Header Ads
Header Ads
Breaking News

ಚುನಾವಣಾ ಆಯೋಗದ ವಿರುದ್ಧ ಐವನ್ ಗರಂ: ಅಧಿಕಾರಿಗಳ ವಿರುದ್ಧ ದೂರಿಗೆ ನಿರ್ಧಾರ

ಶಾಂತಿಯುತ, ನ್ಯಾಯಯುತ ಚುನಾವಣೆ ಕಾಂಗ್ರೆಸ್ ಬೆಂಬಲ ನೀಡುತ್ತೆ, ಆದರೆ ಅಧಿಕಾರಿಗಳು ಧಾರ್ಮಿಕ ಕಾರ್ಯಕ್ರಮಕ್ಕೆ ಅಡ್ಡಿ ಪಡಿಸಬಾರದು ಎಂದು ಮುಖ್ಯಮಂತ್ರಿ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜಾ ಹೇಳಿದ್ರು. ಈ ಕುರಿತು ಮಂಗಳೂರಲ್ಲಿ ಮಾತನಾಡಿದ ಅವರು, ಚುನಾವಣೆ ಎಂದರೆ ತುರ್ತು ಪರಿಸ್ಥಿತಿಯಲ್ಲ, ಅದೊಂದು ಹಬ್ಬ, ಚುನಾವಣೆ ನಡೆಸುವುದೇ ಘೋರ ಅಪರಾಧ ಅನ್ನೋ ಭಾವನೆ ಮೂಡಿದೆ.
ಮದುವೆ ಆಮಂತ್ರಣ ಪತ್ರಿಕೆಗೂ ಅನುಮತಿ ಪಡೆಯಬೇಕೆನ್ನುವ ಒತ್ತಡ ವೇರುತ್ತಿದೆ.
ಆಯೋಗ ಅಮಾನವೀಯವಾಗಿ ವರ್ತಿಸುವುದು ಬಿಡಲಿ, ಈ ಬಗ್ಗೆ ನಾನೂ ಚುನಾವಣಾ ಆಯೋಗಕ್ಕೆ ದೂರು ನೀಡುವೆ.ಚುನಾವಣೆ ಹೆಸರಲ್ಲಿ ಕೆಲವು ಅಧಿಕಾರಿಗಳು ದುರುಪಯೋಗ ಮಾಡುತ್ತಿದ್ದಾರೆ.
ಕಾರ್ಯಕ್ರಮದ ಬ್ಯಾನರ್ ಹರಿದು ಹಾಕುವುದು ಸರಿಯಲ್ಲ, ಈಗಾಗಲೇ ದ.ಕ. ಜಿಲ್ಲಾಧಿಕಾರಿ ಜೊತೆಗೂ ಮಾತಾಡಿದ್ದೇನೆ.ಜಿಲ್ಲಾಧಿಕಾರಿಗಳು ಸರ್ವಪಕ್ಷವನ್ನು ಕರೆದು ಚರ್ಚಿಸಬೇಕು ಅಂತಾ ಐವನ್ ಡಿಸೋಜಾ ಹೇಳಿದರು.

Related posts

Leave a Reply

Your email address will not be published. Required fields are marked *