Header Ads
Header Ads
Breaking News

ಮಂಜೇಶ್ವರದಲ್ಲಿ ಕನ್ನಡ ಪತ್ರಿಕೆಯ ದಿನಾಚರಣೆ

ಮಂಜೇಶ್ವರ: ಪತ್ರಿಕೆಯ ಧ್ವನಿ ಎಂದರೆ ಜನರ ಧ್ವನಿಯಾಗಿರುತ್ತದೆ. ಪ್ರಜಾ ಸತ್ತೆಯ ಉಳಿವಿಗೆ ಪತ್ರಿಕಾ ಮಾಧ್ಯಮದವರ ಸ್ವಾತಂತ್ರ್ಯ ಅತ್ಯಂತ ಅಗತ್ಯ ಹಾಗೂ ಅನಿವಾರ್ಯವೆಂಬುದಾಗಿ ಹಿರಿಯ ಪತ್ರಕರ್ತ ಹಾಗೂ ಕಾಸರಗೋಡು ಜಿಲ್ಲಾ ಪಂ. ಅಭಿವೃದ್ದಿ ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷದ್ ವರ್ಕಾಡಿ ಹೇಳಿದರು. ಅವರು ಮಂಜೇಶ್ವರದಲ್ಲಿ ಪತ್ರಕರ್ತರು ಏರ್ಪಡಿಸಿದ್ದ ಕನ್ನಡ ಪತ್ರಿಕೆಯ ದಿನಾಚರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು.ಯಾವುದೇ ಒಂದು ಪ್ರಜಾಸತ್ತಾತ್ಮಕ ದೇಶದ ಸರ್ವತೋಮುಖ ಅಭಿವೃದ್ದಿಯಲ್ಲಿ ಪತ್ರಕರ್ತರ ಪಾತ್ರ ಅತ್ಯಮೂಲ್ಯ.

ಪ್ರಜಾಸತ್ತೆಯ ಅತ್ಯಂತ ಮುಖ್ಯಾಂಶ ಎಂದರೆ ಸ್ವತಂತ್ರ ಹಾಗೂ ನಿರ್ಭೀತ ಪತ್ರಿಕಾ ಮಾಧ್ಯಮ.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೆಸ್ ಕ್ಲಬ್ ಅಧ್ಯಕ್ಷ ಆರಿಫ್ ಮಚ್ಚಂಪ್ಪಾಡಿ ವಹಿಸಿದರು. ಪತ್ರಕರ್ತರಾದ ಹನೀಸ್ ಉಪ್ಪಳ. ರತನ್ ಕುಮಾರ್, ಸಾಯಿಭದ್ರ ರೈ, ರವಿ ಪ್ರತಾಪ್ ನಗರ, ಜಗದೀಶ್ ಪ್ರತಾಪ್ ನಗರ ಸೇರಿದಂತೆ ಹಲವರು ಉಪಸ್ಥರಿದ್ದರು.

Related posts

Leave a Reply