Header Ads
Breaking News

ಮಂಜೇಶ್ವರದಲ್ಲಿ ವಿಮನ್ಸ್ ಇಸ್ಲಾಮಿಕ್ ಆರ್ಟ್ಸ್ ಕಾಲೇಜಿಗೆ ಚಾಲನೆ

ಮಂಜೇಶ್ವರ: ಮಂಜೇಶ್ವರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ, ವಿದ್ಯಾರ್ಥಿನಿಗಳಿಗೆ ಉತ್ತಮವಾದ ವಿದ್ಯಾಭ್ಯಾಸವನ್ನು ನೀಡುವ ಉದ್ದೇಶದಿಂದ ಸಮಸ್ತ ಕೇರಳ ಇಸ್ಲಾಮಿಕ್ ವಿದ್ಯಾಭ್ಯಾಸ ಬೋರ್ಡ್ ಅಯೋಜಿಸಿರುವ ವಿಮನ್ಸ್ ಇಸ್ಲಾಮಿಕ್ ಆರ್ಟ್ಸ್ ಕಾಲೇಜಿಗೆ ಚಾಲನೆ ದೊರಕಿತು.

ಉದ್ಯಾವರ ಸಾವಿರ ಜಮಾಹತ್ ಅಧೀನದಲ್ಲಿರುವ ಕಟ್ಟಡದಲ್ಲಿ ಜಮಾಹತ್ ಅಧ್ಯಕ್ಷ ಸೂಫಿ ಹಾಜಿಯವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಸಂಯುಕ್ತ ಜಮಾಹತ್ ಅಧ್ಯಕ್ಷ ಅತ್ತಾವುಲ್ಲ ತಂಘಲ್ ಉದ್ಘಾಟಿಸಿದರು. ಸೈಫುಲ್ಲ ತಂಘಲ್ ಮುಖ್ಯ ಪ್ರಭಾಷಣ ನಡೆಸಿದರು. ವೇದಿಕೆಯಲ್ಲಿ ಜಮಾಹತ್ ಕಾರ್ಯದರ್ಶಿ ಎಂ ಎ ಕೆ ಮೊಯಿದೀನ್ ಹಾಜಿ, ಕೋಶಾಧಿಕಾರಿ ಬಾವ ಹಾಜಿ, ಅಬೂಬಕ್ಕರ್ ಮಾಹಿನ್ ಹಾಜಿ, ಇಬ್ರಾಹಿಂ ಖಲೀಲ್ ದಾರಿಮಿ, ಮೊದಲಾದವರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *