Header Ads
Header Ads
Breaking News

ಕುದ್ರೋಳಿ ಕ್ಷೇತ್ರದ ಹಳೆಯ ಧ್ವಜಸ್ತಂಭ ತೆರವು – ಕ್ಷೇತ್ರದ ಆರ್ಚಕರಾದ ಲಕ್ಷ್ಮಣ ಶಾಂತಿ ನೇತೃತ್ವದಲ್ಲಿ ಧಾರ್ಮಿಕ ಕಾರ್ಯ

ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದಲ್ಲಿ ನೂತನ ಧ್ವಜಸ್ತಂಭ ನಿರ್ಮಾಣ ಹಾಗೂ ಬ್ರಹ್ಮಕಲಶ ಫೆಬ್ರವರಿಯಲ್ಲಿ ಜರುಗಲಿದ್ದು, ಇದರ ಹಿನ್ನೆಲೆಯಲ್ಲಿ ಬುಧವಾರ ಧ್ವಜಸ್ತಂಭ ತೆರವು ಪ್ರಕ್ರಿಯೆ ವಿವಿಧ ಧಾರ್ಮಿಕ ವಿಧಿವಿಧಾನಗೊಂದಿಗೆ ನಡೆಯಿತು. ಮೊದಲಿಗೆ ಗುರುಪ್ರಾರ್ಥನೆ ನಡೆಸಿ, ಅನುಜ್ಞಾ ಕಲಶ ಮಾಡಿ ನಂದಿ ಮತ್ತು ಧ್ವಜ ದೇವರನ್ನು ಕಲಶದಲ್ಲಿ ಆವಾಹನೆ ಮಾಡಿ, ಬಳಿಕ ಹಳೇ ಧ್ವಜಸ್ತಂಭ ತೆರವು ಕಾರ್ಯ ನಡೆಸಲಾಯಿತು.ಕ್ಷೇತ್ರದ ಪ್ರಧಾನ ಆರ್ಚಕರಾದ ಲಕ್ಷ್ಮಣ ಶಾಂತಿ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನೆರವೇರಿತು. ಕ್ಷೇತ್ರ ನವೀಕರಣದ ರೂವಾರಿ ಬಿ.ಜನಾರ್ದನ ಪೂಜಾರಿ, ಶಾಸಕ ವೇದವ್ಯಾಸ ಕಾಮತ್, ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಎಚ್.ಎಸ್.ಸಾಯಿರಾಂ, ಕೋಶಾಧಿಕಾರಿ ಪದ್ಮರಾಜ್ ಆರ್. ಸದಸ್ಯರಾದ ಹರಿಕೃಷ್ಣ ಬಂಟ್ವಾಳ್, ಡಾ. ಅನಸೂಯಾ ಬಿ.ಟಿ.ಸಾಲ್ಯಾನ್, ಟ್ರಸ್ಟಿ ರವಿ ಶಂಕರ್ ಮಿಜಾರ್ ಸೇರಿದಂತೆ ಕ್ಷೇತ್ರದ ಭಕ್ತರು ಕಾರ್ಯಕ್ರಮದಲ್ಲಿ ಭಾಗಿಗಳಾದರು.

Related posts

Leave a Reply