Header Ads
Breaking News

ಮಂಜೇಶ್ವರದಲ್ಲಿ ಹಲವು ವರ್ಷಗಳಿಂದ ಜೀವಸೆಲೆಯಾಗಿದ್ದ ಬಾವಿಗೆ ಬಂದಿದೆ ಕಂಟಕ!

ಕುಂಜತ್ತೂರು, ಮಂಜೇಶ್ವರ, ಉಪ್ಪಳ ಕುಂಬಳೆ ಸೇರಿದಂತೆ ಕಾಸರಗೋಡು ಜಿಲ್ಲೆಯಲ್ಲಿ ಬೇಸಗೆ ಧಗೆ ಹೆಚ್ಚುವ ಜತೆಗೆ ಜಲ ಸಂಪನ್ಮೂಲಗಳು ಬತ್ತಿ ಬರಿದಾಗಲಾರಂಭಿಸಿವೆ. ಈ ನಡುವೆ ಇರುವ ನೀರಿನ ಮೂಲಗಳನ್ನು ಬರಿದಾಗಿಸುವ ಕೆಲಸಗಳೂ ನಡೆಯುತ್ತಿವೆ. ಹಲವು ವರ್ಷಗಳಿಂದ ಕುಡಿಯುವ ನೀರನ್ನು ಒದಗಿಸುತ್ತಿದ್ದ ಬಾವಿಯನ್ನು ಮುಚ್ಚಿ, ವಾಣಿಜ್ಯ ಉಪಯೋಗಕ್ಕೆ ಬಳಸುತಿದ್ದಾರೆ ಎನ್ನುವ ಆರೋಪಗಳು ಕೇಳಿಬರುತ್ತಿವೆ.

ಬೇಸಗೆ ತಾಪಮಾನ 38 ಡಿಗ್ರಿಗೆ ತಲುಪಿರುವುದರಿಂದ ಬಹುಬೇಗನೇ ಮಂಜೇಶ್ವರ ಆಸು ಪಾಸು ಸೇರಿದಂತೆ ಜಿಲ್ಲೆಯ ಜಲಸಂಪನ್ಮೂಲಗಳು , ಹೊಳೆಗಳು ಬತ್ತಲಾರಂಭಿಸಿವೆ. ಜಿಲ್ಲೆಯ 15ರಷ್ಟು ಜಲ ಸಂಪನ್ಮೂಲಗಳು ಈಗಾಗಲೇ ಪೂರ್ಣವಾಗಿ ಬತ್ತಿವೆ. ಪಯಸ್ವಿನಿ ಮೊದಲಾದ ಹೊಳೆಗಳಲ್ಲಿ ನೀರಿನ ಮಟ್ಟ ತೀರಾ ಇಳಿಕೆಯಾಗುತ್ತಿದೆ. ಮಂಜೇಶ್ವರದ ಕೆಲ ಬಾವಿಗಳಲ್ಲಿ ಈಗ ಕಲುಷಿತ ನೀರು ಲಭಿಸುತ್ತಿದೆ. ನಗರದ ಬಾವಿಗಳಲ್ಲಿ ಕುಡಿಯುವುದಕ್ಕಷ್ಟೇ ನೀರು ಲಭಿಸುತ್ತಿದೆ.

 ಈ ಮಧ್ಯೆ ಪೂರ್ವ ಕಾಲದಲ್ಲಿ ಮಂಜೇಶ್ವರದ ಹಲವೆಡೆ ಸಾಮಾನ್ಯ ಜನರು ಕುಡಿಯುವ ನೀರನ್ನು ಪಡೆಯುವಂತಾಗಲು ಕೆಲವೊಂದು ಕುಟುಂಬಗಳು ಬಾವಿಯನ್ನು ನಿರ್ಮಿಸಿ ಅದೇ ರೀತಿ ಸಹಕರಿಸಿದ್ದವು. ಮಾತ್ರವಲ್ಲದೆ ಈ ಹಿಂದೆ ಹಿಂದೆ ಬರಗಾಲ ಬಂದಾಗ ಮಂಜೇಶ್ವರ ಗ್ರಾ. ಪಂ. ಇಂತಹ ದುರಸ್ಥಿಯನ್ನು ಕೂಡಾ ನಡೆಸಿ ಕುಡಿಯುವ ನೀರಿನ ಬಾವಿಯನ್ನು ಯೋಗ್ಯಕರವನ್ನಾಗಿ ಮಾಡಿ ಕೊಟ್ಟಿತ್ತು. ಆದ್ರೆ ಇತ್ತೀಚಿನ ದಿನಗಳಲ್ಲಿ ಮಂಜೇಶ್ವರ ಪರಿಸರಗಳಲ್ಲಿ ಇಂತಹ ಬಾವಿಯನ್ನು ಸಂಪೂರ್ಣವಾಗಿ ಮುಚ್ಚಿ ಅದನ್ನು ಖಾಸಗಿ ಸ್ಥಳವೆಂದು ಹೇಳಿ ವಾಣಿಜ್ಯ ಉಪಯೋಗಕ್ಕೆ ಬಳಸುತಿದ್ದಾರೆಂಬುದಾಗಿ ಸ್ಥಳೀಯರು ದೂರುತ್ತಿದ್ದಾರೆ. ಬಾವಿಯನ್ನು ಸಂಪೂರ್ಣವಾಗಿ ನೆಲಸಮಗೊಳಿಸಿ ಸ್ಥಳ ಕಟ್ಟಡಕ್ಕೆ ಸಜ್ಜಾಗುತ್ತಿರುವುದಾಗಿ ಸ್ಥಳೀಯರು ಹೇಳುತ್ತಿದ್ದಾರೆ

ಮಂಜೇಶ್ವರದ ಅಯ್ಯರ್ ಕಟ್ಟೆ , ಪೊಲೀಸ್ ಠಾಣಾ ಸಮೀಪ ಸೇರಿದಂತೆ ಹಲವು ಸ್ಥಳಗಳಲ್ಲಿ ಇಂತಹ ಬಾವಿಗಳು ಕಂಡು ಬರುತಿದ್ದು , ಇದನ್ನು ಯಾವುದೇ ಇಲಾಖೆ ದುರಸ್ಥಿ ನಡೆಸದೆ ಕೆಲವೊಂದು ಪಾಲು ಬಿದ್ದಿದೆ. ಆದರೆ ಈ ಪೈಕಿ ಒಂದು ಬಾವಿಯನ್ನು ಈಗ ನೆಲಸಮ ಮಾಡಲಾಗಿದ್ದು ಈ ಬಗ್ಗೆ ಯಾರು ಧ್ವನಿ ಎತ್ತದೆ ಇರುವುದು ವಿಪರ್ಯಾಸಕರ ಎಂಬುದಾಗಿ ಸ್ಥಳೀಯರೊಬ್ಬರು ಚ್ಯಾನಲ್ ನೊಂದಿಗೆ ಪ್ರತಿಕ್ರಿಯಿಸಿದ್ದಾರೆ. ಕೊಳವೆ ಬಾವಿಗಳಿಗಿಂತ ಬಾವಿಗಳಿಗೆ ಹೆಚ್ಚು ಆಧ್ಯತೆಯನ್ನು ನೀಡುತ್ತಿರುವ ಜಿಲ್ಲಾಧಿಕಾರಿಯವರು ಗ್ರಾಮೀಣ ಪ್ರದೇಶಗಳಲ್ಲಿ ಸಾಮಾನ್ಯ ಜನತೆಯ ಉಪಯೋಗಕ್ಕಾಗಿ ಹಿಂದಿನ ಕಾಲದಲ್ಲಿ ನಿರ್ಮಿಸಿ ಕೊಡಲಾಗಿರುವ ಬಾವಿಗಳನ್ನು ಮುಚ್ಚುಗಡೆಗೊಳಿಸುವುದನ್ನು ಗಮನಿಸಬೇಕಾಗಿದೆ. ಮುಚ್ಚುಗಡೆಗೊಳಿಸುತ್ತಿರುವ ಬಾವಿಗಳನ್ನು ಮರು ಸ್ಥಾಪಿಸಬೇಕೆಂಬುದು ಸ್ಥಳೀಯರ ಬೇಡಿಕೆಯಾಗಿದೆ.
ರೆಹೆಮಾನ್ ಉದ್ಯಾವರ ಮಂಜೇಶ್ವರ

Related posts

Leave a Reply

Your email address will not be published. Required fields are marked *