Header Ads
Header Ads
Header Ads
Breaking News

ಮಂಜೇಶ್ವರದಲ್ಲಿ ಮತ್ತೆ ತಲೆ ಎತ್ತಿದ ಮರಳು ಮಾಫಿಯಾ

ಭಾರೀ ಕೋಲಾಹಲಕ್ಕೆ ಕಾರಣವಾಗಿದ್ದ ಕುಂಡುಕೊಳಕೆ ಬೀಚ್ ಪರಿಸರದಿಂದ ಮತ್ತೆ ವ್ಯಾಪಕವಾಗಿ ಅನಧಿಕೃತ ಮರಳು ಸಾಗಾಟ ನಡೆಯುತ್ತಿರುವುದಾಗಿ ಆರೋಪ ಕೇಳಿ ಬಂದಿದೆ.

ಕರ್ನಾಟಕದಲ್ಲಿ ಮರಳು ತೆಗೆಯಲು ನಿಯಂತ್ರಣ ಉಂಟಾಗಿರುವ ಹಿನ್ನೆಲೆಯಲ್ಲಿ ಮರಳು ಮಾಫಿಯಾಗಳು ಕುಂಡುಕೊಳಕೆ ಬೀಚನ್ನು ಮತ್ತೆ ಟಾರ್ಗೆಟ್ ಮಾಡಿದ್ದಾರೆ. ರಾತ್ರಿ 2ಗಂಟೆಯಿಂದ 4ಗಂಟೆಯ ಮಧ್ಯೆ ವ್ಯಾಪಕವಾಗಿ ಟಿಪ್ಪರ್ ಲಾರಿಗಳಲ್ಲಿ ಮರಳು ಸಾಗಾಟ ನಡೆಯುತ್ತಿರುವುದಾಗಿ ಪರಿಸರವಾಸಿಗಳು ಹೇಳುತ್ತಿದ್ದಾರೆ. ಮಧ್ಯ ರಾತ್ರಿ ಹಾಗೂ ಬೆಳಿಗ್ಗೆ ಇಲ್ಲಿಂದ ಐದು ಟಿಪ್ಪರ್ ಲಾರಿಗಳು ಅನಧಿಕೃತ ಮರಳು ಸಾಗಾಟ ನಡೆಸಿರುವುದಾಗಿ ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರೂ ಅವರು ತಡವಾಗಿ ತಲುಪುವಷ್ಟರಲ್ಲಿ ಮರಳು ಲಾರಿಗಳು ಸಾಗಾಟ ನಡೆಸಿ ಆಗಿರುವುದಾಗಿ ಸ್ಥಳೀಯರು ಹೇಳುತಿದ್ದಾರೆ. ಕಳೆದ ಅಗಸ್ಟ್ 16ರಂದು ಇದೇ ಪರಿಸರದಲ್ಲಿ ಸ್ಥಳೀಯರಿಗೂ ಮರಳು ಸಾಗಾಟಗಾರರಿಗೂ ಘರ್ಷಣೆ ಉಂಟಾಗಿತ್ತು. ಆದರೆ ಇಷ್ಟರ ತನಕ ಚರ್ಚ್‍ಗೆ ಕಲ್ಲೆಸೆದವರನ್ನು ಪತ್ತೆ ಹಚ್ಚಲು ಪೊಲೀಸರಿಗೆ ಸಾಧ್ಯವಾಗಲಿಲ್ಲ. ಈಗಲೂ ಠಾಣೆಯ ಕೆಲವೊಂದು ಪೊಲೀಸರ ಕುಮ್ಮಕ್ಕಿನಲ್ಲೇ ಅನಧಿಕೃತ ಮರಳು ಸಾಗಾಟ ನಡೆಯುತ್ತಿರುವುದಾಗಿ ಸ್ಥಳೀಯರು ಆರೋಪಿಸುತಿದ್ದಾರೆ.ಅಕ್ರಮ ಮರಳು ಸಾಗಾಟಕ್ಕೆ ಪೊಲೀಸರು ಕೂಡಲೇ ಕಡಿವಾಣ ಹಾಕದೇ ಇದ್ದರೆ ಕುಂಡುಕೊಳಕೆ ಬೀಚ್‍ನಲ್ಲಿ ಮತ್ತೆ ಸಂಘರ್ಷ ಉಂಟಾಗುವ ಸಾಧ್ಯತೆಯ ಹಿನ್ನೆಲೆಯಲ್ಲಿ ಇದಕ್ಕೆ ಪೊಲೀಸರೇ ಜವಾಬ್ದಾರರಾಗಬಹುದಾಗಿ ಸ್ಥಳೀಯರು ಮುನ್ನೆಚ್ಚರಿಕೆ ನೀಡಿದ್ದಾರೆ. ಮಂಜೇಶ್ವರ ಠಾಣಾ ವ್ಯಾಪ್ತಿಯಲ್ಲಿ ಅಲ್ಲಲ್ಲಿ ತಲೆ ಎತ್ತರುವ ಮರಳು ಮಾಫಿಯಗಳು ಸ್ಥಳೀಯರಿಗೆ ಸವಾಲೊಡ್ದಿ ಅನಧಿಕೃತ ಮರಳು ಸಾಗಟ ಮಾಡುತ್ತಿರುವುದಾಗಿಯೂ ಹಲವೆಡೆಗಳಲ್ಲಿ ಗೂಂಡಾಗಿರಿ ಪ್ರದರ್ಶಿಸುತ್ತಿರುವ ಬಗ್ಗೆ ಕೂಡಾ ಆರೋಪ ಕೇಳಿ ಬರುತ್ತಿದೆ.

Related posts

Leave a Reply

Your email address will not be published. Required fields are marked *