

ಮಂಜೇಶ್ವರ : ಭಾರತೀಯ ದಲಿತ ಕಾಂಗ್ರೆಸ್ ಮಂಜೇಶ್ವರ ಬ್ಲಾಕ್ ಸಮಾವೇಶ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ ಹೊಸಂಗಡಿ ಗೇಟ್ ವೇ ಆಡಿಟೋರಿಯಂನಲ್ಲಿ ಜರುಗಿತು. ಬಾಬು ಬಂದ್ಯೋಡುರವರ ಅಧ್ಯಕ್ಷತೆಯಲ್ಲಿ ಜರುಗಿದ ಸಮಾವೇಶವನ್ನು ದಲಿತ ಕಾಂಗ್ರೆಸ್ ರಾಜ್ಯ ಸಮಿತಿ ಸದಸ್ಯ ಕರುಣನ್ ಉದ್ಘಾಟಿಸಿದರು. ಕಾಸರಗೋಡು ಜಿ.ಪಂ.ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ, ಗ್ರಾಮ.ಪಂಚಾಯತ್ ಉಪಾಧ್ಯಕ್ಷೆ ಶಶಿಕಲಾ, ಗುರುವಪ್ಪ ಮಂಜೇಶ್ವರ ಮುಖ್ಯ ಅತಿಥಿಯಾಗಿ ಭಾಗವಹಿದ್ದರು. ಮಂಡಲ ಕಾಂಗ್ರೆಸ್ ಅಧ್ಯಕ್ಷ ಶಾಫಿ, ಆರಿಫ್ ಮಚ್ಚಂಪಾಡಿ, ನಾಗೇಶ್ ಮಂಜೇಶ್ವರ, ಮಾಲಿಂಗ ಮಂಜೇಶ್ವರ ಮುಂತಾದವರು ಉಪಸ್ಥಿತರಿದ್ದರು.