Header Ads
Header Ads
Breaking News

ಮಂಜನಾಡಿ: ಗ್ರಾಮಸ್ಥರಿಗೆ ಹಕ್ಕುಪತ್ರ ವಿತರಣಾ ಕಾರ್ಯಕ್ರಮ

ಮಂಜನಾಡಿ ಗ್ರಾಮ ಪಂಚಾಯಿತಿಯ ದಿ.ಯು.ಟಿ. ಫರೀದ್ ಸಭಾಂಗಣದ ಉದ್ಘಾಟನೆ ಮತ್ತು ಗ್ರಾಮಸ್ಥರಿಗೆ ಹಕ್ಕುಪತ್ರ ವಿತರಣಾ ಕಾರ್ಯಕ್ರಮವು ದಿ.ಯು.ಟಿ. ಫರೀದ್ ಸಭಾಂಗಣ ನಡೆಯಿತು.ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ ಖಾದರ್ ಮಂಜನಾಡಿ ಗ್ರಾ.ಪಂ ನಿರ್ಮಿಸಿದ ಯು.ಟಿ. ಫರೀದ್ ಸಭಾಂಗಣ ಉದ್ಘಾಟಿಸಿ ಮತ್ತು ಗ್ರಾಮಸ್ಥರಿಗೆ ಹಕ್ಕುಪತ್ರ ವಿತರಿಸಿ ಮಾತನಾಡಿ, ಶಾಶ್ವತ ಕುಡಿಯುವ ನೀರಿನ ಯೋಜನೆ ತನ್ನ ಕ್ಷೇತ್ರಕ್ಕೆ ಒದಗಿಸುವುದು ಬಹುಮುಖ್ಯ ಗುರಿಯಾಗಿದೆ ಕುಮಾರಸ್ವಾಮಿ ಸರಕಾರವೂ ಹಿಂದಿನ ಸರಕಾರದ ಕಾರ್ಯಕ್ರಮಗಳನ್ನು ಮುಂದುವರಿಸುತ್ತಾ ಬರುತ್ತಿದೆ.

35 ಲಕ್ಷ ಕುಟುಂಬಗಳಿಗೆ ರೇಷನ್ ಕಾರ್ಡು ಕೊಡುವ ಕೆಲಸ ತನ್ನ ಅವಧಿಯಲ್ಲಿ ನಡೆದಿದೆ ಎಂದರು.ತಾಲೂಕು ಪಂಚಾಯತ್ ಅಧ್ಯಕ್ಷ ಮಹಮ್ಮದ್ ಮೋನು ಮಲಾರ್ ಮಾತನಾಡಿ, ಎರಡು ಹೈಸ್ಕೂಲ್ ಇರುವ ಏಕೈಕ ಗ್ರಾಮ ಮಂಜನಾಡಿಯಾಗಿದೆ. 10 ದಿನ ಬಳ್ಳಾರಿಯಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡ ಏಕೈಕ ಕ್ಯಾಬಿನೆಟ್ ಸಚಿವರು ಹೈಕಮಾಂಡ್ ಸೂಚನೆಯಂತೆ ಶ್ರಮವಹಿಸಿ ದುಡಿದಿದ್ದಾರೆ.ಮಂಜನಾಡಿ ಗ್ರಾ.ಪಂ ಅಧ್ಯಕ್ಷ ಮಹಮ್ಮದ್ ಅಸೈ ಅಧ್ಯಕ್ಷತೆ ವಹಿಸಿದರು. ಈ ಸಂದರ್ಭದಲ್ಲಿ ಸಚಿವ ಯು.ಟಿ ಖಾದರ್, ಮಂಜನಾಡಿ ಗ್ರಾ.ಪಂ ಅಧ್ಯಕ್ಷ ಮೊಹಮ್ಮದ್ ಅಸೈ ಮತ್ತು ಮಾಜಿ. ಜಿ.ಪಂ ಸದಸ್ಯ ಎನ್.ಎಸ್ ಕರೀಂ ರವರನ್ನು ಸನ್ಮಾನಿಸಲಾಯಿತು.ಈ ಸಂದರ್ಭ ತಾಲೂಕು ಪಂಚಾಯತ್ ಅಧ್ಯಕ್ಷ ಮಹಮ್ಮದ್ ಮೋನು, ಜಿ.ಪಂ ಮಾಜಿ ಸದಸ್ಯ ಎನ್.ಎಸ್.ಕರೀಂ, ತಾ.ಪಂ ಸದಸ್ಯೆ ಸುರೇಖಾ ಚಂದ್ರಹಾಸ್ ಉಪಸ್ಥಿತರಿದ್ದರು.

Related posts

Leave a Reply