Header Ads
Breaking News

ದ.ಕ. ಕ್ಷೇತ್ರದಲ್ಲಿ ಬಂಟ ಸಮುದಾಯದ ಅಭ್ಯರ್ಥಿಗಳಿಬ್ಬರ ಮಧ್ಯೆ ಬಿಗ್ ಫೈಟ್!

ಲೋಕಸಭಾ ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇ ರುತ್ತಿದೆ. ಇಡೀ ರಾಜ್ಯದಲ್ಲಿ ಭಾರೀ ಕ್ಯೂರಿಯಾಸಿಟಿ ಹುಟ್ಟುಹಾಕಿದ್ದ ದ.ಕ. ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯಾರು ಎನ್ನುವ ಪ್ರಶ್ನೆಗೂ ಉತ್ತರ ಸಿಕ್ಕಾಗಿದೆ. ಇದೇ ಮೊದಲ ಬಾರಿಗೆ ಲೋಕಸಭೆಗೆ ಸ್ಪರ್ಧಿಸುವ ಮೂಲಕ ಯುವಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಿಥುನ್ ರೈ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಹಲವು ಆಕಾಂಕ್ಷಿಗಳಿದ್ದ ಪಟ್ಟಿಯಲ್ಲಿ ಮಿಥುನ್ ಮೇಲುಗೈ ಸಾಧಿಸಿದ್ದು ಹೇಗೆ? ಇಲ್ಲಿದೆ ನೋಡಿ ಇನ್‌ಸೈಡ್ ಸ್ಟೋರಿ.

 ದ.ಕ. ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯಾರು ಎನ್ನುವ ಪ್ರಶ್ನೆಗೆ ಕೊನೆಗೂ ಉತ್ತರ ಲಭಿಸಿದೆ. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಅವರಿಗೆ ಟಿಕೆಟ್ ನೀಡುವ ಮೂಲಕ ಕಾಂಗ್ರೆಸ್ ವಕ್ತಾರರು ಈ ಕುತೂಹಲಕ್ಕೆ ತೆರೆ ಎಳೆದಿದ್ದಾರೆ. ಈ ಮೂಲಕ ಕರಾವಳಿಯಲ್ಲಿ ಯುವಕರಿಗೆ ಪ್ರಾಧಾನ್ಯತೆಯನ್ನು ನೀಡಬೇಕು ಎಂದು ಕೇಳಿಬರುತ್ತಿದ್ದ ಕೂಗಿಗೆ ಕಾಂಗ್ರೆಸ್ ಹೈಕಮಾಂಡ್ ಮನ್ನಣೆ ನೀಡಿದ್ದಾರೆ. ಹೀಗಾಗಿ ಆಕಾಂಕ್ಷಿಗಳ ಪಟ್ಟಿಯಲ್ಲಿ ಪಕ್ಷದ ಹಿರಿಯ ಮುಖಂಡರಾದ ರಮಾನಾಥ್ ರೈ, ವಿನಯ್ ಕುಮಾರ್ ಸೊರಕೆ, ಬಿ.ಕೆ. ಹರಿಪ್ರಸಾದ್, ಎಂ.ಎನ್, ರಾಜೇಂದ್ರ ಕುಮಾರ್, ಐವನ್ ಡಿಸೋಜ ಹೀಗೆ ಹಲವರ ಹೆಸರಿದ್ದರೂ ಮೇಲುಗೈ ಸಾಧಿಸುವಲ್ಲಿ ಮಿಥುನ್ ರೈ ಯಶಸ್ವಿಯಾಗಿದ್ದಾರೆ.

 ಮಿಥುನ್ ರೈಗೆ ಟಿಕೆಟ್ ಲಭಿಸಿರುವ ಹಿಂದೆ ಕಾಂಗ್ರೆಸ್ ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ಅವರ ಇನ್‌ಫ್ಲೂಯೆನ್ಸ್ ಕೆಲಸ ಮಾಡಿರುವುದು ಸ್ಪಷ್ಟ. ಅದರ ಜೊತೆಗೆ ಕಾಂಗ್ರೆಸ್ ಹಲವು ಸ್ಟ್ರಾಟರ್ಜಿಗಳನ್ನು ಬಳಕೆ ಮಾಡಿಕೊಂಡಿದೆ ಎನ್ನುವ ಮಾತುಗಳು ಕಾಂಗ್ರೆಸ್ ವಲಯದಿಂದ ಕೇಳಿಬರುತ್ತಿವೆ. ದ.ಕ. ಕ್ಷೇತ್ರದ ವಿಚಾರಕ್ಕೆ ಬಂದರೆ ಇಲ್ಲಿ ಕಳೆದ 40ವರ್ಷಗಳಿಂದ ಕಾಂಗ್ರೆಸ್ ಬಂಟರಿಗೆ ಅವಕಾಶವನ್ನೇ ಕೊಟ್ಟಿಲ್ಲ. ಈ ಮೂಲಕ ಬಂಟರಿಗೆ ಅವಕಾಶ ನೀಡುವ ಜೊತೆಗೆ ಬಿಜೆಪಿಯ ಬಂಟ ಅಭ್ಯರ್ಥಿ ನಳಿನ್ ಕುಮಾರ್‌ಗೆ ತೀವ್ರ ಸ್ಪರ್ಧೆ ಕೊಡುವ ಉದ್ದೇಶವೂ ಇದೆ. ಇನ್ನು ಮಿಥುನ್ ರೈ ಜನಪ್ರಿಯತೆ ಬಂಟರು, ಬಿಲ್ಲವರ ಮತಗಳು ಧ್ರುವೀಕರಣವಾಗುವುದನ್ನೂ ತಪ್ಪಿಸಬಹುದು. ಅಲ್ಲದೆ, ಮಿಥುನ್ ರೈಗೆ ಟಿಕೆಟ್ ನೀಡಿರುವುದಕ್ಕೆ ಯಾರೂ ಕೂಡ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿಲ್ಲ. ಈ ಎಲ್ಲಾ ಅಂಶಗಳು ಮಿಥುನ್‌ಗೆ ಪ್ಲಸ್ ಆಗಬಹುದು ಎನ್ನುವ ಲೆಕ್ಕಾಚಾರದಿಂದ ಮಿಥುನ್‌ಗೆ ಟಿಕೆಟ್ ಲಭಿಸಿದೆ ಎನ್ನಲಾಗುತ್ತಿದೆ.

 ದ.ಕ. ಲೋಕಸಭಾ ಕ್ಷೇತ್ರ ಕಳೆದ ಹಲವು ದಶಕಗಳಿಂದ ಬಿಜೆಪಿಯ ಭದ್ರಕೋಟೆಯಾಗಿ ಗುರುತಿಸಿಕೊಂಡಿದೆ. ಎರಡು ಬಾರಿ ಗೆದ್ದು, ಇದೀಗ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿರುವ ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್‌ಗೆ ಠಕ್ಕರ್ ಕೊಡೋದಕ್ಕೆ ಮಿಥುನ್ ರೈ ಈಗಾಗಲೇ ರಣತಂತ್ರ ರೂಪಿಸಿದ್ದಾರೆ. ತಮ್ಮ ವಿರುದ್ಧ ಕೇಳಿಬರುತ್ತಿರುವ ಆರೋಪಗಳು, ಅಪಪ್ರಚಾರಗಳಿಗೆ ಉತ್ತರ ನೀಡಲು ಸೂಕ್ತ ತಂತ್ರಗಾರಿಕೆಗೆ ಈಗಾಗಲೇ ತಂಡವನ್ನೂ ರೆಡಿಮಾಡಿಕೊಂಡಿದ್ದಾರೆ. ಮಾತ್ರವಲ್ಲ ಸೋಮವಾರ ನಾಮಪತ್ರ ಸಲ್ಲಿಕೆಗೂ ಎಲ್ಲಾ ಸಿದ್ಧತೆಗಳನ್ನು  ಮಾಡಿಕೊಂಡಿದ್ದಾರೆ.

 

Related posts

Leave a Reply

Your email address will not be published. Required fields are marked *