Header Ads
Header Ads
Breaking News

ತಲಪಾಡಿ ಆರ್‌ಟಿಒ ಬಳಿ ಟ್ಯಾಂಕರ್‌ನಿಂದ ಗ್ಯಾಸ್ ಸೋರಿಕೆ: ತಪ್ಪಿದ ದುರಂತ

ತಲಪಾಡಿ ಆರ್ ಟಿ ಒ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಲ್ಲಿಸಲಾಗಿದ್ದ ಟ್ಯಾಂಕರೊಂದರಲ್ಲಿ ಗ್ಯಾಸ್ ಸೋರಿಕೆ ಉಂಟಾಗಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಮಂಗಳವಾರ ಸಂಜೆ 7 ಗಂಟೆಯ ಸುಮಾರಿಗೆ ಈ ಘಟನೆ ನಡೆದಿದೆ.

ಟ್ಯಾಂಕರಿನ ಮೇಲ್ಬಾಗದಿಂದ ಗ್ಯಾಸ್ ಮೇಲಕ್ಕೆ ಸ್ಪ್ರೇ ಆಗುತಿತ್ತು. ಕೂಡಲೇ ಮಂಜೇಶ್ವರ ಪೊಲೀಸರು ಹಾಗೂ ಅಗ್ನಿಶಾಮಕ ದಳ ಆಗಮಿಸಿ ಸುರಕ್ಷತೆಗೆ ಕ್ರಮ ಕೈಗೊಂಡರು. ಘಟನಾ ಸ್ಥಳದಲ್ಲಿ ಸುರಕ್ಷತೆಗಾಗಿ ಹೆಚ್ಚಿನ ಪೊಲೀಸರನ್ನು ನಿಯೋಗಿಸಲಾಗಿತ್ತು. ಸೋರಿಕೆಯಿಂದ ಆಪಾಯ ಸಂಭವಿಸುವ ಸಾಧ್ಯತೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಟ್ಯಾಂಕರ್ ಸಮೀಪವಿದ್ದ ವ್ಯಾಪಾರ ಕೇಂದ್ರಗಳನ್ನು ಮುಚ್ಚಲಾಯಿತು.ಬಳಿಕ ರಾತ್ರಿ 11 ಗಂಟೆಯ ಸುಮಾರಿಗೆ ಗ್ಯಾಸನ್ನು ಬೇರೆ ಟ್ಯಾಂಕರುಗಳಿಗೆ ಬದಲಾಯಿಸಿ ಹೆದ್ದಾದಾರಿಯಲ್ಲಿ ವಾಹನ ಸಂಚಾರವನ್ನು ಸುಗಮಗೊಳಿಸಲಾಯಿತು. 

Related posts

Leave a Reply

Your email address will not be published. Required fields are marked *