Header Ads
Header Ads
Breaking News

ಮಂಜಲ್ಪಡ್ಪು-ಉರ್ಲಾಂಡಿ ಸಂಪರ್ಕ ರಸ್ತೆಯ ಶಂಕು ಸ್ಥಾಪನೆ

ಪುತ್ತೂರು: ನಗರಸಭೆಯ ಎಸ್‌ಎಫ್‌ಸಿ ಫಂಡ್‌ನಲ್ಲಿ ರೂ. 5 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ 60ಮೀ. ಮಂಜಲ್ಪಡ್ಪು-ಉರ್ಲಾಂಡಿ ಸಂಪರ್ಕ ರಸ್ತೆಯ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಶುಕ್ರವಾರ ಪುತ್ತೂರು ಶಾಸಕ ಸಂಜೀವ ಮಠಂದೂರು ತೆಂಗಿನ ಕಾಯಿ ಒಡೆಯುವ ಮೂಲಕ ಶಂಕು ಸ್ಥಾಪನೆ ನೆರವೇರಿಸಿದರು.

ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಶಾಸಕ ಸಂಜೀವ ಮಠಂದೂರು, ಮಂಜಲ್ಪಡ್ಪು-ಉರ್ಲಾಂಡಿ ಸಂಪರ್ಕ ರಸ್ತೆಯನ್ನು ಕಾಂಕ್ರೀಟೀಕರಣ ಮಾಡಲು ನಗರಸಭೆಯಿಂದ ಯೋಜನೆ ಹಾಕಿಕೊಂಡಿರುವುದು ಉತ್ತಮ ವಿಚಾರ. ಈ ಭಾಗದಲ್ಲಿ ಪರಿಶಿಷ್ಠ ಜಾತಿ ಮತ್ತು ಪಂಗಡದ ಜನರು ಹೆಚ್ಚಾಗಿದ್ದು, ಅವರ ಕಲ್ಯಾಣ ಮತ್ತು ಅಭಿವೃದ್ಧಿಗೆ ಹೆಚ್ಚು ಪ್ರಾಶಸ್ತ್ಯ ನೀಡಲಾಗುತ್ತಿದೆ. ಗುಣಮಟ್ಟದ ಕಾಮಗಾರಿಯನ್ನು ಕಾಲಮಿತಿಯೊಳಗೆ ನಿರ್ಮಾಣ ಮಾಡುವ ವ್ಯವಸ್ಥೆ ಗುತ್ತಿಗೆದಾರರು ಮಾಡಬೇಕು. ರಸ್ತೆ ಆದಷ್ಟು ಬೇಗ ನಿರ್ಮಾಣಗೊಂಡರೆ ಈ ಭಾಗದ ಜನರ ಸಂಕಷ್ಟ ಬೇಗ ನಿವಾರಣೆಯಾಗಲು ಸಾಧ್ಯವಿದೆ ಎಂದರು.

ಈ ಸಂದರ್ಭ ಪುತ್ತೂರು ಬಿಜೆಪಿ ನಗರಮಂಡಲ ಅಧ್ಯಕ್ಷ ಕೆ. ಜೀವಂಧರ್ ಜೈನ್, ಪ್ರಧಾನ ಕಾರ್ಯದರ್ಶಿ ರಾಮದಾಸ್ ಹಾರಾಡಿ, ಪೌರಾಯುಕ್ತೆ ರೂಪ ಶೆಟ್ಟಿ, ನಗರಸಭಾ ಸದ್ಯರಾದ ಯಶೋಧ ಹರೀಶ್, ಗೌರಿ ಬನ್ನೂರು, ನವೀನ್ ಕುಮಾರ್, ಪಿ.ಜಿ. ಜಗನ್ನೀವಾಸ್ ರಾವ್, ತಾಲೂಕು ಪಂಚಾಯತ್ ಸದಸ್ಯ ಸಾಜ ರಾಧಾಕೃಷ್ಣ ಆಳ್ವ,
ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply