Header Ads
Header Ads
Header Ads
Header Ads
Header Ads
Header Ads
Breaking News

ಮಂಜೇಶ್ವರದ ಉಪ್ಪಳದಲ್ಲಿ ಬಿಜೆಪಿ ಸರಕಾರದ ಏಕಪಕ್ಷೀಯ ನಿಲುವಿನ ವಿರುದ್ಧ ಸಭೆ

ಮಂಜೇಶ್ವರ: ಜಮ್ಮು ಮತ್ತು ಕಾಶ್ಮೀರ ರಾಜ್ಯದ ವಿನಾಶವನ್ನು ಖಂಡಿಸಿ ಸಂವಿಧಾನದ 370ನೇ ವಿಧಿಯನ್ನು ಸಮರ್ತಿಸಿ ಕೇಂದ್ರವನ್ನಾಳುತ್ತಿರುವ ಬಿಜೆಪಿ ಸರಕಾರದ ಏಕಪಕ್ಷೀಯ ನಿಲುವಿನ ವಿರುದ್ದ ಅಖಿಲ ಭಾರತ ಪ್ರತಿಭಟನಾ ದಿನ ಹಾಗೂ ಸಾರ್ವಜನಿಕ ಸಭೆಯನ್ನು ಉಪ್ಪಳದಲ್ಲಿ ಹಮ್ಮಿಕೊಳಲಾಯಿತು. ಸಾರ್ವಜನಿಕ ಸಭೆಯನ್ನು ಸಿಪಿಎಂ ರಾಜ್ಯ ಕಾರ್ಯದರ್ಶಿ ಕೋಡಿಯೇರಿ ಬಾಲಕ್ರಷ್ಣ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಬಿಜೆಪಿಯು ಹಿಡನ್ ಅಜಂಡಾವನ್ನು ಪೂರ್ಣಗೊಳಿಸಿದೆ. ಬಾಬರಿ ಮಸೀದಿಯನ್ನು ಕೆಡವಿದ ಕೈ ಹಾಗೂ ಗಾಂಧೀಜಿಯನ್ನು ಕೊಂದವರು ಇದೀಗ ಇರುವ ಜಮ್ಮುಕಾಶ್ಮೀರದ370 ನೇ ವಿಧಿಯನ್ನು ರದ್ದುಗಳಿಸಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ ರೀತಿಯಲ್ಲಿ ವಿಜ್ರಂಭಿಸುತಿದ್ದಾರೆ. ಇದನ್ನು ವಿರೋಧಿಸಬೇಕಾದ ಕಾಂಗ್ರೆಸ್ ಮೂಕ ವಿಸ್ಮಿತರಾಗಿ ನೋಡುತ್ತಿದೆ ಎಂದ್ರು. ಇನ್ನು ಈ ಸಂದರ್ಭ ಮಾಜಿ ಸಂಸದ ಪಿ. ಕರುಣಾಕರನ್, ಮಾಜಿ ಶಾಸಕ ಸಿ.ಎಚ್ಚ್ ಕುಂಞಿಂಬು, ಸತೀಶ್ ಚಂದ್ರನ್ , ಸಿ.ಪಿ.ಎಂ ಜಿಲ್ಲಾ ಕಾರ್ಯದರ್ಶಿ ಎಂ.ಬಿ ಬಾಲಕೃಷ್ಣನ್ ಹಾಗೂ ಮತ್ತಿತರರು ಉಪಸ್ಥಿತರಿದ್ರು.

Related posts

Leave a Reply

Your email address will not be published. Required fields are marked *