Header Ads
Breaking News

ಮಂಜೇಶ್ವರ:ಕಲಾ ಜಾಥಾ ಕನಲ್ ಪೂಕಲ್ ಹೊಸಂಗಡಿಯಲ್ಲಿ ಸಮಾಪ್ತಿ

ಕೇರಳ ಸ್ಕೂಲ್ ಟೀಚರ್ಸ್ ಅಸೋಸಿಯೇಷನ್ ಜಿಲ್ಲಾ ಕಲಾವೇದಿಕೆ ವತಿಯಿಂದ ಆಯೋಜಿಸಿದ್ದ ಕಲಾ ಜಾಥಾ *ಕನಲ್ ಪೂಕಲ್* ಮಂಜೇಶ್ವರ ಹೊಸಂಗಡಿಯಲ್ಲಿ ಸಂಪನ್ನ ಗೊಂಡಿತು.
ಕೇರಳ ನವೋತ್ಥಾನ ಚಳವಳಿಯ ಮೂಲಕ ಕೇರಳ ಗಳಿಸಿದ ಪುರೋಗತಿ ಹಾಗೂ ನವ ಕೇರಳ ಸಂದೇಶವನ್ನು ಸಾರುವ ನಾಟಕ ಹಾಗೂ ಸಂಗೀತ ನೃತ್ಯಗಳಿಂದ ಕಾರ್ಯಕ್ರಮ ಜನಮನಸ್ಸನ್ನು ಸೂರೆಗೊಂಡಿತು. ಮಾರ್ಚ್ 14 ರಂದು ಪರಪ್ಪದಲ್ಲಿ ಉದ್ಘಾಟನೆಗೊಂಡ ಕಲಾ ಜಾಥಾ ಕಾಸರಗೋಡು ಜಿಲ್ಲೆಯ ವಿವಿಧ ಕೇಂದ್ರಗಳಲ್ಲಿ ಪ್ರದರ್ಶನ ನೀಡಿ ಇಂದು ಮಂಜೇಶ್ವರ ಹೊಸಂಗಡಿಯಲ್ಲಿ ಸಮಾಪ್ತಿ ಗೊಂಡಿತು. ಸಮಾರೋಪ ಸಮಾರಂಭದಲ್ಲಿ ಪಿ.ಕೆ ಅಹಮ್ಮದ್ ಹುಸೈನ್ ಅಧ್ಯಕ್ಷತೆ ವಹಿಸಿದ್ದರು. ಕೆ.ಎಸ್. ಟಿ.ಎ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯೆ ಶಾಂತ ಕುಮಾರಿ, ಜಿಲ್ಲಾ ಕಾರ್ಯದರ್ಶಿ ದಿಲೀಪ್ ಕುಮಾರ್, ರೈತ ಸಂಘದ ನೇತಾರ ಚಂದ್ರಹಾಸ ಮಾಸ್ಟರ್ ಹಾಗೂ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ರು.

Related posts

Leave a Reply

Your email address will not be published. Required fields are marked *