Header Ads
Header Ads
Header Ads
Breaking News

ಮಂಜೇಶ್ವರದಲ್ಲಿ ರೇಶನ್ ಕಾರ್ಡು ವಿತರಣೆಗೆ ಚಾಲನೆ ೧ ಮತ್ತು ೨ನೇ ವಾರ್ಡ್‌ಗಳಲ್ಲಿ ರೇಶನ್ ಕಾರ್ಡ್ ವಿತರಣೆ

 

ಕಳೆದ ಕೆಲವು ವರ್ಷಗಳಿಂದ ಕಾತುರರಾಗಿದ್ದ ಜನತೆಗೆಗೆ ಕೊನೆಗೂ ಮುಕ್ತಿ ಸಿಕ್ಕಿದೆ.ಕಾಸರಗೋಡು ಜಿಲ್ಲೆಯಲ್ಲಿ ರೇಶನ್ ಕಾರ್ಡುಗಳನ್ನು ವಿತರಿಸಲು ಸಿವಿಲ್ ಸಪ್ಲೈ ಅಧಿಕಾರಿಗಳು ಕೊನೆಗೂ ಮುಂದೆ ಬಂದಿದ್ದಾರೆ.ಮಂಜೇಶ್ವರ ಗ್ರಾಮ ಪಂಚಾಯತಿನ 1 ನೇ ಹಾಗೂ 2ನೇ ವಾರ್ಡುಗಳಲ್ಲಿ ಪಡಿತರಿಗೆ ರೇಶನ್ ಕಾರ್ಡುಗಳನ್ನು ವಿತರಿಸಲಾಯಿತು.

ವಿತರಣೆಯಾದ ಎಆರ್‌ಡಿ ೩ ನೇ ರೇಶನ್ ಅಂಗಡಿಯಲ್ಲಿ 674 ಕಾರ್ಡುಗಳಿದ್ದರೆ ಅದರಲ್ಲಿ 74ಮಂದಿಗೆ ಸಿವಿಲ್ ಸಪ್ಲೈ ಕಚೇರಿಯಿಂದ ಇನ್ನೂ ರೇಶನ್ ಕಾರ್ಡುಗಳು ಬಂದಿಲ್ಲ. ಅದೇ ರೀತಿ ಎಆರ್‌ಡಿ ಸಂಖ್ಯೆ 1 ರ ರೇಶನ್ ಅಂಗಡಿಯಲ್ಲಿ 978 ರೇಶನ್ ಕಾರ್ಡುಗಳಲ್ಲಿ 7 ಮಂದಿಗೆ ರೇಶನ್ ಕಾರ್ಡುಗಳು ಬಂದಿಲ್ಲ. ಅದೇ ರೀತಿ ಎಆರ್‌ಡಿ ನಂಬ್ರ 4ರ ರೇಶನ್ ಕಾರ್ಡನ್ನು ಪಡೆಯಲು ಸುಮಾರು ನೂರು ಮಂದಿ ಬಂದಿಲ್ಲ. ಇದೆಲ್ಲ ಸಪ್ಲೈ ಕಚೇರಿ ಅಧಿಕಾರಿಗಳ ನಿರ್ಲ್ಯಕ್ಷದಿಂದ ಆಗಿದೆ. ಅದೇ ರೀತಿ ರೇಶನ್ ಕಾರ್ಡುಗಳಲ್ಲಿ ಪ್ರಕಟವಾದ ಹೆಸರಿನಲ್ಲೂ ಹಲವು ವ್ಯತ್ಯಾಸಗಳು ಕಂಡು ಬಂದಿರುವುದು ಜನತೆಯಲ್ಲಿ ಗೊಂದಲವನ್ನು ಸೃಷ್ಟಿಸಿದೆ.

Related posts

Leave a Reply