Header Ads
Header Ads
Breaking News

ಮಂಜೇಶ್ವರಕಡಂಬಾರ್ ಸ್ಟೋರ್ ಹೌಸ್ ಪರಿಸರದಲ್ಲಿ ದಾರಿ ಸಮಸ್ಯೆ

 ಮಂಜೇಶ್ವರ ಗ್ರಾ.ಮ ಪಂಚಾಯತ್ ವ್ಯಾಪ್ತಿಯ ಹತ್ತನೇ ವಾರ್ಡು ಕಡಂಬಾರ್ ಸ್ಟೋರ್ ಹೌಸ್ ಪರಿಸರದಲ್ಲಿ ಸುಮಾರು 10 ರಿಂದ 15 ಕುಟುಂಬಗಳು ವಾಸಿಸುತ್ತಿದ್ದು, ಇವರಿಗೆ ಸರಿಯಾದ ಕಾಲು ದಾರಿ ಕೂಡ ಇಲ್ಲದೆ ಚರಂಡಿಯಲ್ಲೇ ಸಾಗಬೇಕಾದ ದುಸ್ಥಿತಿ ಬಂದೊದಗಿದೆ. ಈ ಬಗ್ಗೆ ಕಳೆದ ಹದಿನೈದು ವರ್ಷಗಳಿಂದ ಸಂಬಂಧಪಟ್ಟವರಲ್ಲಿ ಸಮಸ್ಯೆ ಹೇಳಿದರೂ ಸಂಬಂಧಪಟ್ಟವರು ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸದೆ ಇರುವ ಹಿನ್ನೆಲೆಯಲ್ಲಿ ಈ ಕುಟುಂಬಗಳು ಸಂಕಷ್ಟದಲ್ಲಿ ಸಿಲುಕಿದೆ.ಸುಮಾರು 15 ವರ್ಷಕ್ಕೆ ಮೊದಲು ಮಂಜೇಶ್ವರ ಗ್ರಾ. ಪಂ. ನಿಂದ ಮಂಜೂರಾದ ಸುಮಾರು ನಾಲ್ಕು ಲಕ್ಷ ರೂ. ನ ಫಂಡ್ ನಿಂದ ಎರಡು ಹಂತಗಳಲ್ಲಾಗಿ ಸುಮಾರು 100 ಮೀಟರಿನಲ್ಲಿ ಚರಂಡಿ ವ್ಯವಸ್ಥೆಯನ್ನು ಮುಚ್ಚಳವನ್ನು ಅಳವಡಿಸಿ ಕೊಡಲಾಗಿತ್ತು. ಅದರ ಬಳಿಕ ಇತ್ತ ಕಡೆ ಸಂಬಂಧಪಟ್ಟವರು ತಿರುಗಿಯೂ ನೋಡಲಿಲ್ಲವೆಂಬುದಾಗಿ ಸ್ಥಳೀಯರು ಮಾದ್ಯಮಗಳ ಮುಂದೆ ಆರೋಪಿಸಿದ್ದಾರೆ.ಈ ಭಾಗಕ್ಕೆ ವಿದ್ಯಾರ್ಥಿಗಳು, ವಯಸ್ಕರು, ಕೂಲಿ ಕಾರ್ಮಿಕರು ಸೇರಿದಂತೆ ಕುಟುಂಬ ಸದಸ್ಯರೆಲ್ಲರೂ ಈ ಚರಂಡಿಯಿಂದಲೇ ಸಾಗಬೇಕಾಗಿದೆ. ಕಾಂಕ್ರೀಟ್ ಹಾಕಲು ಉಳಿದಿರುವ ಸುಮಾರು 150ಮೀಟರ್ ತೋಡಿಗೆ ಚರಂಡಿಯನ್ನು ನಿರ್ಮಿಸಿ ಅದಕ್ಕೊಂದು ಮುಚ್ಚಳವನ್ನು ಅಳವಡಿಸಲು ಈ ಗ್ರಾಮದ ಜನರು ಮೊರೆ ಹೋಗದ ಕಚೇರಿಗಳಿಲ್ಲ. ಆದರೆ ಈ ತನಕ ಇವರ ಕೂಗನ್ನು ಕೇಳುವವರಿಲ್ಲ.ಅದೇ ರೀತಿ ಹಲವಾರು ವರ್ಷಗಳ ಹಿಂದೆ ಇದೇ ಕಾಲನಿಗೆ ಒಂದು ಕೊಳವೆ ಬಾವಿಯನ್ನು ಅಳವಡಿಸಲಾಗಿದ್ದರೂ ಇದಕ್ಕೊಂದು ಟ್ಯಾಂಕ್ ನಿರ್ಮಿಸುವಂತೆ ಅದೆಷ್ಟೋ ಸಲ ಸ್ಥಳೀಯರು ಸಂಬಂಧಪಟ್ಟವರಲ್ಲಿ ಬೇಡಿ ಕೊಂಡರೂ ಯಾವುದೇ ಪ್ರತಿಕ್ರಿಯೆ ಇಲ್ಲವೆನ್ನಲಾಗಿದೆ. ಸಂಬಂಧಪಟ್ಟವರು ಇನ್ನಾದರೂ ಇತ್ತ ಕಡೆ ಗಮನ ಹರಿಸದೇ ಇದ್ದರೆ ಮುಂದಿನ ದಿನಗಳಲ್ಲಿ ಗ್ರಾ. ಪಂ. ಕಚೇರಿ ಮುಂಬಾಗದಲ್ಲಿ ಉಪವಾಸ ಸತ್ಯಾಗ್ರಹದಂತಹ ಪ್ರತಿಭಟನೆ ಮುಂದಾಗುವುದಾಗಿ ಸ್ಥಳೀಯರು ಎಚ್ಚರಿಕೆಯ ಕರೆಗಂಟೆ ಬಾರಿಸಿದ್ದಾರೆ.

Related posts

Leave a Reply