Header Ads
Header Ads
Breaking News

ಮಂಜೇಶ್ವರ:ಡಾನ್‌ಬಾಸ್ಕೋ ಸೆಂಟ್ರಲ್ ಸ್ಕೂಲ್ 12ನೇ ವಾರ್ಷಿಕೋತ್ಸವ

ಮಂಜೇಶ್ವರ: ಡಾನ್ ಬಾಸ್ಕೋ ಸೆಂಟ್ರಲ್ ಸ್ಕೂಲ್ ಮಂಜೇಶ್ವರ ಇದರ 12 ನೇ ವಾರ್ಷಿಕೋತ್ಸವ ಭಾರೀ ವಿಜೃಂಭಣೆಯಿಂದ ನಡೆಯಿತು. ಶಾಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರಿಂದ ಸಾಂಸ್ಕೃತಿಕ ಕಲಾ ವೈಭವ, ವಿವಿಧ ನೃತ್ಯ ನಾಟಕ, ಮೈಮ್ ಶೋ, ಒಪ್ಪನ, ಪಿರಮಿಡ್ ಡ್ಯಾನ್ಸ್, ಜನಪದ ನೃತ್ಯ ಪ್ರೇಕ್ಷಕರ ಮನಸೂರೆ ಗೊಳಿಸಿತು.

ಶಾಲಾ ವಿದ್ಯಾರ್ಥಿಗಳ ಪ್ರಾರ್ಥಣೆಯ ಬಳಿಕ ಶಾಲೆಯ ಮುಖ್ಯೋಪಧ್ಯಾಯರಾದ ವಂದನೀಯ ಗುರು ಅಗಸ್ಟಿನ್ ತೆಕ್ಕಪೂಕೊಂಬಿಲ್ ಶಾಲಾ ವಾರ್ಷಿಕ ವರದಿ ವಾಚನಗೈದರುಬಳಿಕ ವಂದನೀಯ ಗುರು ಸನ್ನಿ ತುರುತ್ತಿಲ್ ರವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ವಂದನೀಯ ಗುರು ಜೋರ್ಜ್ ಪಯ್ಯಂತಡತ್ತಿಲ್ ದೀಪ ಬೆಳಗಿಸಿ ಉದ್ಘಾಟಿಸಿದರು.ಬಳಿಕ ಮಾತನಾಡಿದ ಅವರು ತುಂಬಾ ಶಾಂತವಾತಾವರಣನವಿರುವ ಡಾನ್ ಬೋಸ್ಕೋ ಶಾಲಾ ಆವರಣದಲ್ಲಿ ಇಂದು ನಾವು ಚಿಣ್ಣ ಮಕ್ಕಳೊಂದಿಗೆ ಸೇರಿ ಅವರ ಪ್ರತಿಭೆಗಳನ್ನು ಆಸ್ವಾದಿಸಲು ಸೇರಿದ್ದೇವೆ. ಹಿಂದೆ ಗುರುಕುಲದ ವ್ಯವಸ್ಥೆ ಇದ್ದಾಗ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕಿಂತ ಸಂಸ್ಕಾರಕ್ಕೆ ಹೆಚ್ಚಿನ ಪ್ರಾಶಸ್ತ್ಯವಿತ್ತು. ಇಂದು ಶಿಕ್ಷಣವೆ ಪ್ರಾಧಾನ್ಯತೆ ಪಡೆದು ಮಕ್ಕಳಿಗೆ ಸಿಗಬೇಕಾದ ಸಂಸ್ಕಾರದಲ್ಲಿ ಕೊರತೆ ಕಾಣುತ್ತಿದ್ದೇವೆ. ಸಂಸ್ಕಾರ ಇಲ್ಲದಿರುವುದರಿಂದಲೇ ಸಮಾಜದಲ್ಲಿ ಅಪರಾಧ ಕತ್ಯಗಳು ಸಂಭವಿಸುವುದು. ವಿದ್ಯಾಸಂಸ್ಥೆಗಳಲ್ಲಿ ಶಿಕ್ಷಣದೊಂದಿಗೆ ಸಂಸ್ಕಾರಕ್ಕೆ ಮಹತ್ವ ನೀಡಿ ತನ್ಮೂಲಕ ಸುಸಂಸ್ಕೃತ ಸಮಾಜದ ನಿರ್ಮಾಣಕ್ಕೆ ಸಹಕಾರಿಯಾಗಬೇಕಾಗಿದೆ ಎಂದು ಅವರು ಹೇಳಿದರು.ಬಳಿಕ ಶಾಲಾ ಮ್ಯಾಗಸಿನ್ ನನ್ನು ಮಂಜೇಶ್ವರ ಗ್ರಾ. ಪಂ. ಉಪಾಧ್ಯಕ್ಷೆ ಶಶಿಕಲಾ ಪ್ರಕಾಶಣ ಗೈದರು. ಬಳಿಕ ಮಾತನಾಡಿದ ಅವರು  ಪಂಚಾಯತು ಅಧ್ಯಕ್ಷರ ಅನುಪಸ್ಥಿತಿಯಲ್ಲಿ ನಾನು ಇಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೇನೆ. ಮಕ್ಕಳಿಗೆ ವಿಧ್ಯೆಯ ಜೊತೆ ಜೊತೆಯಾಗಿ ತಮ್ಮ ಪ್ರತಿಭೆಗಳನ್ನು ತಮ್ಮ ಹೆತ್ತವರ ಮುಂದೆ ತೋರ್ಪಡಿಸಲು ಇರುವ ಉತ್ತಮ ವೇದಿಕೆಯಾಗಿದೆ ಶಾಲಾ ವಾರ್ಷಿಕೋತ್ಸವ. ಮನಸ್ಸು ಸಮಾಜಕ್ಕೆ ತೆರೆದುಕೊಂಡು ಕಷ್ಟ – ಕಾರ್ಪಣ್ಯಗಳ ತಿಳಿವಳಿಕೆ ಮೂಲಕ ಎಳೆಯರು ತಮ್ಮ ಬದುಕನ್ನು ಸ್ವಾವಲಂಬಿಯಾಗಿಸಿಕೊಳ್ಳುವ ಮುಕ್ತ ವಾತಾವರಣ ಕಲ್ಪಿಸಬೇಕಾಗಿದೆ ಎಂದು ಹೇಳಿದರು.
ಬಳಿಕ ಶಾಲಾ ಕ್ರೀಡೋತ್ಸವದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ವಾರ್ಡ್ ಸದಸ್ಯೆ ಫಾತಿಮತ್ ಝುಹರಾ ಬಹುಮಾನಗಳನ್ನು ವಿತರಿಸಿದರು. ಬಳಿಕ ಮಾತನಾಡಿದ ಅವರು  ನಮ್ಮ ಪ್ರದೇಶದಲ್ಲೇ ಉತ್ತಮವಾದ ಶಿಕ್ಷಣವನ್ನು ನೀಡುವ ಶಾಲೆ ನನ್ನ ವಾರ್ಡ್ ನಲ್ಲಿರುವುದಕ್ಕೆ ನಾನು ಅತೀವ ಸಂತೋಷ ಪಡುತಿದ್ದೇನೆ. ಮನೆಯೇ ಮಕ್ಕಳಿಗೆ ಮೊದಲ ಪಾಠ ಶಾಲೆಯಾಗಿದೆ. ನಮ್ಮ ಇಂದಿನ ಮಕ್ಕಳಿಗೆ ನಾವು ಉತ್ತಮವಾದ ಪರಿಸರವನ್ನು ನಿರ್ಮಿಸಿಕೊಡಬೇಕಾಗಿದೆ. ಮಕ್ಕಳನ್ನು ಶಿಕ್ಷಕರ ಕೈಯಲ್ಲಿ ಕೊಟ್ಟ ಮಾತ್ರಕ್ಕೆ ತಂದೆ ತಾಯಿಯ ಜವಾಭ್ದಾರಿ ಅಥವಾ ಮಕ್ಕಳ ಭವಿಷ್ಯ ನಿರ್ಧಾರವಾಗುವುದಿಲ್ಲ. ಜೊತೆಯಾಗಿ ಪೋಷಕರು ಕೂಡಾ ಶಿಕ್ಷಕರೊಂದಿಗೆ ಸಹಕರಿಸಿದರೆ ಮಾತ್ರ ನಿಮ್ಮ ಮಕ್ಕಳು ಉತ್ತಮ ಪ್ರಜೆಯಾಗಲು ಸಾಧ್ಯ ಎಂಬುದಾಗಿ ಅವರು ಹೇಳಿದರು.ಬಳಿಕ ಓರಲ್ ಚಾಂಪ್ಯನ್ಸ್ ಗಳಿಗೆ ವಂದನೀಯ ಗುರು ವರ್ಗೀಸ್ ಬಹುಮಾನವನ್ನು ವಿತರಿಸಿದರು. ಕಲಾ ತಿಲಕಂ ವಿಜೇತ ವಿದ್ಯಾರ್ಥಿಗಳಿಗೆ ಶಾಲಾ ರಕ್ಶಕ ಶಿಕ್ಷಕ ಸಂಘದ ಅಧ್ಯಕ್ಷೆ ವಿನೀತಾ ಬಹುಮಾನವನ್ನು ವಿತರಿಸಿ ಶಭವನ್ನು ಹಾರೈಸಿದರು.ಈ ಸಂದರ್ಭ ವೇದಿಕೆಯಲ್ಲಿ ಸಿಸ್ಟರ್ ಮೋನಿಕಾ, ಸಿಸ್ಟರ್ ಎಡ್ಯಾನ, ಶಾಲಾ ವಿದ್ಯಾರ್ಥಿ ನಾಯಕ ಜೀವನ್ ಡಿ ಸೋಜ, ಶಾಲಾ ನೂತಣ ಕಟ್ಟಡದ ಗುತ್ತಿಗೆದಾರ ಬಿಜು ಒ. ಜೆ ಮೊದಲಾದವರು ಉಪಸ್ಥರಿದ್ದರು.ಬಳಿಕ ಶಾಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರಿಂದ ಸಾಂಸ್ಕೃತಿಕ ಕಲಾ ವೈಭವ ನಡೆಯಿತು. ವಿವಿಧ ನೃತ್ಯ ನಾಟಕ , ಮೈಮ್ ಶೋ, ಒಪ್ಪನ, ಪಿರಮಿಡ್ ಡ್ಯಾನ್ಸ್, ಕರಾಟೆ, ಜನಪದ ನೃತ್ಯ ಮುಂತಾದವುಗಳು ಸೇರಿದ್ದ ಪ್ರೇಕ್ಷಕರ ಮನಸೂರೆ ಗೊಳಿಸಿತು.ಬಳಿಕ ಕೇರಳದ ಖ್ಯಾತ ಜಾದೂಗಾರ ಚಕ್ರಪಾಣಿ ಕೋಝಿಕ್ಕೋಡ್ ರವರಿಂದ ಅಧ್ಬುತ ಇಂದ್ರಜಾಲ ಪ್ರದರ್ಶನ ನಡೆಯಿತು. ಈ ಪ್ರದರ್ಶನದಲ್ಲಿ ಜಾದೂಗಾರ ಬ್ಲೇಡನ್ನು ನುಂಗಿ ಬಳಿಕ ಅದನ್ನು ಹೊಟ್ಟೆಯಿಂದ ಹೊರಹಾಕುವ ಪ್ರದರ್ಶನ ವಿಶೇಷತೆಯಾಗಿತ್ತು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಪೋಷಕರು, ಊರವರು ಸೇರಿದಂತೆ ನೂರರು ಮಂದಿ ಪಾಲ್ಗೊಂಡರು.ಸಿಸ್ಟರ್ ಆಶಾ ಸ್ವಾಗತಸಿ ಕಾರ್ಯಕ್ರಮ ನಿರೂಪಿಸಿದರು. ಸಿಸ್ಟರ್ ಶಾಂತಿ ಲವೀನಾ ವಂದಿಸಿದರು

Related posts

Leave a Reply