Header Ads
Header Ads
Breaking News

ಮಂಜೇಶ್ವರದಲ್ಲಿ ತುಳು ಭವನದ ಸ್ವಾಗತ ಸಮಿತಿಯ ಕಚೇರಿ ಉದ್ಘಾಟನೆ

ಮಂಜೇಶ್ವರ: ತುಳು ಅಕಾಡೆಮಿಯ ತುಳು ಭವನ ನಿರ್ಮಾಣದ ಶಿಲಾನ್ಯಾಸ ಕಾರ್ಯಕ್ರಮವು .27ರಂದು ಜರಗಲಿದ್ದು ಇದರ ಸ್ವಾಗತ ಸಮಿತಿಯ ಕಛೇರಿ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಮಂಜೇಶ್ವರ ಬ್ಲೋಕ್ ಪಂಚಾಯತ್ ಅಧ್ಯಕ್ಷರಾದ ಎ.ಕೆ.ಎಂ ಅಶ್ರಫ್ ಅವರು ಕಚೇರಿಯನ್ನು ಉದ್ಘಾಟಿಸಿದರು..
ಫೆಬ್ರವರಿ 27 ರಂದು ಕೇರಳ ವಿಧಾನ ಸಭಾ ಸ್ಪೀಕರ್ ಪಿ. ಶ್ರೀರಾಮಕೃಷ್ಣನ್ ಅವರು ಉದ್ಘಾಟನಾ ಕಾರ್ಯಕ್ರಮವನ್ನು ನೆರವೇರಿಸಲಿದ್ದಾರೆ.ಅಕಾಡೆಮಿಯ ಅಧ್ಯಕ್ಷ ಶ್ರೀ ಉಮೇಶ್ ಎಂ ಸಾಲಿಯಾನ್ ಅಧ್ಯಕ್ಷತೆ ವಹಿಸಿದ್ದರು. ಕೇರಳ ಸರಕಾರದ 1000ದಿನ ಕಾರ್ಯಕ್ರಮದ ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿಯಾದ ಮಂಜೇಶ್ವರ ತಹಶಿಲ್ದಾರ್ ಜೋನ್ ವರ್ಗೀಸ್, ಗೋವಿಂದ ಪೈ ಸ್ಮಾರಕ ಸಮಿತಿ ಕಾರ್ಯದರ್ಶಿ ಕೆ.ಆರ್.ಜಯಾನಂದ, ಕಾರ್ಯಕಾರಿ ಸಮಿತಿ ಸದಸ್ಯೆ ಗೀತಾ ವಿ ಸಾಮಾನಿ, ಮಂಜೇಶ್ವರ ಸಿ.ಡಿ.ಎಸ್ ಅಧ್ಯಕ್ಷೆ ಜ್ಯೋತಿ ಪ್ರಭ, ಮೊದಲಾದವರು ಶುಭ ಹಾರೈಸಿದರು.

Related posts

Leave a Reply

Your email address will not be published. Required fields are marked *