Header Ads
Breaking News

ಮಂಜೇಶ್ವರದಲ್ಲಿ ಫುಟ್ಬಾಲ್ ಚಾಂಪ್ಯನ್ಸ್ ಸೀಸನ್ 2: ರಾಜ್ಯಮಟ್ಟದ ಕಬಡ್ಡಿಪಟು ಸುಕೇಶ್ ಕುಮಾರ್‌ರಿಗೆ ಸನ್ಮಾನ

ಮಂಜೇಶ್ವರ: ಎಂ ಎಸ್ ಎಫ್ ಮಂಜೇಶ್ವರ ಗ್ರಾ. ಪಂ. ಸಮಿತಿಯ ವತಿಯಿಂದ ಪಂ. ಮೈದಾನದಲ್ಲಿ ಹೈಯರ್ ಸೆಕಂಡರಿ ಫುಟ್ಬಾಲ್ ಚಾಂಪ್ಯಶಿಪ್ ಸೀಸನ್ ೨ ಆಟವನ್ನು ಆಯೋಜಿಸಲಾಯಿತು.ಮಂಜೆಶ್ವರ ಗ್ರಾ. ಪಂ. ಅಧ್ಯಕ್ಷ ಅಝೀಝ್ ಹಾಜಿ ಇಮ್ಟರ್ ಯೂನಿಟ್ ಫುಟ್ಬಾಲ್ ಫೆಸ್ಟ್ ಗೆ ಚಾಲನೆ ನೀಡಿದರು.ಈ ಪಂದ್ಯಾಟದಲ್ಲಿ ಜಿ ವಿ ಎಚ್ ಎಸ್ ಎಸ್ ಕುಂಜತ್ತೂರು ಶಾಲೆ, ಉದಯ ಹೈಸ್ಕೂಲ್, ಎಸ್ ಎ ಟಿ ಶಾಲೆ, ಜಿ ಎಚ್ ಎಸ್ ಎಸ್ ಬಂಗ್ರ ಮಂಜೇಶ್ವರ ಶಾಲೆಗಳ ವಿದ್ಯಾರ್ಥಿಗಳು ಈ ಆಟದಲ್ಲಿ ಪಾಲ್ಗೊಳ್ಳಲಿದ್ದಾರೆ.

ಎರಡು ದಿನಗಳಲ್ಲಾಗಿ ನಡೆಯುವ ಪಂದ್ಯಾಟ ನಡೆಯಲಿದೆ.ಉದ್ಘಾಟನಾ ಸಮಾರಂಭದಲ್ಲಿ ಬ್ಲೋಕ್ ಪಂ. ಅಧ್ಯಕ್ಷ ಎ ಕೆ ಎಂ ಅಶ್ರಫ್, ಮುಕ್ತಾರ್, ಅಬ್ದುಲ್ಲ ಗುಡ್ಡೆಕೇರ್ತಿ, ರಹ್ಮತುಲ್ಲ, ಯು ಎ ಖಾದರ್, ಸಿದ್ದೀಖ್ ಮಂಜೇಶ್ವರ, ನಾಸರ್ ಇಡಿಯ ಸೇರಿದಂತೆ ಹಲವು ನೇತಾರರು ಪಾಲ್ಗೊಂಡರು. ರಾಜ್ಯ ಮಟ್ಟದ ಕಬಡ್ದಿಯಲ್ಲಿ ಉತ್ತಮ ಆಟವನ್ನು ಪ್ರದರ್ಶಿಸಿದ ಮಂಜೇಶ್ವರದ ಸುಕೇಶ್ ಕುಮಾರ್ ರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು. ಪಂದ್ಯಾಟವನ್ನು ವೀಕ್ಷಿಸಲು ಸಹಸ್ರಾರು ಮಂದಿ ಆಗಮಿಸಿದ್ದರು.

Related posts

Leave a Reply