Header Ads
Header Ads
Header Ads
Breaking News

ಬೈಕ್ ಜಾಥಾ ಬಗ್ಗೆ ಆಯಾ ಜಿಲ್ಲೆಗಳ ಪೊಲೀಸರ ತೀರ್ಮಾನ:  ಸಚಿವ ರಮಾನಾಥ ರೈ ಪ್ರತಿಕ್ರಿಯೆ

ವಿವಿಧ ಜಿಲ್ಲೆಗಳಿಂದ ಬೈಕ್ ಮೂಲಕ ಜಾಥಾ ನಡೆಸುವ ಸಂದರ್ಭ ಸುಗಮ ಸಂಚಾರಕ್ಕೆ ವ್ಯವಸ್ಥೆಯ ಜತೆಗೆ ಏನಾದರೂ ಅಹಿತಕರ ಘಟನೆಗಳು ಸಂಭವಿಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಆಯಾ ಜಿಲ್ಲೆಗಳಲ್ಲಿ ಕಾನೂನಿನ ಪರಿಪಾಲನೆ ಮಾಡುವ ಹೊಣೆಗಾರಿಕೆ ಪೊಲೀಸರದ್ದು. ಆಯಾ ಜಿಲ್ಲೆಯ ಪೊಲೀಸರು ಈ ಬಗ್ಗೆ ತೀರ್ಮಾನ ಕೈಗೊಲ್ಳುವಂತೆ ಸರ್ಕಾರ ತೀರ್ಮಾನಿಸಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ತಿಳಿಸಿದ್ದಾರೆ.

ಅವರು ಬಿಜೆಪಿ ಯುವ ಮೋರ್ಚಾ ಹಮ್ಮಿಕೊಂಡ ಬೈಕ್ ರ್‍ಯಾಲಿ ಕುರಿತಂತೆ ಸುದ್ದಿಗಾರದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆಗೆ ಯಾವುದೇ ಪ್ರತಿರೋಧ ಇರುವುದಿಲ್ಲ. ಆದರೆ ವಿವಿಧ ಜಿಲ್ಲೆಗಳಿಂದ ರ್‍ಯಾಲಿ ನಡೆಸುವುದರಿಂದ ಅಹಿತಕರ ಘಟನೆ ಆದಲ್ಲಿ ಅದು ಸರ್ಕಾರ ಮೇಲೆ ಪರಿಣಾಮ ಬೀರುತ್ತೆ ಎಂದು ಅವರು ಹೇಳಿದರು.

Related posts

Leave a Reply