Header Ads
Header Ads
Breaking News

ಮಂಜೇಶ್ವರ:ಚಾಲಕನ ನಿಯಂತ್ರಣ ತಪ್ಪಿದ ಬಸ್

 ಚಾಲಕನ ನಿಯಂತ್ರಣ ತಪ್ಪಿದ ಕರ್ನಾಟಕ ಕೆ ಎಸ್ ಆರ್ ಟಿ ಸಿ ಬಸ್ಸೊಂದು ಹೊಂಡಕ್ಕೆ ಮಗುಚಿದೆ.ಸೋಮವಾರ ಮದ್ಯಾಹ್ನ 12 ಗಂಟೆಯ ಸುಮಾರಿಗೆ ಪೊಸೋಟು ರಾಷ್ತ್ರೀಯ ಹೆದ್ದಾರಿಯಲ್ಲಿ ಈ ದುರ್ಘಟನೆ ಸಂಭವಿಸಿದೆ.ಮಂಗಳೂರಿನಿಂದ ಕಾಸರಗೋದು ಭಾಗಕ್ಕೆ ತೆರಳುತಿದ್ದ ಬಸ್ಸು ಅಪಘಾತಕ್ಕೀಡಾಗಿದೆ. ಅಪಘಾತಕ್ಕೀಡಾದ ಬಸ್ಸಿನಿಂದ ಪ್ರಯಾಣಿಕರನ್ನು ಊರವರು ಹಾಗೂ ಹೈವೇ ಪೊಲೀಸರು ಮೇಲಕ್ಕೆತ್ತಿದ್ದಾರೆ. ಕೆಲವೊಂದು ಮಂದಿಗೆ ಅಲ್ಪ ಪ್ರಮಾಣದ ಗಾಯಗಳನ್ನು ಹೊರತು ಪಡಿಸಿದರೆ ಉಳಿದವರು ಪಾರಾಗಿದ್ದಾರೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ಸಾಗಿಸಲಾಯಿತು.

ಬಸ್ಸುಗಳ ಪೈಪೋಟಿ ಸಂಚಾರದಲ್ಲಿ ಕಾಸರಗೋಡು ಮಂಗಳೂರು ರೂಟಿನಲ್ಲಿ ಅತ್ಯಧಿಕ ಅಪಘಾತಗಳು ಮಾಮೂಲಿಯಾಗಿವೆ. ಬಸ್ಸಿನ ಚಾಲಕರು ನಡೆಸುತ್ತಿರುವ ಪೈಪೋಟಿ ಸಂಚಾರಕ್ಕೊಂದು ನಿಯಂತ್ರಣವನ್ನು ಹೇರದಿದ್ದರೆ ಅಪಘಾತವನ್ನು ನಿಯಂತ್ರಿಸಲು ಸಾಧ್ಯವಿಲ್ಲದ ಮಾತೆಂಬುದಾಗಿ ಊರವರು ಹೇಳುತಿದ್ದಾರೆ. ಬಸ್ಸಿನ ಚಾಲಕ ಹಾಗೂ ನಿರ್ವಾಹಕ ಅಲ್ಪ ಸ್ವಲ್ಪ ಗಾಯಗಳಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಮಂಜೇಶ್ವರ ಪೊಲೀಸರು ಆಗಮಿಸಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತದಿಂದಾಗಿ ಸ್ಥಗಿತ ಗೊಂಡಿದ್ದ ವಾಹನ ಸಂಚಾರವನ್ನು ಸುಗಮ ಗೊಳಿಸಿದ್ದಾರೆ.

Related posts

Leave a Reply