ಕರ್ನಾಟಕದ ಪ್ರಪ್ರಥಮ ಒಟಿಟಿ ಎನ್ನುವ ಹೆಗ್ಗಳಿಕೆಯನ್ನು ಪಡೆದುಕೊಂಡಿರುವ ವಿ4 ಸ್ಟ್ರೀಮ್ ಒಟಿಟಿಯಲ್ಲಿ ಈಗಾಗಲೇ ಅನೇಕ ಮನರಂಜನಾತ್ಮಕ ಕಂಟೆಂಟ್ಗಳನ್ನು ಮೂಡಿ ಬರ್ತಾ ಇದೆ. ಇದೀಗ ವಿ4 ಸ್ಟ್ರೀಮ್ ನಲ್ಲಿ ಬಚ್ಚಲಿಲು ತುಳು ಕಿರುಚಿತ್ರ ಸದ್ಯದಲ್ಲೇ ಮೂಡಿ ಬರಲಿದೆ. ಕಿರುಚಿತ್ರದ ಮೂಹರ್ತ ಕಾರ್ಯಕ್ರಮ ಹಾಗೂ ಚಿತ್ರದ ಪೋಸ್ಟರ್ ಬಿಡುಗಡೆ ಸಮಾರಂಭ ನಗರದ ಶರವು ದೇವಸ್ಥಾನದಲ್ಲಿ ಅದ್ಧೂರಿಯಾಗಿ ಜರುಗಿತ್ತು.
ಈಗಾಗಲೇ ವಿವಿಧ ಬಾಷೆಯ ಸಿನಿಮಾಗಳು, ವೆಬ್ಸಿರೀಸ್ಗಳು, ಕಾಮಿಡಿ ಕಂಟೆಂಟ್ಗಳು ಹೀಗೆ ನೂರಾರು ಮನರಂಜನಾತ್ಮಕ ಕಂಟೆಂಟ್ಗಳನ್ನು ಹೊಂದಿರುವ ಕರ್ನಾಟಕದ ಮೊಟ್ಟಮೊದಲ ಒಟಿಟಿ ವಿ4 ಸ್ಟ್ರೀಮ್ನಲ್ಲಿ ಅನೇಕ ಮನೋರಂಜನಾ ಕಾರ್ಯಕ್ರಮಗಳು ಮೂಡಿ ಬರ್ತಾ ಇದೆ. ಇದಕ್ಕೊಂದು ಸೇರ್ಪಡೆದಂತೆ ಬಚ್ಚಲಿಲು ತುಳು ಕಿರುಚಿತ್ರ ಸದ್ಯದಲ್ಲೇ ವಿ4 ಸ್ಟ್ರೀಮ್ ನಲ್ಲಿ ಮೂಡಿ ಬರಲಿದೆ. ಇನ್ನು ತೃಪ್ತಿ ಕ್ರಿಯೇಷನ್ ಅರ್ಪಿಸುವ ಬಚ್ಚಲಿಲು ತುಳು ಕಿರುಚಿತ್ರದ ಮೂಹರ್ತ ಕಾರ್ಯಕ್ರಮ ಹಾಗೂ ಚಿತ್ರದ ಪೋಸ್ಟರ್ ಬಿಡುಗಡೆ ಸಮಾರಂಭ ನಗರದ ಶರವು ದೇವಸ್ಥಾನದಲ್ಲಿ ಅದ್ಧೂರಿಯಾಗಿ ಜರುಗಿತ್ತು. ಇನ್ನು ಬಿಡುಗಡೆ ಸಮಾರಂಭದಲ್ಲಿ ಹಲವು ಮಂದಿ ಚಿತ್ರತಂಡದ ಸದಸ್ಯರು ಭಾಗವಹಿಸಿ, ಕಿರುಚಿತ್ರ ಯಶಸ್ವಿ ಕಾಣಲಿ , ಜೊತೆಗೆ ಮುಂದಿನ ತುಳು ಚಿತ್ರದಲ್ಲೂ ಅವಕಾಶ ಸಿಗಲಿ ಎಂದು ಗಣ್ಯರು ಹಾರೈಸಿದ್ರು.
ಲಕುಮಿ ತಂಡದ ಕಿಶೋರ್ ಶೆಟ್ಟಿ, ನಟರಾದ ಪ್ರಕಾಶ್ ತೂಮಿನಾಡ್, ಪ್ರಕಾಶ್ ಧರ್ಮನಗರ , ಪ್ರಸಾದ್ ಅಂಚನ್ ಸೇರಿದಂತೆ ಚಿತ್ರದ ಕಲಾವಿದರು ಈ ವೇಳೆ ಭಾಗಿಯಾಗಿದ್ರು.ಇನ್ನು ಸಚಿನ್ ಪೂಜಾರಿ ಉಪ್ಪಳ ಅವರ ಸ್ಕ್ರಿಪ್ಟ್ ಹಾಗೂ ನಿರ್ದೇಶನದಲ್ಲಿ ಬಚ್ಚಲಿಲು ತುಳು ಕಿರುಚಿತ್ರದ ಮೂಡಿಬರಲಿದೆ. ಸ್ಕ್ರಿನ್ ಪ್ಲೇ ಹಾಗೂ ಸಹಾಯಕ ನಿರ್ದೇಶನವನ್ನು ನಿತಿನ್ ಹೊಸಂಗಡಿ ಅವರು ಮಾಡಿದ್ದು, ಯೋಗೀಶ್ ಬಂಟ್ವಾಳ ಅವರ ಕಥೆಯನ್ನು ಬರೆದಿದ್ದು, ಚಿತ್ರದ ನಿರ್ಮಾಣದ ಹೊಣೆಯನ್ನು ಹರೀಶ್ ಬಂಗೇರ ಹೊತ್ತುಕೊಂಡಿದ್ದಾರೆ. ವಿನೋದ್ ಕೊಕೀಲಾ ಅವರ ಸಂಗೀತದ ಮೂಲಕ ಕಿರುಚಿತ್ರ ಮೂಡಿಬರಲಿದೆ.
ಇನ್ನು ಹಲವು ಮಂದಿ ಕಲಾವಿದರು ಈ ಕಿರು ಚಿತ್ರದಲ್ಲಿ ಬಣ್ಣ ಹಚ್ಚಲಿದ್ದಾರೆ. ನಗರದ ವಿವಿಧ ಕಡೆಗಳಲ್ಲಿ ಚಿತ್ರೀಕರಣ ನಡೆಯಲಿದ್ದು, ಕಿರುಚಿತ್ರವೂ ಸಮಾಜಕ್ಕೆ ಉತ್ತಮ ಸಂದೇಶ ನೀಡಲಿದೆ.