Header Ads
Breaking News

ವಿಶ್ವ ಶಾಂತಿ ದಿನಾಚರಣೆ ಅಂಗವಾಗಿ ಯೆಯ್ಯಾಡಿಯಲ್ಲಿ ಬೀದಿ ನಾಟಕ; ಮೌಂಟ್ ಕಾರ್ಮೆಲ್ ಸೆಂಟ್ರಲ್ ಸ್ಕೂಲ್ ವತಿಯಿಂದ ಆಯೋಜನೆ

ವಿಶ್ವ ಶಾಂತಿ ದಿನಾಚರಣೆಯ ಅಂಗವಾಗಿ ಮೌಂಟ್ ಕಾರ್ಮೆಲ್ ಸೆಂಟ್ರಲ್ ಸ್ಕೂಲ್ ವತಿಯಿಂದ ಶಾಲೆಯ ವಿದ್ಯಾರ್ಥಿಗಳು ನಗರದಲ್ಲಿ ಶಾಂತಿ ಸಂಕೇತವನ್ನು ಸಾರುವ ಬೀದಿ ನಾಟಕವನ್ನು ಪ್ರದರ್ಶಿಸಿದ್ದರು. ಮಹಾತ್ಮ ಗಾಂಧೀಜಿಯವರು ಹುತಾತ್ಮರಾದ ದಿನವನ್ನು ಶಾಂತಿ ದಿನಾಚರಣೆಯನ್ನಾಗಿ ಆಚರಿಸುತ್ತಿದ್ದು, ಶಾಂತಿಯ ಸಂದೇಶವನ್ನು ಸಾರುವ ನಿಟ್ಟಿನಲ್ಲಿ ಮೌಂಟ್ ಕಾರ್ಮೆಲ್ ಸೆಂಟ್ರಲ್ ಸ್ಕೂಲ್‍ನ ವಿದ್ಯಾರ್ಥಿಗಳು ಜನರಿಗೆ ವಿಭಿನ್ನ ರೀತಿಯ ಮೂಲ ಬೀದಿ ನಾಟಕವನ್ನು ನಗರದ ಎಲ್ಲೆಡೆ ಇಂದು ಪ್ರದರ್ಶಿಸುತ್ತಿದ್ದು ಯೆಯ್ಯಾಡಿಯ ಪರಿಸರದಲ್ಲು ಪ್ರದರ್ಶಿಸಿದರು.
ಇನ್ನೂ ಈ ವೇಳೆ ಮಾತನಾಡಿದ ಸಿಸ್ಟರ್ ಕರಿಸಿಮಾ ಅವರು, ಮೌಂಟ್ ಕಾರ್ಮೆಲ್ ಸೆಂಟ್ರಲ್ ಸ್ಕೂಲ್ ಪ್ರತಿ ವರ್ಷದಂತೆ ಈ ವರ್ಷವಿ ಇಂತಹಾ ಶಾಂತಿ ದಿನಾಚರಣೆಯ ಅಂಗವಾಗಿ ವಿಭಿನ್ನವಾಗಿ ಬೀದಿ ನಾಟಕವನ್ನು ನಡೆಸುತ್ತಿದೆ. ಇದರಿಂದಾಗಿ ಇಡೀ ವಿಶ್ವದಲ್ಲಿಯೇ ಶಾಂತಿಯನ್ನು ನೆಲೆಸಬೇಕಾಗಿದೆ ಜನರ ಮನದಲ್ಲಿ ಶಾಂತಿಯು ನೆಲೆಸಬೇಕಾಗಿದೆ ಎಂದರು.ಶಾಂತಿಯನ್ನು ಜಗತ್ತಿನೆಲ್ಲೆಡೆ ಸಾರುವ ನಿಟ್ಟಿನಲ್ಲಿ ಇಂತಹಾ ಕಾರ್ಯಕ್ರಮಗಳ ಮೂಲಕ ಶಾಂತಿಯ ಬಗ್ಗೆ ಜನರ ಮನವನ್ನು ಮುಟ್ಟಿಸುವ ಕಾರ್ಯಕ್ರಮವನ್ನು ಮೌಂಟ್ ಕಾರ್ಮೆಲ್ ಸೆಂಟ್ರಲ್ ಸ್ಕೂಲ್ ನಡೆಸುತ್ತಿದೆ.

Related posts

Leave a Reply

Your email address will not be published. Required fields are marked *