
ಮಂಜೇಶ್ವರ : ಹಲವು ಸಮಾಜ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಮಂಜೇಶ್ವರ ಬ್ಲ್ಯಾಕ್ ಕ್ಯಾಟ್ ಕ್ಲಬ್ ನ ವತಿಯಿಂದ ಮಂಜೇಶ್ವರ ಗ್ರಾ. ಪಂ. ನ 18 ಹಾಗೂ 19 ನೇ ವಾರ್ಡಿನ ವ್ಯಾಪ್ತಿಯಲ್ಲಿರುವ ಡಾ. ಸುಜೀರ್ ರಾವ್ ರಸ್ತೆಯಿಂದ ಮಂಜೇಶ್ವರ ಬೀಚ್ ರಸ್ತೆಯ ತನಕ ಶುಚೀಕರಣವನ್ನು ನಡೆಸಲಾಯಿತು.
ರಸ್ತೆ ಬದಿಗಳಲ್ಲಿ ವಾಹನ ಸಂಚಾರಕ್ಕೆ ಹಾಗೂ ಕಾಲ್ನಡಿಗೆ ಯಾತ್ರಿಕರಿಗೆ ಸಮಸ್ಯೆಯಾಗುತಿದ್ದ ಪೊದರುಗಳನ್ನು ತೆರವುಗೊಳಿಸುವುದರು. ರಸ್ತೆ ಬದಿಗಳಲ್ಲಿ ಗಬ್ಬೆದ್ದು ನಾರುತಿದ್ದ ತ್ಯಾಜ್ಯಗಳನ್ನು ಕೂಡಾ ವಿಲೇವಾರಿಗೊಳಿಸಲಾಯಿತು. ಮನೆ ಹಾಗೂ ವ್ಯಪಾರ ಕೇಂದ್ರಗಳವರು ಬಿಸಾಕಿರುವ ತ್ಯಾಜ್ಯಗಳೇ ಹೆಚ್ಚಾಗಿ ಕಂಡು ಬಂದಿರುವುದಾಗಿ ವಾರ್ಡ್ ಸದಸ್ಯೆ ತಿಳಿಸಿದರು. ಇನ್ನು ಮುಂದಕ್ಕೆ ತ್ಯಾಜ್ಯಗಳನ್ನು ರಸ್ತೆ ಬದಿಯಲ್ಲಿ ಬಿಸಾಡದೇ ಅದಕ್ಕೆ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸುವಂತೆ ಗ್ರಾ. ಪಂ.ನೊಂದಿಗೆ ಕೈ ಜೋಡಿಸುವಂತೆ ಗ್ರಾಮಸ್ಥರಿಗೆ ಮಾಹಿತಿಯನ್ನು ನೀಡುವುದಾಗಿಯೂ ವಾರ್ಡ್ ಸದಸ್ಯರಾದ ಮುಂತಾಸ್ ಸಮೀರ ಹಾಗೂ ರೇಖಾ ತಿಳಿಸಿದರು.
ಶುಚೀಕರಣಕ್ಕೆ ಕ್ಲಬ್ ಅಧ್ಯಕ್ಷ ಶಾಹಿಲ್, ಸದಸ್ಯರುಗಳಾದ ಫೈಜಲ್, ನಿಝಾಂ, ಸ್ಥಳೀಯರಾದ ಶಂಶುದ್ದೀನ್, ಝಾಯಿದ್, ಅಬೂಬಕ್ಕರ್, ಮುಸ್ತಫ ಹಾಗೂ ವಾರ್ಡ್ ಸದಸ್ಯರಾದ ಮುಂತಾಸ್ ಸಮೀರ ಹಾಗೂ ರೇಖಾ ಮುಂದಾಳತ್ವವನ್ನು ನೀಡಿದರು.