Header Ads
Header Ads
Header Ads
Breaking News

ಮಂಜೇಶ್ವರದಲ್ಲೂ ಆಯುಧ ಪೂಜೆ ಸಂಭ್ರಮ ವಿವಿಧ ವಾಹನಗಳನ್ನು ಶುಚಿಗೊಳಿಸಿ ಆಯುಧ ಪೂಜೆ

 

 ಮಂಜೇಶ್ವರದ ಉಪ್ಪಳಗಳಲ್ಲಿ ಆಯುಧಪೂಜೆ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಮನೆಗಳಲ್ಲಿ ದ್ವಿಚಕ್ರ ವಾಹನ ಸೇರಿದಂತೆ ವಿವಿಧ ವಾಹನಗಳನ್ನು ಶುಚಿಗೊಳಿಸಿ ಪೂಜಿಸಲಾಯಿತು. ಅಂಗಡಿ, ಮುಂಗಟ್ಟು, ಕೈಗಾರಿಕೆಗಳು ಹಾಗೂ ಕಚೇರಿಗಳಲ್ಲಿ ದಿನ ನಿತ್ಯ ಬಳಸುವ ವಸ್ತುಗಳು, ಉಪಕರಣಗಳು ಹಾಗೂ ಸಾಮಗ್ರಿಗಳಿಗೆ ಪೂಜೆ ಸಲ್ಲಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಪೂಜೆ ನಂತರ ಸಿಬ್ಬಂದಿ ಹಾಗೂ ಸಾರ್ವಜನಿಕರಿಗೆ ಸಿಹಿ ಹಂಚಿ ಮಾಲೀಕರು ಸಂಭ್ರಮಿಸಿದರು.           ಹೂವು ಮೊದಲಾದವುಗಳಿಂದ ಅಲಂಕಾರ ಮಾಡಿದ್ದ ವಾಹನಗಳನ್ನು ಪೂಜಿಸುವುದಕ್ಕೆ ದೇವಸ್ಥಾನಗಳ ಮುಂದೆ ಸಾಲು ಸಾಲಾಗಿ ನಿಲ್ಲಿಸಿದ್ದು ಕಂಡುಬಂದಿತು.ಸರ್ವಿಸ್ ಸ್ಟೇಷನ್‌ಗಳ ಎದುರು ವಾಹನಗಳ ಸಾಲುಗಳು ಕಂಡು ಬಂದವು. ಬೆಲೆ ಏರಿಕೆ ನಡುವೆಯೂ ಮಾರುಕಟ್ಟೆಗಳಲ್ಲಿ ಭರ್ಜರಿ ವ್ಯಾಪಾರ ವಹಿವಾಟು ನಡೆಯಿತು. ಸುಮಾರು ೨೫ ವರ್ಷಗಳ ಇತಿಹಾಸವಿರುವ ಹುಲಿ ವೇಷಗಳನ್ನು ಹಾಕಿ ಮನೆ ಮನೆಗಳ ಮುಂದೆ ಕುಣಿದಾಡುವ ದೃಶ್ಯ ಕಂಡು ಬಂತು. ಬ್ರಹ್ಮ ಶ್ರೀ ಮಹಾಕಾಳಿ ದೈವಸ್ಥಾನ ತೂಮಿನಾಡು, ಕುಂಜತ್ತೂರು ಮಹಾಲಿಂಗೇಶ್ವರ ದೇವಸ್ಥಾನ, ಅರಸು ಮಂಜಿಷ್ಣಾರ್ ದೈವಸ್ಥಾನ ಮಾಡ, ಶ್ರೀ ಮದನಂತೇಶ್ವರ ದೇವಸ್ಥಾನ ಮಂಜೆಶ್ವರ ಮೊದಲಾದೆಡೆ ವಿಶೇಷ ಪೂಜೆಗಳು ನಡೆಯಿತು.

Related posts

Leave a Reply