Header Ads
Header Ads
Breaking News

ಮಂಜೇಶ್ವರದಲ್ಲಿ ತ್ಯಾಜ್ಯ ನಿರ್ಮೂಲನೆಗೆ ವಿದ್ಯಾರ್ಥಿಗಳಿಂದ ಹೊಸ ಪ್ರಯೋಗ

ಮಂಜೇಶ್ವರ : ಇತ್ತೀಚಿನ ದಿನಗಳಲ್ಲಿ ತ್ಯಾಜ್ಯ ನಿರ್ಮೂಲನ ಗೊಳಿಸುವಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳು ಅದೆಷ್ಟೋ ಪ್ರಯತ್ನ ನಡೆಸಿದರೂ ಅದೆಲ್ಲವೂ ವಿಫಲವಾಗುತ್ತಿರುವ ಮದ್ಯೆ ಉಪ್ಪಳದ ಮಣಿ ಮುಂಡ ಶಾಲೆಯ ವಿದ್ಯಾರ್ಥಿಗಳು ಶಾಲೆಯಲ್ಲಿ ಪ್ರತಿಜ್ಞೆಯನ್ನು ಸ್ವೀಕರಿಸಿ ಪ್ಲಾಸ್ಟಿಕ್ ತ್ಯಾಜಗಳಿಗೊಂದು ನಾಂದಿ ಹಾಡುವ ರೀತಿಯಲ್ಲಿ ವಿನೂತನವಾದ ಕಾರ್ಯಕ್ರಮವನ್ನು ಹಮ್ಮಿಕೊಂಡು ಊರವರ ಪ್ರಶಂಶೆಗೆ ಪಾತ್ರರಾಗಿ ಇತರರಿಗೆ ಮಾದರಿಯಾಗಿದ್ದಾರೆ.ಪ್ಲಾಸ್ಟಿಕ್ ನಿರ್ಮೂಲನದ ಮೊದಲ ಹಂತವಾಗಿ ಶಾಲೆಯ ಪರಿಸರದ ಸುಮಾರು 50 ಮನೆಗಳನ್ನು ಆಯ್ಡುಕೊಂಡ ವಿದ್ಯಾರ್ಥಿಗಳು ಪ್ರತಿಯೊಂದು ಮನೆಗಳಿಗೂ ಅದೇ ರೀತಿ ಅದರ ಸಮೀಪದಲ್ಲಿರುವ ಅಂಗಡಿಗಳಿಗೆ ಭೇಟಿ ನೀಡಿ ಆ ಪರಿಸರದಲ್ಲಿ ತುಂಬಿ ಕೊಂಡಿದ್ದ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ವಿಲೇವಾರಿಗೊಳಿಸಿ.ಅದರಿಂದಾಗುವ ದುಷ್ಪರಿಣಾಮದ ಬಗ್ಗೆ ಮಾಹಿತಿಗಳನ್ನು ನೀಡಿ .

ಇನ್ನು ಮುಂದಕ್ಕೆ ಪ್ಲಾಸ್ಟಿಕ್ ಗಳನ್ನು ಯಾವುದೇ ಕಾರಣಕ್ಕೂ ಸಾರ್ವಜನಿಕ ಸ್ಥಳಗಳಲ್ಲಾಗಲೀ ಮನೆ ಪರಿಸರಗಳಲ್ಲಾಗಲೀ ಬಿಸಾಡಬಾರದು. ಪ್ರತೀ ದಿನ ಶೇಖರಣೆಯಾಗುವ ತ್ಯಾಜ್ಯಗಳನ್ನು ಮನೆಯಲ್ಲೇ ಶೇಖರಿಸಿಡಿ ಅದನ್ನು ತೆಗೆಯಲು ನಾವು ವಾರದಲ್ಲಿ ಒಂದು ಸಲ ನಾವು ತೆಗೆಯಲು ಬರುತ್ತೇವೆಂಬ ಭರವಸೆಯ ಮಾತುಗಳನ್ನಾಡಿರುವುದು ಪರಿಸರ ವಾಸಿಗಳಲ್ಲಿ ತಮ್ಮ ತಪ್ಪಿನ ಅರಿವನ್ನು ಮೂಡಿಸಿದೆ.ಇಲ್ಲವಾದರೆ ನಮ್ಮ ಶಾಲೆಗೆ ತಲುಪಿಸಿ ನಾವು ಅದನ್ನು ಸ್ಥಳೀಯಾಡಳಿತ ಸಂಸ್ಥೆಗೆ ತಲುಪಿಸುತ್ತೇವೆಂದು ಹೇಳಿದ್ದಾರೆ.ವಿದ್ಯಾರ್ಥಿಗಳಿಗೆ ಅದ್ಯಾಪಕರುಗಳು ಹಾಗೂ ಊರವರು ನೆರವಾದರು.ತ್ಯಾಜ್ಯವನ್ನು ವಿಲೇವಾರಿಗೊಳಿಸುವ ಸೆಲ್ಫೀ ತೆಗದು ಸಾಮಾಜಿಕ ಜಾಲ ತಾಣಗಳಲ್ಲಿ ಹರಿಯಲು ಬಿಡುತ್ತಿರುವ ಪ್ರಚಾರಕರ ಮಧ್ಯೆ ವಿದ್ಯಾರ್ಥಿಗಳ ಈ ನೂತನ ಪ್ರಯೋಗ ಜನ ಮನವನ್ನು ಗೆದ್ದಿದೆ.ಈ ಮೊದಲು ಕೂಡಾ ಇದೇ ಮಣಿ ಮುಂಡದ ಯುವಕರ ಬಳಗ ಲಹರಿಗೆ ವ್ಯಸನಿಗಳಾಗುತ್ತಿರುವ ಯುವಕರನ್ನು ಕ್ರೀಡೆಯತ್ತ ಆಕರ್ಷಿಸರಂತಾಗಲು ವರ್ಷಕೊಮ್ಮೆ ಮ್ಯಾರ್ಥಾನ್ ನಂತಹ ಕಾರ್ಯ ಕ್ರಮವನ್ನು ಆಯೋಜಿಸಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.ವಿದ್ಯಾರ್ಥಿಗಳ ಈ ನೂತನ ಪ್ರಯೋಗವನ್ನು ಸ್ಥಳೀಯಾಡಳಿತ ಸಂಸ್ಥೆ ಗಳು ಕೂಡಾ ಸ್ವಾವಾಗತಿಸಿದೆ;ಇನ್ನು ಮುಂದಿನ ದಿನಗಳಲ್ಲೂ ಪ್ಲಾಸ್ಟಿಕ್ ನಿವಾರಣೆಗೆ ರಜಾ ದಿನಗಳಲ್ಲೂ ಸಮಯವನ್ನು ಸದುಪಯೋಗ ಪಡಿಸುವುದಾಗಿ ವಿದ್ಯಾರ್ಥಿಗಳು ತಿಳಿಸಿದ್ದಾರೆ… ಇಂತಹ ಪ್ರಯೋಗಕ್ಕೆ ವಿದ್ಯಾರ್ಥಿ ಗಳಿಗೆ ಪ್ರೋತ್ಸಾಹವನ್ನು ನೀಡಿದ ಮಣಿಮುಂಡ ಶಾಲಾ ಆಡಳಿತ ಮಂಡಳಿ ಹಾಗೂ ಅದ್ಯಾಪಕರುಗಳು ಊರವರ ಪ್ರರಶಂಶೆಗೆ ಪಾತ್ರರಾಗಿದ್ದಾರೆ.

Related posts

Leave a Reply