Header Ads
Header Ads
Header Ads
Breaking News

ಮಂಜೇಶ್ವರದಲ್ಲಿ ನಿರಂತರ ವಿದ್ಯುತ್ ಮೊಟಕು ವಿದ್ಯುತ್ ಕಚೇರಿಗೆ ಎ‌ಐವೈ‌ಎಫ್‌ನಿಂದ ಪ್ರತಿಭಟನಾ ಮೆರವಣಿಗೆ

ನಿರಂತರ ವಿದ್ಯುತ್ ಮೊಟಕು ಗೊಳಿಸಿ ಎಲ್‌ಡಿ‌ಎಫ್ ಸರಕಾರಕ್ಕೆ ಕಳಂಕ ತರುವ ವಿದ್ಯುತ್ ಅಧಿಕಾರಿಗಳ ನಿಲುವನ್ನು ಪ್ರತಿಭಟಿಸಿ ಎ‌ಐವೈ‌ಎಫ್‌ನ ನೇತೃತ್ವದಲ್ಲಿ ಮಂಜೇಶ್ವರ ವಿದ್ಯುತ್ ಸೆಕ್ಷನ್ ಕಚೇರಿಗೆ ಪ್ರತಿಭಟನಾ ಮೆರವಣಿಗೆ ಹಾಗೂ ಧರಣಿ ನಡೆಯಿತು.

ಮಂಜೇಶ್ವರ ರಿಜಿಸ್ಟ್ರಾರ್ ಕಚೇರಿಯಿಂದ ಹೊರಟ ಪ್ರತಿಭಟನಾ ಮೆರವಣಿಗೆಯಲ್ಲಿ ಹಲವಾರು ಮಂದಿ ಪಾಲ್ಗೊಂಡರು. ಬಳಿಕ ವಿದ್ಯುತ್ ಸೆಕ್ಷ ಕಚೇರಿ ಮುಂಬಾಗದಲ್ಲಿ ಎಂಸಿ ಅಜಿತ್ ರವರ ಅಧ್ಯಕ್ಷತೆಯಲ್ಲಿ ನಡೆದ ಪ್ರತಿಭಟನಾ ಧರಣಿಯನ್ನು ಉದ್ದೇಶಿಸಿ ಸಿಪಿ‌ಐ ಜಿಲ್ಲಾ ಜೊತೆ ಕಾರ್ಯದರ್ಶಿ ಬಿ ವಿ ರಾಜನ್ ಮಾತನಾಡಿ ಸಂಪೂರ್ಣ ವಿದ್ಯುತ್ತೀಕರಣ ಎಂದು ಘೋಷಣೆ ಮಾಡಿದ ಕೇರಳ ಎಡರಂಗ ಸರಕಾರಕ್ಕೆ ಕಳಂಕವನ್ನು ತರುವ ರೀತಿಯಲ್ಲಿ ವಿದ್ಯುತ್ ಮೊಟಕುಗೊಂಡರು ಕಚೇರಿಯ ಕುರ್ಚಿಯಿಂದ ಅಲುಗಾಡದೆ ಗ್ರಾಹಕರನ್ನು ಸತಾಯಿಸುತ್ತಿರುವ ವಿದ್ಯುತ್ ಅಧಿಕಾರಿಗಳ ವರ್ತನೆ ಖಂಡನೀಯ ಎಂದರು. ಈ ಸಂದರ್ಭ ವಲಯ ಕಾರ್ಯದರ್ಶಿ ಜಯರಾಂ ಬಲ್ಲಂಗುಡೇಲ್, ದಯಾಕರ ಮಾಡ, ಶಿಶೋನ್ ಕುಲೂರು, ಶಾಂತ ರಾಮ, ಮುಸ್ತಫ ಮೊದಲದವರು ಹಾಜರಿದ್ದರು.

ವರದಿ: ರೆಹಮಾನ್ ಉದ್ಯಾವರ

Related posts

Leave a Reply