Header Ads
Header Ads
Breaking News

ಮಂಗಳೂರು ಏರ್‌ಪೋರ್ಟ್ ಟಾಯ್ಲೆಟ್‌ನಲ್ಲಿ ಚಿನ್ನದ ಬಿಸ್ಕತ್ ಪತ್ತೆ

ಬಜ್ಪೆಯಲ್ಲಿರುವ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು ಶೌಚಾಲಯದವೊಂದರಲ್ಲಿ 1,166.5 ಚಿನ್ನವನ್ನು ಪತ್ತೆಹಚ್ಚಿದ್ದಾರೆ.
ದುಬೈಯಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಶುಕ್ರವಾರ ರಾತ್ರಿ ಆಗಮಿಸಿದ ಸ್ಪೈಸ್‌ಜೆಟ್‌ನ ಪ್ರಯಾಣಿಕನೋರ್ವರು ಇದನ್ನು ಶೌಚಾಲಯದಲ್ಲಿ ಬಿಟ್ಟು ಹೋಗಿರಬೇಕೆಂದು ಶಂಕಿಸಲಾಗಿದೆ. ಶೌಚಾಲಯದಲ್ಲಿ ಪ್ಯಾಕ್ ಮಾಡಲಾಗಿದ್ದ ವಸ್ತುವೊಂದು ಕಂಡುಬಂದದ್ದರಿಂದ ಅದನ್ನು ತೆರೆದು ನೋಡಿದಾದ 10 ಚಿನ್ನದ ಬಾರ್‌ಗಳು ಪತ್ತೆಯಾಗಿದೆ. ಪತ್ತೆಯಾದ ಚಿನ್ನದ ಒಟ್ಟು ಮೌಲ್ಯ 34,17,845  ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.

Related posts