
ಕಾವೂರಿನ ಮುಲ್ಲಕಾಡುವಿನಲ್ಲಿರುವ ರೇಚಕ ಸ್ಥಾವರಿಂದ ಅಲ್ಲಿಜ ಜನತೆ ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ. ಇಲ್ಲಿನ ಮಾಲಿನ್ಯದಿಂದ ಸುತ್ತಮುತ್ತಲಿನ ಬಾವಿ ನೀರು ಹಾಳಾಗಿ ಪಾಲಿಕೆಯ ಕೊಳವೆ ನೀರನ್ನು ಆಶ್ರಯಿಸಿಬೇಕಾದ ಪರಿಸ್ಥಿತಿ ಬಂದೊದಗಿದೆ. ಈ ಕುರಿತ ಒಂದು ವರದಿ ಇಲ್ಲಿದೆ…
ಕಾವೂರಿನ ಮುಲ್ಲಕಾಡಿನಲ್ಲಿರುವ ರೇಚಕ ಸ್ಥಾವರದ ಶುದ್ಧೀಕರಣ ಘಟಕದಲ್ಲಿ ಕೊಳಚೆ ನೀರನ್ನು ನೇರವಾಗಿ ತೋಡಿಗೆ ಬಿಡುವ ಆರೋಪ ಕೇಳಿಬಂದಿದೆ. ಇಲ್ಲಿನ ಸ್ಥಾವರಕ್ಕೆ ಬಂದ ಒಳಚರಂಡಿ ತ್ಯಾಜ್ಯಗಳನ್ನು ಮೂರು ಹಂತಗಳಲ್ಲಿ ಶುದ್ದೀಕರಣಗೊಳಿಸಿ ಎಸ್ಇಝೆಡ್ಗೆ ಸಾಗಿಸಲಾಗುತ್ತಿದೆ. ಆದರೆ ಇದೀಗ ಇಲ್ಲಿನ ಉಳಿದ ತ್ಯಾಜ್ಯ ಸ್ಲೆಜ್ಗಳನ್ನು ನೇರವಾಗಿ ದೊಡ್ಡ ಪೈಪ್ ಮೂಲಕ ರೇಚಕ ಸ್ಥಾವರದ ಒಳಗಿರುವ ತೋಟಕ್ಕೆ ಬಿಡಲಾಗುತ್ತಿದೆ.
ಈ ಕೊಳಚೆ ನೀರು ಸಮೀಪದಲ್ಲೇ ಹರಿಯುವ ಮಳೆ ನೀರು ತೋಡಿಗೆ ಹರಿದು ಮುಲ್ಲಕಾಡು, ಮಂಜಲ್ ಪಾದೆ, ಬಂಗ್ರ ಕೂಳೂರು ಮತ್ತಿತರ ಕಡೆ ದುರ್ನಾತ ಬೀರಿ ಕಲ್ಮಶಗಳನ್ನು ತೆಗೆದು ಸಂಸ್ಕರಿಸಿ ಎರಡನೇ ಹಂತಕ್ಕೆ ಪೈಪ್ ಮೂಲಕ ಕಳಿಸಬೇಕಾಗುತ್ತದೆ. ಆನಂತರ ಮೂರನೇ ಹಂತದಲ್ಲಿ ಸಂಸ್ಕರಿಸಿ ಎಸ್ಇಝೆಡ್ ನೀರಿನ ಮರುಬಳಕೆಗೆ ಕ್ರಮ ಕೈಗೊಳ್ಳುತ್ತದೆ. ಆದರೆ ಇಲ್ಲಿ ಮೊದಲ ಹಂತದಲ್ಲೇ ಅಂಚಿನಷ್ಟು ಸ್ಲೇಜ್ ತುಂಬಿಸಿದ್ದಾರೆ. ಮುಲ್ಲಕಾಡು ಜನತೆ ಇಲ್ಲಿನ ರೇಚಕ ಸ್ಥಾವರದಿಂದ ಈಗಾಗಲೇ ನಿತ್ಯ ನರಕಯಾತನೆ ಅನುಭವಿಸುತ್ತಿದ್ದು, ಇದೀಗ ಇಲ್ಲಿನ ಮಾಲಿನ್ಯದಿಂದ ಸುತ್ತಮುತ್ತಲಿನ ಬಾವಿನೀರು ಹಾಳಾಗಿ ಪಾಲಿಕೆಯ ಕೊಳವೆ ನೀರನ್ನು ಆಶ್ರಯಿಸಿದ್ದಾರೆ. ಹಲವು ದಿನಗಳಿಂದ ಈ ಸಮಸ್ಯೆ ಹಾಗಿಯೇ ಇದೆ.
ಸ್ವಚ್ಛತೆ ಕಾಪಾಡಿ ಎಂದು ಸಾರ್ವಜನಿಕರಿಗೆ ಬುದ್ದಿ ಹೇಳುವ ಸರಕಾರದ ಘಟಕಗಳೇ ಸ್ವತಃ ಈ ಮಾತನ್ನು ಉಲ್ಲಂಘಿಸುತ್ತಿರುವುದು ಕಾವೂರಿನ ಮುಲ್ಲಕಾಡಿನ ರೇಚಕ ಸ್ಥಾವರದಲ್ಲಿ ಕಂಡುಬರುತ್ತಿದೆ. ವಾರದಿಂದ ಇಲ್ಲಿನ ರೇಚಕ ಸ್ಥಾವರದ ಶುದ್ದೀಕರಣ ಘಟಕದಲ್ಲಿ ಕೊಳಚೆ ನೀರನ್ನು ನೇರವಾಗಿ ತೋಡಿಗೆ ಬಿಡಲಾಗುತ್ತಿದೆ. ಇದರಿಂದ ಪರಿಸರದ ಜನತೆ ನರಕಯಾತನೆ ಅನುಭವಿಸುವಂತಾಗಿದೆ. ಈ ಬಗ್ಗೆ ಪಾಲಿಕೆಯ ಅಧಿಕಾರಿಗಳು ಎಚ್ಚೆತ್ತು ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.