Header Ads
Header Ads
Breaking News

ಮಂಜೇಶ್ವರದಲ್ಲಿ ಕ್ರಿಕೆಟ್ ಪಂದ್ಯಾಟ ಆಯೋಜನೆಯಲ್ಲಿ ಅಪಪ್ರಚಾರ

ಇತ್ತೀಚೆಗೆ ಕ್ರಿಕೆಟ್ ಪಂದ್ಯಾಟಕ್ಕೆ ಸಂಬಂಧಿಸಿ ಬೇಕೂರಿನಲ್ಲಿ ಕೋಮು ಭಾವನೆಯನ್ನು ಕೆರಳಿಸುವಂತಹ ಉದ್ರೇಕಕಾರಿ ಫ್ಲೆಕ್ಸ್ ಹಾಕಿರುವ ವಿಷಯಕ್ಕೂ ನಮಗೂ ಯಾವುದೇ ಸಂಬಂಧ ವಿಲ್ಲವೆಂಬುದಾಗಿ ಹಿರಣ್ಯ ಯುವಕ ವೃಂದದ ಪದಾಧಿಕಾರಿಯಾಗಿರುವ ಸುರೇಶ್ ಶೆಟ್ಟಿ ಜೋಡುಕಲ್ಲು ಎಂಬವರು ಸ್ಪಷ್ಟಪಡಿಸಿದರು.

ಅವರು ಮಂಜೇಶ್ವರ ಪತ್ರಿಕಾಭವನದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ, ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲ ತಾಣ ಹಾಗೂ ಕೆಲವೊಂದು ಸುದ್ದಿ ಮಾಧ್ಯಮಗಳಲ್ಲಿ ಹಿರಣ್ಯ ಯುವಕ ವೃಂದದ ಹೆಸರಲ್ಲಿ ಅಪಪ್ರಚಾರ ನಡೆಯುತಿದ್ದು, ಇದು ತಪ್ಪು ಕಲ್ಪನೆಯಿಂದಾಗಿ ಸಂಭವಿಸಿರುವುದಾಗಿ ಅವರು ಹೇಳಿದರು.

ಹಿರಣ್ಯ ಬಾಯ್ಸ್ ಎಂಬ ಹೆಸರಿನಲ್ಲಿ ಕೆಲವೊಂದು ಯುವಕರು ಕ್ರಿಕೆಟ್ ಆಟವನ್ನು ಆಯೋಜಿಸಿದ್ದು, ಈ ಪಂದ್ಯಾಟದಲ್ಲಿ ಮುಸಲ್ಮಾನರನ್ನು ಹೊರತು ಪಡಿಸಿ ಕೇವಲ ಹಿಂದೂಗಳಿಗೆ ಮಾತ್ರ ಪ್ರವೇಶ ಎಂಬುದಾಗಿ ಫ್ಲೆಕ್ಸ್ ನ್ನು ಹಾಕಿರುವುದು ವಿವಾದಕ್ಕೆ ಕಾರಣವಾಗಿತ್ತು. ಈ ವಿಷಯ ಹಿರಣ್ಯ ಯುವಕ ವೃಂದದ ಗಮನಕ್ಕೆ ಬಂದ ಕೂಡಲೇ ಆ ಆಟವನ್ನು ರದ್ದು ಗೊಳಿಸಿ ಆ ಫ್ಲೆಕ್ಸನ್ನು ತೆರವುಗೊಳಿಸಿ ಮಂಜೇಶ್ವರ ಠಾಣೆಯ ಪೊಲೀಸರ ಗಮನಕ್ಕೆ ತಂದು ಅಲ್ಲೇ ಅದನ್ನು ಇತ್ಯರ್ಥಗೊಳಿಸಲಾಗಿದೆ. ಆದರೆ ಸಾರ್ವಜನಿಕರ ಮಧ್ಯೆ ಹಿರಣ್ಯ ಯುವಕ ವೃಂದದ ಬಗ್ಗೆ ತಪ್ಪು ಭಾವಣೆ ಹುಟ್ಟು ಹಾಕಿರುವ ಹಿನ್ನೆಲೆಯಲ್ಲಿ ನಾವು ಸುದ್ದಿಗೋಷ್ಟಿಯನ್ನು ಕರೆದಿರುವುದಾಗಿ ಅವರು ಹೇಳಿದರು.

ಈ ಸಂದರ್ಭ ಸುದ್ದಿಗೋಷ್ಟಿಯಲ್ಲಿ ದೀಕ್ಷಿತ್ ಪೂಜಾರಿ, ಉಮೇಶ್ ಶೆಟ್ಟಿ ಬೊಳ್ಳಾರು, ಈಶ್ವರ ಪೂಜಾರಿ ಬೇಕೂರು ಹಾಗೂ ಧನಂಜಯ ಶೆಟ್ಟಿ ಬೇಕೂರು ಉಪಸ್ಥಿತರಿದ್ದರು.

Related posts

Leave a Reply