Header Ads
Header Ads
Breaking News

ಬಿಜೆಪಿ ಪರಿವರ್ತನಾ ರ್ಯಾಲಿಯಲ್ಲ, ಅದು ಪಶ್ಚಾತ್ತಾಪ ಯಾತ್ರೆ: ಸಿಎಂ ಸಿದ್ದರಾಮಯ್ಯ ವ್ಯಂಗ್ಯ

ರಾಜ್ಯ ಬಿಜೆಪಿ ಹಮ್ಮಿಕೊಂಡಿರುವ ನವಕರ್ನಾಟಕ ಪರಿವರ್ತನಾ ರ್‍ಯಾಲಿ ಪ್ಲಾಪ್ ಶೋ ಅದು ಪರಿವರ್ತನೆ ಅಲ್ಲ, ಪಶ್ಚತಾಪ ರ್‍ಯಾಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.
ಅವರು ನಗರದ ನೆಹರೂ ಮೈದಾನದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಮುಕ್ತ ಕರಾಟೆ ಪಂದ್ಯಾವಳಿ ಇಂದಿಯನ್ ಕರಾಟೆ ಚಾಂಪಿಯನ್‌ಶಿಪ್ ೨೦೧೭ನ್ನು ಉದ್ಘಾಟಿಸಲು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಪರಿವರ್ತನಾ ರ್‍ಯಾಲಿಯಲ್ಲಿ ೩ ಲಕ್ಷ ಜನರನ್ನು ಸೇರಿಸುವುದಾಗಿ ಬಿಜೆಪಿ ಹೇಳಿಕೊಂಡಿತ್ತು. ಆದರೆ ರ್‍ಯಾಲಿಯಲ್ಲಿ ಸೇರಿದ್ದ ಬರೀ ೨೦ ಸಾವಿರ ಜನ ಮಾತ್ರ ಅದೊಂದು ಪ್ಲಾಪ್ ಶೋ ಎಂದು ಮುಖ್ಯಮಂತ್ರಿ ಹೇಳಿದರು. ಬಿಜೆಪಿಯ ಈ ರ್‍ಯಾಲಿಗೆ ಪರ್ಯಾಯವಾಗಿ ಕಾಂಗ್ರೆಸ್ ರ್‍ಯಾಲಿ ನಡೆಸುವುದಿಲ್ಲ ಬದಲಾಗಿ ನಾವು ಸಾರ್ವಜನಿಕರ ಸಭೆ ನಡೆಸುತ್ತೇವೆ ಎಂದರು.