Header Ads
Breaking News

ಮಂಜೇಶ್ವರದಲ್ಲಿ ಶುಚಿತ್ವ ಸಂದೇಶ ಯಾತ್ರೆಗೆ ಚಾಲನೆ

ಆರೋಗ್ಯ ಜಾಗೃತಿಯ ಭಾಗವಾಗಿ ಮಂಜೇಶ್ವರ ಗ್ರಾಮ ಪಂಚಾಯತು ಹಾಗೂ ಆರೋಗ್ಯ ಕೇಂದ್ರ ಮಂಜೇಶ್ವರ ಇದರ ಸಹಭಾಗಿತ್ವದಲ್ಲಿ ನಡೆಸಲ್ಪಡುವ ಶುಚಿತ್ವ ಸಂದೇಶ ಯಾತ್ರೆಗೆ ಚಾಲನೆ ದೊರಕಿತು. ಮಂಜೇಶ್ವರ ಹೊಸಂಗಡಿಯಲ್ಲಿ ನಡೆದ ಕಾರ್ಯಕ್ರಮವನ್ನು ಮಂಜೇಶ್ವರ ಗ್ರಾಮ ಪಂಚಾಯತು ಅಧ್ಯಕ್ಷ ಅಬ್ದುಲ್ ಅಝೀಝ್ ಹಾಜಿ ಉದ್ಘಾಟಿಸಿದರು. ಸಾಂಕ್ರಾಮಿಕ ರೋಗದ ನಿಯಂತ್ರಣದ ಭಾಗವಾಗಿ ಮಳೆಗಾಲದಲ್ಲಿ ಹರಡುತ್ತಿರುವ ರೋಗಗಳನ್ನು ನಿಯಂತ್ರಣಕ್ಕೆ ತರುವ ಉದ್ದೇಶದಿಂದ ಹಾಗೂ ಸಾರ್ವಜನಿಕರಿಗೆ ಉಪಯುಕ್ತವಾದ ಮಾಹಿತಿಯನ್ನು ಕೊಡುವ ಉದ್ದೇಶದಿಂದ ಈ ಶುಚಿತ್ವ ಸಂದೇಶ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿತ್ತು.

Related posts

Leave a Reply

Your email address will not be published. Required fields are marked *