Header Ads
Header Ads
Breaking News

ಮಂಜೇಶ್ವರದಲ್ಲಿ ಮಕ್ಕಳಿಗಾಗಿ ಪ್ರತಿಭಾ ಸ್ಪರ್ಧೆ : ತೂಮಿನಾಡು ಸಿರಾಜುಲ್ ಇಸ್ಲಾಂ ಮದ್ರಸ ಕಮಿಟಿಯಿಂದ ಆಯೋಜನೆ

 ತೂಮಿನಾಡು ಅಲ್ ಫತಾಃ ಜುಮಾ ಮಸೀದಿ ಹಾಗೂ ಸಿರಾಜುಲ್ ಇಸ್ಲಾಂ ಮದ್ರಸ ಕಮಿಟಿಯ ಮುಂದಾಳತ್ವದಲ್ಲಿ ತೂಮಿನಾಡು ಮಸೀದಿ ಪರಿಸರದಲ್ಲಿ ಮಿಲಾದುನ್ನಬಿ ಪ್ರಯುಕ್ತ ಮಕ್ಕಳ ವಿವಿಧ ಪ್ರತಿಭಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಮಸೀದಿಯಲ್ಲಿ ನಡೆದ ಮೌಲೂದ್ ಪಾರಾಯಣದ ಬಳಿಕ ಮೊಹಮ್ಮದ್ ಹನೀಫ್ ರವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಸದ್ರಿ ಮಸೀದಿ ಖತೀಬ್ ಅಬ್ದುಲ್ ರಹ್ಮಾನ್ ಹರ್ಶಿದಿ ಉದ್ಘಾಟಿಸಿದರು.

ಈ ಸಂದರ್ಭ ವೇದಿಕೆಯಲ್ಲಿ ಮಸೀದಿ ಪದಾಧಿಕಾರಿಗಳಾದ ಅಬ್ದುಲ್ ರಹ್ಮಾನ್ ಎ ಆರ್, ಮಹ್ಮೂದ್ ಟಿ ಎಂ, ಅಬ್ದುಲ್ ಕಾದರ್ ಕೆ ಎಂ, ಕುಂಞಿಮೋನು, ರಹ್ಮಾನ್ ಉದ್ಯಾವರ ಹಾಗೂ ಅಧ್ಯಾಪಕರುಗಳಾದ ಅಬೂಬಕ್ಕರ್, ಮೊಹಮ್ಮದ್ ಉಸ್ಮಾನ್, ಇಬ್ರಾಹಿಂ ಖಲೀಲ್, ಮೊದಲಾದವರು ಉಪಸ್ಥರಿದ್ದರು.

ಬಳಿಕ ವೇದಿಕೆಯಲ್ಲಿ ಮದ್ರಸ ವಿದ್ಯಾರ್ಥಿಗಳ ಪ್ರತಿಭಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಬಳಿಕ ವಿಜೇತ ವಿದ್ಯಾರ್ಥಿಗಳಿಗೆ ಆಕರ್ಷಕ ಬಹುಮಾನ ವಿತರಿಸಲಾಯಿತು.

Related posts

Leave a Reply