Header Ads
Breaking News

ಮಂಜೇಶ್ವರದಲ್ಲಿ ವಲಯ ಕುಟುಂಬ ಸಂಗಮ. ಕೇರಳ ಸ್ಟೇಟ್ ಹೈಯರ್ ಗೂಡ್ಸ್ ಓನರ್ಸ್‌ನಿಂದ ಕಾರ್ಯಕ್ರಮ.

ಮಂಜೇಶ್ವರ: ಕೇರಳ ಸ್ಟೇಟ್ ಹೈಯರ್ ಗೂಡ್ಸ್ ಓನರ್ಸ್ ಅಸೋಸಿಯೆಶನ್ ಮಂಜೇಶ್ವರ ವಲಯದ ವತಿಯಿಂದ ಕುಟುಂಬ ಸಂಗಮ ಮಂಜೇಶ್ವರ ಬೀಚ್‌ನಲ್ಲಿರುವ ಅಮನ್ ಕೋಟೇಜ್ ನಲ್ಲಿ ಜರಗಿತು.ವಲಯಾಧ್ಯಕ್ಷ ಅಬೂಬಕ್ಕರ್ ರವರು ಧ್ವಜಾರೋಹಣಗೈಯುವುದರೊಂದಿಗೆ ಕುಟುಂಬ ಸಂಗಮಕ್ಕೆ ಚಾಲನೆ ನೀಡಿದರು.ಕಾರ್ಯಕ್ರಮವನ್ನು ಮಂಜೇಶ್ವರ ಬ್ಲೋಕ್ ಪಂಚಾಯತ್ ಅಧ್ಯಕ್ಷ ಎಕೆಎಂ ಅಶ್ರಫ್ ಉದ್ಘಾಟಿಸಿದರು.ಬಳಿಕ ಮಾತನಾಡಿದ ಅವರು ಇಂದು ವೇದಿಕೆಯನ್ನು ಅಲಂಕರಿಸುವವರೇ ವೇದಿಕೆಯಲ್ಲಿ ಅತಿಥಿಯಾಗಿದ್ದಾರೆ. ಯಾವುದೇ ಸಂಘಟನೆಯಾಗಲೀ ಕುಟುಂಬ ಸಂಗಮವನ್ನು ನಡೆಸುವಾಗ ಆ ಸಂಘಟನೆಯಲ್ಲಿರುವ ಪ್ರತೀಯೊಬ್ಬ ಸದಸ್ಯನ ಕುಟುಂಬದ ಪ್ರತಿಯೊಂದು ಸದಸ್ಯರು ಕೂಡಾ ಜಾತಿ ಮತವನ್ನು ಮರೆತು ನಾವೆಲ್ಲರೂ

ಭಾರತೀಯರೆಂಬ ಉದ್ದೇಶವನ್ನಿಟ್ಟು ಕೊಂಡು ಜೊತೆಗೂಡಿದರೆ ಆ ಕುಟುಂಬ ಸಂಗಮ ಇತರರಿಗೆ ಮಾದರಿಯಾಗುತ್ತದೆ ಎಂದು ಹೇಳಿ ಕುಟುಂಬ ಸಂಗಮಕ್ಕೆ ಶುಭವನ್ನು ಹಾರೈಸಿದರು
ಮುಖ್ಯ ಅಥಿಥಿಯಾಗಿ ಭಾಗವಹಿಸಿದ ಸಂಘಟನೆಯ ರಾಜ್ಯ ಕಾರ್ಯದರ್ಶಿ ಟಿವಿ ಬಾಲನ್ ಮಾತನಾಡಿ ನಮ್ಮಲ್ಲಿರುವ ಮಹಿಳೆಯರಿಗೆ ಯಾವ ರೀತಿಯಲ್ಲಿ ನಮ್ಮ ಕೆಲಸಗಳೊಂದಿಗೆ ಭಾಗಿಯಾಗಿಸಬಹುದು ಎಂಬುದನ್ನು ಇವತ್ತು ಚರ್ಚೆ ನಡೆಸಬೇಕಾಗಿದೆ ಎಂದರು.ಕಳೆದ ವರ್ಷಗಳಿಂದ ಈ ವಲಯದಲ್ಲಿ ಸೇವೆಯನ್ನು ನೀಡುತ್ತಿರುವ ಎಸ್ ಎಂ ರಫೀಕ್, ವಿಶ್ವನಾಥ್ ಶೆಟ್ಟಿ, ಪ್ರಭಾಕರ ಮಜೀರ್ಪಳ್ಳ, ಚಂದ್ರ ಕನಿಲ, ಮನೋಜ್, ಅಬೂಬಕ್ಕರ್ ಹಾಗೂ ನವೀನ್ ಮಂಜೇಶ್ವರ ಮೊದಲದವರು ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.ಈ ಸಂದರ್ಭ ಸಂಘಟನೆಯ ನೇತರರಾದ ಸುರೇಂದ್ರನ್ ಬಿಂದು, ಸಂತೋಷ್ ಕಣ್ನೂರು, ಎಚ್ ಎಸ್ ಹಂಝ,ವಧುನಾನಂದ ಅಚಾರಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು .ಬಳಿಕ ಮಕ್ಕಳಿಗೆ ವಿವಿಧ ಆಟೋಟ ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮ, ನೃತ್ಯ ವೈವಿಧ್ಯ, ಗಾಯನ ಹಾಗೂ ಸದಸ್ಯರಿಂದ ವಿವಿಧ ಸ್ಪರ್ಧೆಗಳು, ಹಗ್ಗ ಜಗ್ಗಾಟ, ವಿವಿಧ ಕಲಾ ಪ್ರದರ್ಶನಗಳು ನಡೆದವು.

Related posts

Leave a Reply