Header Ads
Header Ads
Breaking News

ಭಟ್ಕಳ:ಪೊಲೀಸರ ಮಕ್ಕಳಿಗಾಗಿ ಒಂದು ದಿನದ ಕ್ರೀಡಾಕೂಟ

 ಭಟ್ಕಳ ಪೊಲೀಸ್ ಪೆರೇಡ್ ಮೈದಾನದಲ್ಲಿ ಭಟ್ಕಳ ಉಪ ವಿಭಾಗದ ಪೊಲೀಸರ ಮಕ್ಕಳಿಗಾಗಿ ಒಂದು ದಿನದ ಕ್ರೀಡಾ ಕೂಟವನ್ನು ಏರ್ಪಡಿಸಲಾಗಿತ್ತು.

ಉಪ ವಿಭಾಗಾಧಿಕಾರಿ ಸಾಜಿದ್ ಅಹಮ್ಮದ್ ಮುಲ್ಲಾ ಅವರು ಪಾರಿವಾಳಗಳನ್ನು ಹಾರಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಪೊಲೀಸರು ವರ್ಷದ ಎಲ್ಲಾ ದಿನವೂ ಕೂಡಾ ಒತ್ತಡದಲ್ಲಿಯೇ ಕರ್ತವ್ಯ ನಿರ್ವಹಿಸಬೇಕಾಗಿದ್ದು ತಮ್ಮ ಮಕ್ಕಳ ಶೈಕ್ಷಣಿಕ ಹಾಗೂ ಕ್ರೀಡಾ ಚಟುವಟಿಕೆಗಳನ್ನು ನೋಡಲು ಸಮಯ ದೊರೆಯುವುದಿಲ್ಲ ಅಂತಹ ಸಂದರ್ಭದಲ್ಲಿ ಅವರ ಮಕ್ಕಳಿಗಾಗಿಯೇ ಎರ್ಪಡಿಸಿದ ಕ್ರೀಡಾಕೂಟಾ ಅತ್ಯಂತ ಶ್ಲಾಘನೀಯ ಎಂದು ಅವರು ಹೇಳಿದರು.

ಮುಖ್ಯ ಅತಿಥಿಗಳಾಗಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ರಾಧಾಕೃಷ್ಣ ಭಟ್ಟ ಮಾತನಾಡಿ, ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರಗತಿಯಷ್ಟೇ ಮುಖ್ಯ ಕ್ರೀಡಾ ಪ್ರಗತಿಯಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಪ ವಿಭಾಗದ ಉಪಾಧೀಕ್ಷಕ ವೆಲೆಂಟೈನ್ ಡಿಸೋಜ ವಹಿಸಿದ್ದರು. ವೇದಿಕೆಯಲ್ಲಿ ಭಟ್ಕಳ ವೃತ್ತ ನಿರೀಕ್ಷಕ ಗಣೇಶ ಕೆ.ಎಲ್., ಉಪ ವಿಭಾಗದ ಉಪ ನಿರೀಕ್ಷರುಗಳು ಉಪಸ್ಥಿತರಿದ್ದರು.

Related posts

Leave a Reply