Header Ads
Breaking News

ಮಂಚಿ ಬೊಲ್ಪು ಕಲಾ ತಂಡದ 25ನೇ ವಾರ್ಷಿಕೋತ್ಸವ

ಬಂಟ್ವಾಳ ತಾಲೂಕಿನ ಮಂಚಿ ಬೋಲ್ಪು ಕಲಾ ತಂಡದ 25ನೇ ವಾರ್ಷಿಕೋತ್ಸವ ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ದಿ.ಕೊರಗಪ್ಪ ಶಿಂಗಾರಕೋಡಿಯವರ ಎರಡನೇ ವರ್ಷದ ಸಂಸ್ಕರಣಾ ಕಾರ್ಯಕ್ರಮವು ಮೇ.4 ರಂದು ಮಂಚಿ ಶ್ರೀ ಅರಸು ಕುರಿಯಾಡಿತ್ತಾಯ ಮೂವರು ದೈವಂಗಳ ಮಾಡದ ವಠಾರದಲ್ಲಿ ನಡೆಯಲಿದೆ ಎಂದು ಕಲಾತಂಡದ ಸಂಚಾಲಕ ಎಂ.ಡಿ.ಮಂಚಿ ತಿಳಿಸಿದ್ದಾರೆ.
ಬುಧವಾರ ಸಂಜೆ ಬಂಟ್ವಾಳ ಪ್ರೆಸ್‌ಕ್ಲಬ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿರಿಯ ಯಕ್ಷಗಾನ ಕಲಾವಿದ ಸರಪಾಡಿ ಅಶೋಕ್ ಶೆಟ್ಟಿಯವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಚಿಣ್ಣರಲೋಕ ಸೇವಾಟ್ರಸ್ಟ್‌ನ ಸಂಚಾಲಕ ಮೋಹನದಾಸ ಕೊಟ್ಟಾರಿ ಸಭಾಧ್ಯಕ್ಷತೆ ವಹಿಸಲಿದ್ದಾರೆ ಎಂದು ವಿವರಿಸಿದರು. ಹಲವಾರು ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದು, ಈ ಸಂದರ್ಭದಲ್ಲಿ ಸಾಧಕರಾದ ಯಕ್ಷದ್ರುವ ಪಟ್ಲ ಸತೀಶ ಶೆಟ್ಟಿ, ರವಿಕುಮಾರ್ ಮಂಚಿ, ಪುನೀತ್ ಬೋಳಿಯಾರ್, ಆನಂದ ತಾಮರಾಜೆ ಅವರನ್ನು ಸನ್ಮಾನಿಸಲಾಗುವುದು ಬಳಿಕ ಪ್ರಜ್ವಲ್ ಮತ್ತು ದೀಪಿಕಾ ಅವರಿಂದ ನೃತ್ಯ ವೈಭವ ಹಾಗೂ ಜಿಲ್ಲೆಯ ಹೆಸರಾಂತ ಕಲಾವಿದರ ಕೂಡುವಿಕೆಯಲ್ಲಿ ಯಕ್ಷಗಾನ ಬಯಲಾಟವು ಜರಗಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕಲಾತಂಡದ ಸಂಚಾಲಕ ವಿಮಲೇಶ್ ಶಿಂಗಾರಕೋಡಿ, ಅಧ್ಯಕ್ಷ ಆಶೋಕ್ ಬಿ.ರವರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *