Header Ads
Breaking News

ಮಂಜನಾಡಿಯ ಕಲ್ಕಟ್ಟದಲ್ಲಿ ನೂತನ ಬಸ್ ತಂಗುದಾಣ ಸಚಿವ ಯು.ಟಿ. ಖಾದರ್‌ರಿಂದ ಉದ್ಘಾಟನೆ

ಕಲ್ಕಟ್ಟದ ಎಸ್ಸೆಸ್ಸೆಫ್ ಮತ್ತು ತಕ್ವತುಲ್ ಇಸ್ಲಾಂ ಯಂಗ್‌ಮೇನ್ಸ್ ಅಸೋಶಿಯೆಷನ್ ವತಿಯಿಂದ ಮಂಜನಾಡಿ ಗ್ರಾಮದ ಕಲ್ಕಟ್ಟದಲ್ಲಿ ನೂತನವಾಗಿ ನಿರ್ಮಿಸಿದ ಸಾರ್ವಜನಿಕ ಬಸ್ಸು ತಂಗುದಾಣವನ್ನು ವಸತಿ ಮತ್ತು ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಕಲ್ಕಟ್ಟ ಜಂಕ್ಷನನ್ನು ಸುಸಜ್ಜಿತವಾಗಿ ಎಲ್ಲಾ ಮೂಲಭೂತ ಸೌಕರ್ಯಗಳೊಂದಿಗೆ ರೂಪಿಸಲಾಗುವುದು ಎಂದು ಹೇಳಿದರು.ಇಲ್ಯಾಸ್ ಜುಮಾ ಮಸೀದಿ ಅಧ್ಯಕ್ಷ ಇಝ್ಝುದ್ದೀನ್ ಅಹ್ಸನಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಪಾನೀರ್ ದಯಮಾತೆ ಇಗರ್ಜಿಯ ಧರ್ಮಗುರು ಫಾ.ಡೆನಿಸ್ ಸುವಾರಿಸ್ ಮತ್ತು ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷ ಮುಹಮ್ಮದ್ ಮೋನು ಕಾರ್ಯಕ್ರಮಕ್ಕೆ ಶುಭಹಾರೈಸಿದರು.

Related posts

Leave a Reply