Header Ads
Breaking News

ಒಡಿಯೂರು ಶ್ರೀಗಳ ಷಷ್ಠ್ಯಬ್ಧ ಸಂಭ್ರಮ-2021: ಕೋವಿಡ್ ಮತ್ತು ವ್ಯಸನ ಜಾಗೃತಿ ಅಭಿಯಾನ

ಒಡಿಯೂರು ಶ್ರೀಗಳ ಷಷ್ಠ್ಯಬ್ಧ ಸಂಭ್ರಮದ ಅಂಗವಾಗಿ ಜ್ಞಾನವಾಹಿನಿಯಾಗಿ ಹರಿದು ಬರಲಿರುವ ಶಿಕ್ಷಣ ವಿಭಾಗದ ಸರಣಿ ಕಾರ್ಯಕ್ರಮದ ಅಂಗವಾಗಿ ಕೋವಿಡ್ ಮತ್ತು ವ್ಯಸನ ಜಾಗೃತಿ ಅಭಿಯಾನವು ಪಿವಿಎಸ್ ಸೆಂಟನರಿ ಬಿಲ್ಡಿಂಗ್‍ನಲ್ಲಿ ನಡೆಯಿತು.


ಕಾರ್ಯಕ್ರಮವನ್ನು ಒಡಿಯೂರು ಗುರುದೇವದತ್ತ ಸಂಸ್ಥಾನದ ಪರಮಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿ ಮತ್ತು ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಎನ್. ಶಶಿಕುಮಾರ್ ಅವರು ದೀಪ ಪ್ರಜ್ವಲಿಸಿ ಉದ್ಘಾಟಿಸಿದರು.ಕಾರ್ಯಕ್ರಮದಲ್ಲಿ ಒಡಿಯೂರು ಗುರುದೇವದತ್ತ ಸಂಸ್ಥಾನದ ಪರಮಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿ ಅವರು ಆಶೀರ್ವಚನ ನೀಡಿದರು.


ಆನಂತರ ಮಂಗಳೂರು ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ಅವರು ಮಾತನಾಡಿ, ಕೋವಿಡ್ ಮಹಾಮಾರಿ ಎಲ್ಲರಿಗೂ ಬಹುದೊಡ್ಡ ಪಾಠವನ್ನು ಕಲಿಸಿದೆ. ನಾವುಗಳು ಇನ್ನು ಹೆಚ್ಚು ಸೂಕ್ಷ್ಮವಾಗಿ ಬದುಕುವ ಅವಶ್ಯಕತೆ ಇದೆ. ಕೋವಿಡ್ ಲಸಿಕೆಯನ್ನು ಯಾವುದೇ ಹಿಂಜರಿಕೆ ಇಲ್ಲದೆ ಪ್ರತಿಯೊಬ್ಬರು ತೆಗೆದುಕೊಳ್ಳಬೇಕು. ಮಂಗಳೂರು ನಗರ ಹೃದಯ ವೈಶಲ್ಯತೆಯನ್ನು ಹೊಂದಿದ ನಗರವಾಗಿದೆ. ವ್ಯಸನದ ಬಗ್ಗೆ ಯುವ ಸಮುದಾಯ ಬಹಳಷ್ಟು ಎಚ್ಚರಿಕೆಯಿಂದ ಇರಬೇಕು ಎಂದು ಸಲಹೆ ನೀಡಿದರು.


ಇದೇ ವೇಳೆ ಕೆ.ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿಯ ವೈದ್ಯಕೀಯ ಸಲಹೆಗಾರ ಪ್ರೊ. ಡಾ. ಮಹಾಬಲೇಶ್ ಶೆಟ್ಟಿ ಅವರು ಜಾಗೃತಿ ಉಪನ್ಯಾಸವನ್ನು ನೀಡಿದರು.


ಈ ಸಂದರ್ಭದಲ್ಲಿ ಒಡಿಯೂರು ಶ್ರೀಗಳ ಷಷ್ಠ್ಯಬ್ಧ ಸಮಿತಿಯ ಅಧ್ಯಕ್ಷರಾದ ಪುಷ್ಪರಾಜ್ ಜೈನ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಕಾರ್ಯಕ್ರಮದಲ್ಲಿ ಬ್ರಿಲಿಯಂಟ್ ಶಿಕ್ಷಣ ಸಂಸ್ಥೆಯ ಸಂಯೋಜಕರಾದ ಅವೀಕ್ಷಿತ್ ರೈ, ಬ್ರಿಲಿಯಂಟ್ ಕಾಲೇಜಿನ ಚೇರ್‍ಮೆನ್ ಸಿಎ ರಾಮ್ ಮೋಹನ್ ರೈ, ಕಾಲೇಜಿನ ಪ್ರಾಂಶುಪಾಲರಾದ ಡಾ. ಬಿಂದುಸನ ಶೆಟ್ಟಿ, ಒಡಿಯೂರು ಶ್ರೀಗಳ ಷಷ್ಠ್ಯಬ್ಧ ಮಂಗಳೂರು ನಗರ ವಲಯ ಸಮಿತಿಯ ಕಾರ್ಯಾಧ್ಯಕ್ಷರಾದ ಜಿತೇಂದ್ರ ಕೊಟ್ಟಾರಿ, ಪ್ರಧಾನ ಕಾರ್ಯದರ್ಶಿ ತಾರನಾಥ್ ಶೆಟ್ಟಿ, ಪ್ರಧಾನ ಸಂಚಾಲಕರಾದ ನಾಗರಾಜ್ ಆಚಾರ್, ಪ್ರದೀಪ್ ಆಳ್ವಾ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *