Header Ads
Breaking News

ಮಂಜೇಶ್ವರದಾದ್ಯಂತ ಸಂಭ್ರಮದ ಈದುಲ್ ಫಿತ್ರ್ ಆಚರಣೆ

ಈದುಲ್ ಫಿತ್ರ್ ಹಬ್ಬವನ್ನು ಮಂಜೇಶ್ವರಾಧ್ಯಂತ ಸಂಭ್ರಮ ಹಾಗೂ ಸಡಗರದಿಂದ ಆಚರಿಸಲಾಯಿತು. ಕುಂಜತ್ತೂರು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಮಸ್ಜಿದುನ್ನೂರು ಜುಮಾ ಮಸೀದಿಯಲ್ಲಿ ಪೆರ್ನಾಲ್ ನಮಾಝ್‌ನ ಬಳಿಕ ಹಿರಿಯ ವಿದ್ವಾಂಸ ಅಬ್ದುಲ್ ಖಾದರ್ ಮೌಲವಿ ಖುತುಬಾ ಪ್ರವಚನ ಹಾಗೂ ಸಂದೇಶವನ್ನು ನೀಡಿದ್ರು. ಈ ವೇಳೆ ಮಾತನಾಡಿದ ಅವರು, ಈದುಲ್ ಫಿತ್ರ್ ಹಬ್ಬವು ಶಾಂತಿ ಸೌಹಾರ್ಧತೆಯನ್ನು ಲೋಕಕ್ಕೆ ಸಾರುತ್ತಿದೆ. ಕೆಡುಕನ್ನು ಒಳಿತಿನ ಮೂಲಕ ಎದುರಿಸಿ ಮನುಷ್ಯ ಸ್ನೇಹಿಯಾಗಿ ಇತರ ಧರ್ಮದವರನ್ನು ನೋಯಿಸದೆ ಅವರನ್ನೂ ತಮ್ಮ ಸಹೋದರರಂತೆ ಕಾಣಲು ಪ್ರೇರೇಪಿಸಿದ ಧರ್ಮವಾಗಿದೆ ಇಸ್ಲಾಂ ಧರ್ಮ. ಮನುಷ್ಯ ಮನುಷ್ಯರೊಳಗಿನ ಸಂಬಂಧ ಉತ್ತಮವಾಗಬೇಕಿದೆ. ಹಳಸಿದ ಸಂಬಂಧಗಳು ಮರು ಜೋಡನೆಯಾಗಬೇಕಿದೆ ಎಂಬ ಖುರಾನ್ ಸಂದೇಶ ನಮಗೆಲ್ಲಾ ಸ್ಪೂರ್ತಿಯಾಗಲಿ ಎಂಬುದಾಗಿ ಹೇಳಿದರು.

ಇದರ ಜೊತೆಗೆ ಕುಂಜತ್ತೂರು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಮಸ್ಜಿದುನ್ನೂರು ಜುಮಾ ಮಸೀದಿಯಲ್ಲಿ ನಡೆದ ನಮಾಜಿಗೂ ಅಬ್ದುಲ್ ಖಾದರ್ ಮೌಲವಿಯವರು ನೇತೃತ್ವ ನೀಡಿದರು. ಈ ಮಸೀದಿಯಲ್ಲಿ ಸಹಸ್ರಾರು ಮಹಿಳೆಯರು ಹಾಗೂ ಪುರುಷರು ಮಕ್ಕಳು ಪ್ರಾರ್ಥಣೆಯಲ್ಲಿ ಪಾಲ್ಗೊಂಡಿರುವುದು ವಿಶೇಷತೆಯಾಗಿತ್ತು. ಅದೇ ರೀತಿ ಉದ್ಯಾವರ ಸಾವಿರ ಜಮಾಹತ್, ಕುಂಜತ್ತೂರು ಜಮಾಹತ್, ಪೊಸೋಟು ಜಮಾಹತ್, ಪಾಂಡ್ಯಾಲ್ ಜಮಾಹತ್, ಹೊಸಂಗಡಿ, ಕಡಂಬಾರ್, ಆನೆಕಲ್ಲು, ತೂಮಿನಾಡು, ಅಲ್ ಫತಾಃ ಜುಮಾ ಮಸೀದಿ ಗಳಲ್ಲಿ ಪೆರ್ನಾಲ್ ನಮಾಜ್ ಹಾಗೂ ಪ್ರವಚನ ಹಾಗೂ ಸಂದೇಶ ನಡೆಯಿತು. ಎಳೆಗೂಸಿನಿಂದ ಹಿಡಿದು ಹಿರಿಯ ಕಿರಿಯರೆಲ್ಲಾ ಮುಸ್ಲಿಂಬಾಂಧವರು ಹೊಸಬಟ್ಟೆಗಳನ್ನು ಧರಿಸಿಕೊಂಡು, ಸುಗಂಧ ಹರಡಿಕೊಂಡು , ಲಘು ಸಿಹಿ ತಿಂಡಿ ಸೇವಿಸಿ ಮಸೀದಿಗೆ ತೆರಳಿ ವಿಶೇಷ ಪ್ರಾರ್ಥಣೆ ಹಾಗೂ ಪ್ರವಚನಗಳಲ್ಲಿ ಬಾಗವಹಿಸಿ ತಮ್ಮ ಸಂತೋಷದ ಜೊತೆ ಬಡವರಿಗೆ ದಾನ, ಧರ್ಮಗಳ ಮೂಲಕ ಹಬ್ಬ ಆಚರಿಸುವಂತೆ ಮಾಡುವುದು ಈ ಹಬ್ಬದ ವಿಶೇಷತೆಯಾಗಿದೆ. ಪವಿತ್ರವಾದ ರಂಜಾನ್ ತಿಂಗಳ ೩೦ ದಿವಸಗಳ ಉಪವಾಸ ವೃತ, ದಾನ ಧರ್ಮಗಳನ್ನು ಮಾಡುತ್ತಾ ಯಾವುದೇ ಕೆಡುಕಿಗೆ ಆಸ್ಪದ ನೀದ ಮುಸಲ್ಮಾನರು ಸಾಕಷ್ಟು ಒಳಿತಿನ ಪುಣ್ಯದ ಕಾರ್ಯಗಳನ್ನು ಮಾಡಿ ತಮ್ಮ ಕುಟುಂಬಗಳೊಂದಿಗೆ ಇಂದು ಈದುಲ್ ಫಿತ್ರ್ ಹಬ್ಬವನ್ನು ಆಚರಿಸಿದರು.

Related posts

Leave a Reply

Your email address will not be published. Required fields are marked *