Header Ads
Header Ads
Breaking News

ಮಂಜೇಶ್ವರದಲ್ಲಿ ರಕ್ಷಿತಾರಣ್ಯ ಘೋಷಣೆಗೆ ವ್ಯಾಪಕ ವಿರೋಧ

ಮಂಜೇಶ್ವರ: ಮಂಜೇಶ್ವರ ಗ್ರಾ. ಪಂ. ವ್ಯಾಪ್ತಿಯಲ್ಲಿರುವ6,7,8 ವಾರ್ಡುಗಳಾದ ಮಾಣಿಂಜ ಬೈಲು, ಗುಡ್ಡೆ, ಡೋನ್ ಬಾಸ್ಕೋ ಹಾಗೂ ಗೋವಿಂದ ಪೈ ಕಾಲೇಜು ರಸ್ತೆಗಳ ನಿವಾಸಿಗಳು ಇದೀಗ ಕೇರಳ ಸರಕಾರದ ರಕ್ಷಿತಾರಣ್ಯ ಘೋಷಣೆಯಿಂದ ದಿಗ್ಬ್ರಾಂತರಾಗಿದ್ದಾರೆ.ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಗ್ರೇಸಿಂಗ್ ಗ್ರೌಂಡಿನಲ್ಲಿ 13 ಎಕ್ರೆ43ಸೆಂಟ್ಸ್ ಸ್ಥಳದಲ್ಲಿ ಸೋಶಿಯಲ್ ಫಾರೆಸ್ಟ್ ನವರಿಗೆ ಅಕೇಶಿ ಸಸಿ ನೆಡಲು ಐದು ಎಕ್ರೆ ಸ್ಥಳವನ್ನು ಮಂಜೇಶ್ವರ ಗ್ರಾ. ಪಂ. ಅನುಮತಿಸಿತ್ತು. ಈ ವ್ಯಾಪ್ತಿಯಲ್ಲಿ ಮಾಣಿಂಜ ಬೈಲು, ಗುಡ್ಡೆ, ಡೋನ್ ಬಾಸ್ಕೋ ಹಾಗೂ ಗೋವಿಂದ ಪೈ ಕಾಲೇಜು ರಸ್ತೆಗಳು ಒಳಗೊಂಡಿವೆ. ಅಲ್ಲದೆ ಮಂಜೇಶ್ವರ ರಾ. ಹೆದ್ದಾರಿಯಿಂದ ಗೇರುಕಟ್ಟೆ ಹೋಗುವ ರಸ್ತೆ, ಗುಡ್ಡೆಯಿಂದ ಗುತ್ತು ರಸ್ತೆ, ಹಾಗೂ ಗುಡ್ಡೆಯಿಂದ ಪರಿಶಿಷ್ಟ ಜಾತಿ ಪಂಗಡ ಗಳ ಕಾಲನಿಗೆ ಹಾದು ಹೋಗುವ ರಸ್ತೆಯೂ ಇದರಲ್ಲಿ ಒಳಗೊಂಡಿದೆ. ಕಳೆದ ಸುಮಾರು 100 ವರ್ಷಗಳಿಂದ ಪರಂಪರಾಗತವಾಗಿ ಜನರು ಕೃಷಿಗಾಗಿ ಉಪಯೋಗಿಸುವ ಗುಡ್ಡೆ ಪಲ್ಲ ಕೂಡಾ ಇದರಲ್ಲಿ ಒಳಗೊಂಡಿದೆ.

ರಕ್ಷಿತಾರಣ್ಯ ಪ್ರದೇಶ ಘೋಷಣೆಯಲ್ಲಿ ಈ ಪ್ರದೇಶಕ್ಕೆ ತಡೆ ಬಂದರೆ ಮೂರು ವಾರ್ಡಿನ ಕೃಷಿಕರು, ಶಾಲಾ ವಿದ್ಯಾರ್ಥಿಗಳು, ಇತರ ಎಲ್ಲಾ ವಿಭಾಗದ ಕೂಲಿಯಾಳುಗಳು ಕೂಡಾ ಸಂಕಷ್ಟದಲ್ಲಿ ಸಿಲುಕಲಿರುವುದಾಗಿ ಊರವರು ಹೇಳುತಿದ್ದಾರೆ. ಈ ಪ್ರದೇಶದಲ್ಲಿ ಅಂಗನವಾಡಿ, ಖಾಸಗಿ ಹಾಗೂ ಸರಕಾರಿ ಶಾಲೆಗಳು, ಆರೋಗ್ಯ ಕೇಂದ್ರ ಮಸೀದಿ ಕ್ಷೇತ್ರಗಳು ಎಲ್ಲವೂ ರಕ್ಷಿತಾರಣ್ಯ ಘೋಷಣೆಯ ಪಟ್ಟಿಯಲ್ಲಿ ಸೇರಿ ಕೊಂಡಿವೆ.ಈ ಹಿನ್ನೆಲೆಯಲ್ಲಿ ಜನ ಬಳಕೆಯ ಯಾವುದೇ ಕೇಂದ್ರಕ್ಕಾಗಲೀ ಸ್ಥಳೀಯ ಮನೆಯವರಿಗಾಗಲೀ ಜನ ಬಳಕೆಯ ರಸ್ತೆಗಳಿಗಾಗಲೀ ಯಾವುದೇ ರೀತಿ ನಿರ್ಬಂಧವನ್ನು ಹೇರದೆ ಯಥಾ ಸ್ಥಿತಿ ಕಾಪಾಡುವಂತೆ ಇಲ್ಲಿಯ ನಾಗರಿಕರು ಹೋರಾಟ ಸಮಿತಿಗೂ ರೂಪು ನೀಡಿದ್ದಾರೆ. ಸಾಮಾಜಿಕ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿರುವ ಈ ಭೂಮಿಯನ್ನು ರಕ್ಷಿತಾರಣ್ಯ ಪ್ರದೇಶವಾಗಿ ಘೋಷಿಸುವ ಬಗ್ಗೆ ಸರಕಾರ ಈಗಾಗಲೇ ಆದಿಸೂಚನೆ ಹೊರಡಿಸಿದ್ದು, ಪರಿಸರವಾಸಿಗಳು ಈ ಪ್ರದೇಶದಲ್ಲಿ ಇರಬಹುದಾದ ತಮ್ಮ ಹಕ್ಕು ಅವಕಾಶಗಳ ಬಗ್ಗೆ ನಿರ್ಧಿಷ್ಟ ದಿನದಲ್ಲಿ ದಾಖಲೆ ಸಹಿತ ಹಾಜರುಪಡಿಸುವಂತೆ ಕಾಞಂಗಾಡ್ ಅರಣ್ಯ ಸೆಟ್ಲ್ ಮೆಂಟ್ ಆಫೀಸರ್ ಹಾಗೂ ಕಂದಾಯ ವಿಭಾಗೀಯ ಅಧಿಕಾರಿಗಳು ನೋಟಿ ಜ್ಯಾರಿ ಮಾಡಿರುವುದು ಸ್ಥಳಿಯರಿಗೆ ಬಿಸಿ ಮುಟ್ಟಿರುವ ಹಿನ್ನೆಲೆಯಲ್ಲಿಅದನ್ನು ಎದುರಿಸಬೇಕಾದ ಪ್ರಯೋಗಕ್ಕೆ ಊರವರು ಸಜ್ಜಾಗುತಿದ್ದಾರೆ. ಪ್ರಸ್ತಾವಿತ ಪ್ರದೇಶವನ್ನು ಹಾದುಕೊಂಡು ಹೋಗಬೇಕಾದ ಅನಿವಾರ್ಯತೆ ಇರುವವರು ಎಲ್ಲರೂ ಹೋರಾಟ ಸಮಿತಿಯಲ್ಲಿ ಭಾಗಿಯಾಗಿದ್ದಾರೆ. ಯಾವುದೇ ಕಾರಣಕ್ಕೂ ಸ್ಥಳೀಯರಿಗೆ ದಕ್ಕೆ ಬರುವ ರೀತಿಯಲ್ಲಿರುವ ಸರಕಾರದ ಘೋಷಣೆಯನ್ನು ಯಾವುದೇ ಬೆಲೆ ತೆತ್ತಾದರೂ ಎದುರಿಸುವುದಾಗಿ ಊರವರು ಹೇಳುತಿದ್ದಾರೆ.

Related posts

Leave a Reply