Header Ads
Header Ads
Header Ads
Breaking News

ಜನವರಿ 10ರಂದು ರಡ್ಡ್ ಎಕ್ರೆ ರಿಲೀಸ್ : ಕರಾವಳಿ ಜಿಲ್ಲೆಯಾದ್ಯಂತ ಸಿನಿಮಾ ಬಿಡುಗಡೆ

ಕೋಸ್ಟಲ್‍ವುಡ್‍ನ ಬಹು ನಿರೀಕ್ಷಿತ ಸಿನಿಮಾ ‘ರಡ್ ಎಕ್ರೆ’ ರಿಲೀಸ್‍ಗೆ ಮೂಹೂರ್ತ ಫಿಕ್ಸ್ ಆಗಿದೆ. ಜನವರಿ 10ರಂದು ಕರಾವಳಿ ಜಿಲ್ಲೆಯಾದ್ಯಂತ ಸಿನಿಮಾ ಬಿಡುಗಡೆಯಾಗಲಿದೆ. ಅದೇ ರೀತಿ ವಿದೇಶದಲ್ಲೂ ಸಿನಿಮಾ ಬಿಡುಗಡೆಯಾಗಲಿದೆ. ಈಗಾಗಲೇ ಸಿನಿ ರಸಿಕರು ಚಿತ್ರ ಬಿಡುಗಡೆಗೆ ಕಾತರದಿಂದ ಕಾಯುತ್ತಿದ್ದಾರೆ.

 ಕೋಸ್ಟಲ್‍ವುಡ್‍ನಲ್ಲಿ ಈಗಾಗಲೇ ಟೀಸರ್ ಮತ್ತು ಟ್ರೈಲರ್ ಮೂಲಕ ಸದ್ದು ಮಾಡಿದ ಸಿನಿಮಾ ಎಂದರೆ ಅದು ರಡ್ ಎಕ್ರೆ. ಒನ್‍ಲೈನ್ ಸಿನಿಮಾ ಲಾಂಛನದಲ್ಲಿ ಸಂದೇಶ್ ರಾಜ್ ಬಂಗೇರ, ರೋಹನ್ ಕೋಡಿಕಲ್ ನಿರ್ಮಾಣದಲ್ಲಿ ವಿಸ್ಮಯ ವಿನಾಯಕ ನಿರ್ದೇಶನದಲ್ಲಿ ಚಿತ್ರ ಮೂಡಿ ಬಂದಿದೆ. ಇನ್ನು ಇದರ ಹಾಡುಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜಾಗೆ ರಡ್ ಎಕ್ರೆ…. ಬೈದೆರ್ ಲಪ್ಪರೆ… ಜಾಗೆದಕುಲು ಬನ್ನಗ ಮಾತ ಒತ್ತರೆ’ ಟೈಟಲ್ ಸಾಂಗ್‍ಗೆ ಈಗಾಗಲೆ ತುಳುವರು ಫಿದಾ ಆಗಿದ್ದಾರೆ. ಶಶಿರಾಜ್ ರಾವ್ ಕಾವೂರು ಬರೆದಿರುವ ‘ಪಗೆಲ್ ಕರೀಂಡ್? ಮುಗಲ್ ಕಬೀಂಡ್…. ಹಾಗೂ ಇನಿ ದಾನೆ ಕುಸ್ಕೊಂದುಂಡು’ ಹಾಡುಗಳು ರಡ್ ಎಕ್ರೆ ಸಿನಿಮಾದಲ್ಲಿದೆ.

ರಡ್ ಎಕ್ರೆ ಹೆಸರು ಕೇಳುವಾಗ ಇದು ಜಾಗದ ಬಗ್ಗೆ ಅನಿಸಿರಬಹುದು. ಆದರೆ, ಇಲ್ಲಿ ಕಥೆ ಆರಂಭ ಆಗುವುದು ಹಾಗೂ ಮುಕ್ತಾಯ ಆಗುವುದು 2 ಎಕ್ರೆ ಜಾಗದಲ್ಲಿ ಮಾತ್ರ. ಉಳಿದಂತೆ ಇನ್ನೂ ಅನೇಕತೆ ಇದರಲ್ಲಿದೆಯಂತೆ.! ಇದೇ ಮೊದಲ ಬಾರಿಗೆ ಪೃಥ್ವಿ ಅಂಬರ್ ಅವರು ಸಿನಿಮಾದ ಒಂದು ಹಾಡನ್ನು ಹಾಡಿದ್ದಾರೆ. ದೀಪಕ್ ಕೋಡಿಕಲ್ ಕೂಡ ಸ್ವರ ನೀಡಿದ್ದಾರೆ. ಕಿಶೋರ್ ಕುಮಾರ್ ಶೆಟ್ಟಿ ಅವರ ಸಂಗೀತ ಚಿತ್ರಕ್ಕಿದೆ. ಪೃಥ್ವಿ ಅಂಬರ್, ನಿರೀಕ್ಷಾ ಶೆಟ್ಟಿ, ಅರವಿಂದ್ ಬೋಳಾರ್, ಉಮೇಶ್ ಮಿಜಾರ್, ದೀಪಕ್ ರೈ ಪಾಣಾಜೆ, ಮಂಜು ರೈ ಮೂಳೂರು ಸೇರಿದಂತೆ ಪ್ರತಿಭಾವಂತ ನಟರು ಈ ಸಿನಿಮಾದಲ್ಲಿ ನಟಿಸಿದ್ದಾರೆ.

 ಈ ಸಿನಿಮಾದ ಬಗ್ಗೆ ಮಾತನಾಡಿದ ನಿರ್ದೇಶಕ ವಿಸ್ಮಯ್ ವಿನಾಯಕ್ ಅವರು ಜನವರಿ 10ರಂದು ಸಿನಿಮಾ ಕರಾವಳಿಯಾದ್ಯಂತ ಬಿಡುಗಡೆಯಾಗಲಿದೆ. ರಡ್ ಎಕ್ರೆ 2 ಗಂಟೆಯ ಸಿನಿಮಾವಾಗಿದ್ದು. ಫುಲ್ ಎಂಟಟೈನ್‍ಮೆಂಟ್ ಮತ್ತು ಫ್ಯಾಮಿಲಿ ಸ್ಟೋರಿಯಾಗಿದ್ದು, ಈಗಾಗಲೇ ಮಸ್ಕತ್, ಪುಣೆ, ಮಣಿಪಾಲದಲ್ಲಿ ಪ್ರೀಮಿಯರ್ ಶೋಗೆ ಉತ್ತಮ ರೆಸ್ಫಾನ್ಸ್ ಸಿಕ್ಕಿದೆ. ಈ ಸಿನಿಮಾ ಮಂಗಳೂರಿನ ಸುತ್ತಮುತ್ತಲಿನಲ್ಲಿ ಚಿತ್ರದ ಚಿತ್ರೀಕರಣ ನಡೆದಿದೆ ಎಂದು ಹೇಳಿದರು.

ಇದೇ ವೇಳೆ ಚಿತ್ರದ ನಟರಾದ ಅರವಿಂದ್ ಬೋಳಾರ್, ಕಿಶೋರ್ ಶೆಟ್ಟಿ, ನಿರ್ಮಾಪಕರಾದ ಸಂದೇಶ್ ರಜ್ ಬಂಗೇರಾ, ನಿರೀಕ್ಷಾ ಶೆಟ್ಟಿ ಚಿತ್ರದ ಬಗ್ಗೆ ಮಾಹಿತಿ ನೀಡಿದರು.

ಒಟ್ಟಿನಲ್ಲಿ ಕೋಸ್ಟಲ್‍ವುಡ್‍ನಲ್ಲಿ ಭಾರೀ ಕೂತೂಹಲ ಮೂಡಿಸಿದ ರಡ್ ಎಕ್ರೆ ಸಿನಿಮಾ ಜನವರಿ 10ರಂದು ಬಿಡುಗಡೆಗೊಳ್ಳಲಿದೆ. ಕೋಸ್ಟಲ್‍ವುಡ್‍ನ ಅನೇಕ ದಿಗ್ಗಜ್ಜರು ಈ ಸಿನಿಮಾದಲ್ಲಿ ನಟಿಸಿದ್ದು, ಸಿನಿಮಾ ಬಿಡುಗಡೆಗೆ ಪ್ರೇಕ್ಷಕರು ಕಾತರದಿಂದ ಕಾಯುತ್ತಿರುವುದಂತೂ ಸತ್ಯ.

Related posts

Leave a Reply

Your email address will not be published. Required fields are marked *