂಟ್ರಲ್‌ನಲ್ಲಿ ಮೂರು ದಿನಗಳ ಶಾಪಿಂಗ್ ಮೇಳವನ್ನು ಆಯೋಜಿಸಿದೆ. ಅಗಸ್ಟ್ ೩ರಿಂದ ೬ರ ವರೆಗೆ ಮಂಗಳೂರಿನ ಜನತೆ ರಿಯಾಯಿತಿ ದರದಲ್ಲಿ ವಸ್ತುಗಳನ್ನು ಖರೀದಿಸಲು ಅವಕಾಶವನ್ನು ಕಲ್ಪಿಸಿದೆ. ಇದರ ಉದ್ಘಾಟನೆಯನ್ನು ವಿಸ್ಮಯ್ ವಿನಾಯಕ್ ರಿಬ್ಬನ್ ಕತ್ತರಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಉಚಿತ ಶಾಪಿಂಗ್‌ಗೆ ಶುಭ ಹಾರೈಸಿದರು.

ಅನಂತರ ಹರಿಣಾಕ್ಷಿ ಶೆಟ್ಟಿ ಮಾತನಾಡಿ ಮಂಗಳೂರು ನಗರದ ಮಹಿಳೆಯರಿಗಾಗಿ ಮೂರು ದಿನಗಳ ಉಚಿತ ಶಾಪಿಂಗ್ ಆಯೋಜಿಸಿದ್ದಾರೆ ಎಂದು ಹೇಳಿದರು.
ಮೂರು ದಿನಗಳ ಉಚಿತ ಶಾಪಿಂಗ್‌ನಲ್ಲಿ ೬೦೦೦ ಸಾವಿರ ರೂ ವಸ್ತುಗಳ ಖರೀದಿ ಮಾಡಿ ಕೇವಲ ೩೦೦೦ ಸಾವಿರ ರೂ ಪಾವತಿಸುವ ಅವಕಾಶವನ್ನು ಮಂಗಳೂರು ಸೆಂಟ್ರಲ್‌ನವರು ನೀಡಿದ್ದರೆ. ಈ ಉಚಿತ ಶಾಪಿಂಗ್‌ನ ಪ್ರಯೋಜನವನ್ನು ಪ್ರತಿಯೊಬ್ಬರು ಪಡೆದುಕೊಳ್ಳಿ. ಈ ಸಂದರ್ಭ ಅಬ್‌ಜಲ್, ಸ್ಟೋರ್ ಜನರಲ್ ಮೆನೇಜರ್ ಯಶ್‌ಪಾಲ್, ಮೇನೇಜರ್ ಸೋನಾಲಿ ಶೆಟ್ಟಿ ಉಪಸ್ಥಿತರಿದ್ದರು.
ವರದಿ: ನಾಗರಾಜ್ ಮಂಗಳೂರು

Related posts

Leave a Reply