Header Ads
Header Ads
Breaking News

ಮಂಜೇಶ್ವರ:ಕಡಂಬಾರು ಮೊಂಟೆಸರಿ ಶಾಲೆಯಲ್ಲಿ ಕ್ರೀಡಾ ದಿನಾಚರಣೆ

ಮಂಜೇಶ್ವರದ ಪ್ರಖ್ಯಾತ ಉದ್ಯಮಿಯಾಗಿರುವ ಕಡಂಬಾರ್ ಬಾವ ಹಾಜಿಯವರ ನೇತೃತ್ವದಲ್ಲಿ ಸ್ಥಾಪಿತಗೊಂಡ, ಮಂಜೇಶ್ವರ ವ್ಯಾಪ್ತಿಯ ಕಡಂಬಾರಿನ ಹೃದಯ ಭಾಗದಲ್ಲಿ ಸುಸಜ್ಜಿತ ಕಟ್ಟಡಲ್ಲಿ ಸರ್ವ ಸಿದ್ಧತೆಗಳೊಂದಿಗೆ ತಯಾರಾಗಿದೆ ಮೊಂಟೆಸರಿ ಸ್ಕೂಲ್. ಈ ಲಿಟ್ಲ ಎಕ್ಸ್‌ಪ್ಲೋರ್‌ಸ್ ದಿ ಫ್ರೀ ಸ್ಕೂಲ್‌ನಲ್ಲಿ ಕ್ರೀಡಾ ದಿನವನ್ನು ಆಚರಿಸಲಾಯಿತು.

 ಸ್ಥಳೀಯ ನಿವಾಸಿಗಳಿಗೆ ಉತ್ತಮವಾದ ವಿದ್ಯಾಭ್ಯಾಸವನ್ನು ಕೊಡುವ ಉದ್ದೇಶದಿಂದ ಮೊಂಟೆಸೊರಿ ಕಲಿಕೆಯ ವಿಧಾನದಿಂದ ಸ್ಥಳೀಯ ವಿದ್ಯಾರ್ಥಿಗಳನ್ನು ಮುಂದಿನ ತಲೆಮಾರಿನ ಒಬ್ಬ ಉತ್ತಮ ಪ್ರಜೆಯನ್ನಾಗಿ ಮಾಡುವ ಉದ್ದೇಶದಿಂದ ಕಡಂಬಾರಿನ ಹೃದಯ ಭಾಗದಲ್ಲಿ ಸುಸಜ್ಜಿತವಾದ ಕಟ್ಟಡದಲ್ಲಿ ಸರ್ವ ಸಿದ್ದತೆಗಳೊಂದಿಗೆ ತಯಾರಾದ ಮಂಜೇಶ್ವರದ ಇತಿಹಾಸದಲ್ಲೇ ಮೊತ್ತ ಮೊದಲಾಗಿ ಮೊಂಟೊಸೊರಿ ವಿದ್ಯಾಭ್ಯಾಸವನ್ನು ನೀಡಲು ಸ್ಥಾಪಣೆಯಾದ ಲಿಟ್ಲ್ ಎಕ್ಸ್ ಪ್ಲೋರರ್ಸ್ ದಿ ಫ್ರೀ ಸ್ಕೂಲ್ ನಲ್ಲಿ ಶನಿವಾರ ಕ್ರೀಡಾ ದಿನವನ್ನು ಆಚರಿಸಲಾಯಿತು.

ಶಾಲಾ ಕೋರ್ಡಿನೇಟರ್ ಪೂರ್ಣಿಮಾ ಎಸ್ ರೈ ಯವರ ಅಧ್ಯಕ್ಷತೆಯಲ್ಲಿ ನಡೆದ ಶಾಲಾ ವಿದ್ಯಾರ್ಥಿಗಳ ಕ್ರೀಡಾ ಕೂಟವನ್ನು ಭಾರತದ ಪ್ರೊ ಕಬಡ್ಡಿ ಕೋಚ್ ಜಗದೀಶ್ ಕುಂಬಳೆ ಶಾಂತಿಯ ಸಂಕೇತವಾದ ಪಾರಿವಾಳವನ್ನು ಬಾನೆತ್ತರಕ್ಕೆ ಹಾರಿಸಿ ವಿದ್ಯಾರ್ಥಿಗಳ ಕ್ರೀಡೆಗೆ ಚಾಲನೆ ನೀಡಿದರು.

ಬಳಿಕ ವಿದ್ಯಾರ್ಥಿಗಳು ಕ್ರೀಡಾ ಜ್ಯೋತಿಯನ್ನು ಕ್ರೀಡಾಂಗಣದ ಸುತ್ತ ತಂದು ಬಳಿಕ ಜಗದೀಶ್ ಕುಂಬಳೆಯವರಿಗೆ ಹಸ್ತಾತರಿಸಿದರು. ಕ್ರೀಡಾ ಕೂಟವನ್ನು ಉದ್ಘಾಟಿಸಿ ಮಾತನಾಡಿದ ಅವರು ಚಿಣ್ಣರ ಕ್ರೀಡಾ ಕೂಟದಲ್ಲಿ ಭಾಗವಹಿಸಿರುವುದು ಅತಿಯಾದ ಸಂತೋಷವನ್ನು ತಂದಿದೆ. ಕಡಂಬಾರಿನಲ್ಲಿ ಆರಂಭಗೊಂಡ ಈ ಚಿಣ್ಣರ ಶಾಲೆ ಇನ್ನೂ ಎತ್ತರಕ್ಕೆ ಬೆಳೆಯಲಿ ಎಂದು ಶುಭ ಹಾರೈಸಿದರು.

ಬಳಿಕ ಶಾಲಾ ಸಾರ್ವಜನಿಕ ಸಂಬಂಧ ಅಧಿಕಾರಿ ಸೌಮ್ಯ ಲತಾ ಮಾತನಾಡಿ ಉತ್ತಮವಾದ ಮೊಂಟೊಸರಿ ವಿದ್ಯಾಭ್ಯಾಸವನ್ನು ಮಕ್ಕಳಿಗೆ ನೀಡುವ ಉದ್ದೇಶದಿಂದ ಈ ಶಾಲೆಯನ್ನು ಸ್ಥಾಪಿಸಲಾಗಿದೆ. ಇದಕ್ಕೆ ಒಂದು ವರ್ಷದಲ್ಲೆ ಉತ್ತಮವಾದ ಪ್ರತಿಕ್ರಿಯೆ ಮೂಡಿ ಬಂದಿದೆ. ಈಗಾಗಲೆ ಇಲ್ಲಿ 30 ವಿದ್ಯಾರ್ಥಿಗಳು ಕಲಿಯುತಿದ್ದಾರೆ. ಮಕ್ಕಳ ಕಲಿಕೆ ಉತ್ತಮವಾದ ಪ್ರೋತ್ಸಾಹವನ್ನು ನೀಡಲಾಗುತ್ತಿದೆ ಎಂದು ಹೇಳಿದರು.

ಬಳಿಕ ಅಧ್ಯಕ್ಷತೆಯನ್ನು ವಹಿಸಿದ ಶಾಲಾ ಕೋರ್ಡಿನೇಟರ್ ಪೂರ್ಣಿಮಾ ಎಸ್ ರೈ ಮಾತನಾಡಿ ಕಡಂಬಾರಿನಲ್ಲಿ ಸ್ಥಾಪಿತವಾಗಿರುವ ಮೊಂಟೊಸರಿ ಶಾಲೆಯಲ್ಲಿ ಉತ್ತಮವಾದ ವಿಧ್ಯಾಭ್ಯಾಸದ ಜೊತೆಯಾಗಿ ಚಿಣ್ಣರನ್ನು ಇತರ ಚಟುವಟಿಕೆಗಳಲ್ಲೂ ತೊಡಗಿಸಿಕೊಳ್ಳಲಾಗುತ್ತದೆ. ಮಕ್ಕಳ ಪ್ರತಿಯೊಂದು ವಿಷಯದಲ್ಲೂ ಹೆಚ್ಚಿನ ಗಮನವನ್ನು ನೀಡಲಾಗುತ್ತದೆ. ಈಗಾಗಲೇ ಪೋಷಕರು ಕೂಡಾ ತಮ್ಮ ಮಕ್ಕಳ ಕಲಿಯುವಿಕೆಯಲ್ಲಿ ಸಂತೃಪ್ತರಾಗಿದ್ದಾರೆ. ಇನ್ನು ಮುಂದಿನ ದಿನಗಳಲ್ಲಿ ಚಿಣ್ಣರನ್ನು ಇನ್ನೂ ಹೆಚ್ಚಿನ ಚಟುವಟಿಕೆಗಳಲ್ಲಿ ತೊಡಗಿಸಿ ಉತ್ತಮ ಪ್ರಜ್ಞಾವಂತ ವಿದ್ಯಾರ್ಥಿಯನ್ನಾಗಿಸಲು ಪ್ರಯತ್ನಿಸುತ್ತಿರುವುದಾಗಿ ಅವರು ಹೇಳಿದರು.

ಈ ಸಂದರ್ಭ ಶಾಲಾ ಟ್ರಸ್ಟೀ ಮುಖ್ಯಸ್ಥ ಕೆ ಎ ಮನ್ಸೂರ್ ಮುಖ್ಯ ಅತಿಥಿಯಾಗಿದ್ದರು. ಶಾಲಾ ಪೋಷಕರು, ಊರವರು ಸೇರಿದಂತೆ ನೂರರು ಮಂದಿ ಮಕ್ಕಳ ಕ್ರೀಡಾ ಕೂಟವನ್ನು ವೀಕ್ಷಿಸಿದರು.

Related posts

Leave a Reply